ಕೂಡ್ಲಿಗಿ : ಬಡವರ ಜೀವನ ನಿರ್ವಹಣೆಗೆ ಆಧಾರವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನುರದ್ದು ಮಾಡಿ, ಕೇಂದ್ರ ಸರ್ಕಾರ ಬಯಸಿದಾಗಷ್ಟೇ ಉದ್ಯೋಗ ನೀಡುವ ವಿಬಿ ಗ್ರಾಮ್ ಜಿ ಯೋಜನೆಯನ್ನು ಜಾರಿ ಮಾಡುತ್ತಿರುವುದು ಖಂಡನೀಯ ಎಂದು ಶಾಸಕ ಡಾ ಶ್ರೀನಿವಾಸ್ ಎನ್ ಟಿ ಹೇಳಿದರು. ತಾಲೂಕಿನ ತಾಯಕನಹಳ್ಳಿಯಲ್ಲಿ ಎಂಜಿನರೇಗಾ ರದ್ದು ಪಡಿಸಿ ವಿಬ್ ಜಿ ಜಾರಿ ಕ್ರಮವನ್ನು ವಿರೋಧಿಸಿ ಹುಡೇಂನಿಂದ ತಾಯಕ್ಕನಹಳ್ಳಿ ಗ್ರಾಮದವರೆಗೂ ಪಾದಯಾತ್ರೆ ಮೂಲಕ ಪ್ರತಿಭಟಿಸಿ ನಂತರ ಮಾತನಾಡಿದರು. ಮನರೇಗಾ ಮರು ಜಾರಿಯಾಗುವವರೆಗೂ ಹೋರಾಟ ಬಿಡಲ್ಲ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜನಪರ ಚಿಂತನೆಯಿಂದ ಜಾರಿಗೊಂಡ ಮನರೇಗಾ ಯೋಜನೆಯಡಿ ಬಡವರು, ಸಣ್ಣರೈತರು, ಮಹಿಳೆಯರಿಗೆ 100 ದಿನಗಳ ಕಾಲ ಕೆಲಸವನ್ನು ಖಾತ್ರಿಪಡಿಸುತ್ತಿತ್ತು. ಬಡವರಿಗೆ ಕೆಲಸದ ಹಕ್ಕು ಸಂವಿಧಾನಬದ್ಧವಾದದ್ದು, ಆದರೆ ವಿಬಿ ಜಿ ರಾಮ್ ಜಿ ಕಾಯ್ದೆಯಿಂದ ಸಂವಿಧಾನಬದ್ದವಾದ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದರು. ಪ್ರತಿ ಪಂಚಾಯತ್ ವರ್ಷಕ್ಕೆ ಸುಮಾರು 1-2 ಕೋಟಿ ರೂ.ಗಳನ್ನು ಪಡೆಯುತ್ತಿತ್ತು ಆದರೆ ಕೇಂದ್ರದ ಹೊಸ ಯೋಜನೆಯಿಂದ…
Author: Team Sanchalana
ಕೂಡ್ಲಿಗಿ: ಕೆರೆಗಳಲ್ಲಿ ಹೂಳೆತುವ ಮೂಲಕ ಪುನಶ್ಚೇತನವು ಪರಿಸರ ಸಮತೋಲನ, ಕೃಷಿ ಬೆಳವಣಿಗೆ ಮತ್ತು ಅಂತರ್ಜಲವನ್ನು ರಕ್ಷಿಸುವ ಅತ್ಯಗತ್ಯ ಪ್ರಕ್ರಿಯೆಯಾಗಿದೆ ಎಂದು ಧ್ರಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಎಚ್ ಡಿ ನವೀನ್ ಕುಮಾರ್ ಹೇಳಿದರು.ತಾಲೂಕಿನ ಬಯಲುತುಂಬರಗುದ್ದಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭೀವೃದ್ಧಿ ಸಂಸ್ಥೆಯಿಂದ ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ಹೊನ್ನಮ್ಮ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಕೆರೆಗಳ ಹೂಳೆತ್ತುವುದು, ಒತ್ತುವರಿ ತೆರವು, ಸುತ್ತಲೂ ಗಿಡ ನೆಡುವುದು ಮತ್ತು ಅಂತರ್ಜಲ ವೃದ್ಧಿಯ ಮೂಲಕ ಕೆರೆಗಳಿಗೆ ಕಾಯಕಲ್ಪ ನೀಡಿ, ಜನಜೀವನ ಸುಧಾರಣೆ ಹಾಗೂ ವನ್ಯಜೀವಿಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲಾಗುತ್ತಿದೆ ಎಂದರು. ಮುಖಂಡರಾದ ಕೆ ಜಗದೀಶ್ ಮಾತನಾಡಿ, ಧರ್ಮಸ್ಥಳ ಸಂಸ್ಥೆಯಿಂದ ಕೆರೆಯಲ್ಲಿ ಹೂಳೆತುವ ಕಾಮಗಾರಿಗೆ ಚಾಲನೆ ನೀಡಿರುವುದು ಸಂತಸದ ಕಾರ್ಯವಾಗಿದೆ, ಎಲ್ಲ ರೀತಿಯಿಂದಲ್ಲೂ ಗ್ರಾಮಸ್ತರ ಸಹಕಾರ ಇರಲಿದೆ ಎಂದರು. ಈ ಸಂದರ್ಭದಲ್ಲಿ ಕೆರೆ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷರಾದ ಕೆ ಮಹಾದೇವಪ್ಪ, ಅಧ್ಯಕ್ಷ ಜಿ ಎಚ್ ವೀರೇಶ್, ಉಪಾಧ್ಯಕ್ಷರಾದ ಎಚ್ ಎಂ…
ಕೂಡ್ಲಿಗಿ : ವಿದ್ಯಾರ್ಥಿ ದಿಸೆಯಲ್ಲಿ ಉತ್ತಮ ಗುರಿಯಿಟ್ಟುಕೊಂಡು ಮುನ್ನಡೆದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು, ಕಾನೂನಿನ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಅರಿವು ಮೂಡಿಸಿಕೊಂಡು ತಮ್ಮ ಪೋಷಕರಿಗೂ ಈ ಬಗ್ಗೆ ತಿಳಿಸಿ ಕೊಡಬೇಕು ಎಂದು ಪಿಎಸ್ಐ ಸಿದ್ದರಾಮಪ್ಪ ಬಿದರಾಣಿ ಹೇಳಿದರು. ತಾಲೂಕಿನ ಕಾನಹೊಸಹಳ್ಳಿಯ ಪೊಲೀಸ್ ಠಾಣೆಗೆ ಕ್ಷೇತ್ರ ಪ್ರವಾಸ ಹಿನ್ನೆಲೆಯಲ್ಲಿ ಹುಲಿಕೆರೆ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸೋಮವಾರ ಭೇಟಿನಿಡಿದ ಸಂದರ್ಭದಲ್ಲಿ ಅವರಿಗೆ ಪೊಲೀಸ್ ಠಾಣೆ ಪರಿಚಯಿಸಿ ಕಾನೂನಿನ ಪಾಠ ಮಾಡಿದರು. ಪೊಲೀಸರ ಬಗ್ಗೆ ಯಾವುದೇ ಭಯ ಬೇಡ, ಭಯವನ್ನು ಹೋಗಲಾಡಿಸಿ ಪೊಲೀಸರೆಂದರೆ ಜನಸ್ನೇಹಿಗಳು, ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವವರು ಎಂದರು. ಮುಖ್ಯ ಶಿಕ್ಷಕಿ ಡಿ ವಿಮಲಾಕ್ಷಿ ಮಾತನಾಡಿ, ಕ್ಷೇತ್ರ ಪರಿಚಯ ವಿದ್ಯಾರ್ಥಿಗಳಿಗೆ ತರಗತಿಯ ಹೊರಗಿನ ಪ್ರಾಯೋಗಿಕ ಕಲಿಕೆಗೆ ಸಹಕಾರಿಯಾಗಿದೆ ಎಂದರು. ಎಎಸ್ಐ ಎಸ್ ಕೆ ಜಿಲಾನ್ ಭಾಷಾ ಮಾತನಾಡಿದರು. 40ಕ್ಕೂ ಹೆಚ್ಚು ಶಾಲಾ ಮಕ್ಕಳು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ, ಪೊಲೀಸರ ದೈನಂದಿನ ಕೆಲಸ, ಗಸ್ತು ತಿರುಗುವಿಕೆ ಮತ್ತು ಇತರ ಕಾರ್ಯಗಳ…
ಸಂಡೂರು; ನಾವು ಸೇವಿಸುವ ಆಹಾರದ ಮೇಲೆ ನಮ್ಮ ಆರೋಗ್ಯ ಅವಲಂಬಿತ. ಆಹಾರ ಪದಾರ್ಥಗಳ ಗುಣಮಟ್ಟ ಮಣ್ಣಿನ ಆರೋಗ್ಯದ ಮೇಲೆ ನಿಂತಿದೆ. ಹೀಗಾಗಿ ಮಣ್ಣು ಮೊದಲು ಸ್ವಸ್ಥ ಅಥವಾ ಸತ್ವಯುತವಾಗಿದ್ದರೆ ಮಾತ್ರ ನಮ್ಮ ಆರೋಗ್ಯವೂ ಸ್ವಸ್ಥ ಆಗಿರುತ್ತದೆ ಎಂದು ಸಾವಯವ ಕೃಷಿಕ ಬಂಡ್ರಿ ದುರುಗಪ್ಪ ಹೇಳಿದರು. ಇವರು ಭಾನುವಾರ ತಾಲ್ಲೂಕಿನ ಬಂಡ್ರಿ ಗ್ರಾಮದ ತಮ್ಮ ಜಮೀನಿನಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ `ಹಸಿರಿನೊಂದಿಗೆ ಮಾತುಕತೆ ಬಳಗ’ ದ 17 ನೇ ಕಾರ್ಯಕ್ರಮದ ಆತಿಥ್ಯವಹಿಸಿ ಮಾತನಾಡಿದರು. ಹೆಚ್ಚಿನ ಇಳುವರಿ ಮತ್ತು ಆರ್ಥಿಕ ಲಾಭದ ದೃಷ್ಟಿಯಿಂದ ಆಧುನಿಕ ಕೃಷಿ ಅಪ್ಪಿಕೊಳ್ಳುತ್ತಿದ್ದೇವೆ. ಆದರೆ ಇದರಲ್ಲಿ ಲಾಭಕ್ಕಿಂತ ನಷ್ಟಗಳೇ ಹೆಚ್ಚು. ಪರಂಪರಾಗತ ಕೃಷಿಯನ್ನು ಅಳವಡಿಸಿಕೊಂಡರೆ ನಮಗೆ ಆರೋಗ್ಯ ಹಾಗೆ ನೆಮ್ಮದಿ ಸಿಗುತ್ತದೆ. ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ರೈತರು ಆರ್ಥಿಕವಾಗಿ ಸಧೃಢವಾಗುತ್ತಾರೆ. ಸಾವಯವದಲ್ಲಿ ಬೆಳೆದ ಆಹಾರ ಉತ್ಪನ್ನಗಳಿಗೆ ಬೇಡಿಕೆ ಇದ್ದು, ಅದನ್ನು ಬಳಸಿಕೊಳ್ಳುವ ಜಾಣತನ, ತಂತ್ರಗಳು ಗೊತ್ತಿರಬೇಕೆಂದರು. ಗಂಗಾವತಿ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪಿ.ಆರ್ ಬದರಿ ಪ್ರಸಾದ್…
ಕೂಡ್ಲಿಗಿ: ತಾಲೂಕಿನ ರಂಗನಾಥನಹಳ್ಳಿಯಿಂದ ನೂರಾರು ಭಕ್ತರು ಶುಕ್ರವಾರ ಶ್ರೀಶೈಲ ಪಾದಯಾತ್ರೆಗೆ ತೆರಳಿದರು. ರಂಗನಾಥನಹಳ್ಳಿ, ಬಯಲುತುಂಬರಗುದ್ದಿ ಹಾಗೂ ಬೆಳಕಟ್ಟೆ ಗ್ರಾಮಗಳ ಭಕ್ತರು ಸತತ 14 ವರ್ಷವೂ ಶ್ರೀ ಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಹೊರಟರು. ಆಯಾ ಗ್ರಾಮಗಳ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿಕೊಂಡು ಬಳಿಕ ರಂಗನಾಥನಹಳ್ಳಿ ಗ್ರಾಮದಿಂದ ಬಸ್ ಮೂಲಕ ತೆರಳಿದರು. ಮಹಾನಂದಿ, ಯಗಂಟಿ ಸೇರಿದಂತೆ ಇತರೇ ದೇವಸ್ಥಾನಗಳ ದರ್ಶನ ಪಡೆದುಕೊಂಡು ನಂತರ ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿ ಕಡಿದಾದ ಗುಡ್ಡಗಳ ನಡುವೇ ಪಾದಯಾತ್ರೆ ಆರಂಭಿಸಿದ್ದಾರೆ. 2 ದಿನಗಳ ನಂತರ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆಯಲ್ಲಿದ್ದಾರೆ. ಮಹಾ ಶಿವರಾತ್ರಿಗೆ ಶ್ರೀ ಶೈಲದಲ್ಲಿ ಮಹಾರಥೋತ್ಸವ ಜರುಗಲ್ಲಿದ್ದು, ಶಿವರಾತ್ರಿಯ ಈ ಸಂದರ್ಭದಲ್ಲಿ ಪಾದಯಾತ್ರೆ ಮಾಡಿದರೆ ಒಳಿತಾಗಲಿದೆ ಎನ್ನುವ ನಂಬಿಕೆಯಿಂದ ವಿವಿಧ ರೀತಿಯಾಗಿ ಹರಕೆ ಹೊತ್ತು ಈ ಭಾಗದಿಂದಲೂ ಸಹ ಪಾದಯಾತ್ರೆ ತೆರಳಲ್ಲಿದ್ದಾರೆ. ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975
ಕೂಡ್ಲಿಗಿ: ಇಲ್ಲಿನ ತಹಶೀಲ್ದಾರ್ ನೇತ್ರಾವತಿ ವಿ ಕೆ ಅವರ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ಸೃಷ್ಟಿಸಿದ್ದು, ಅವರ ಫೋನ್ ಸಂಪರ್ಕದಲ್ಲಿರುವವರಿಗೂ ಹಾಗು ಇತರರಿಗೂ ಸಂದೇಶ ಕಳುಹಿಸುತ್ತಿರುವುದು ಬೆಳಕಿಗೆ ಬಂದಿದೆ. ತಹಶೀಲ್ದಾರ್ ನೇತ್ರಾವತಿ ಅವರ ಡಿಪಿ(ವಾಟ್ಸಾಪ್ ಭಾವಚಿತ್ರ) ಬಳಸಿಕೊಂಡು +84562595170 ಸಂಖ್ಯೆಯಿಂದ ನಕಲಿ ಖಾತೆ ಸೃಷ್ಟಿಸಲಾಗಿದೆ. ಯಾರು ಅದಕ್ಕೆ ಪ್ರತಿಕ್ರಿಯಿಸದಂತೆ ಸ್ವತಃ ತಹಶೀಲ್ದಾರ್ ನೇತ್ರಾವತಿ ವಿ ಕೆ ಅವರೇ ಮನವಿ ಮಾಡಿಕೊಂಡಿದ್ದಾರೆ. ಸೈಬರ್ ವಂಚಕರು ಈ ರೀತಿಯಾಗಿ ನಕಲಿ ಖಾತೆ ಸೃಷ್ಟಿಸಿ ಕೆಲವರಿಗೆ ಮೆಸೇಜ್ ಮಾಡುತ್ತಿದ್ದು ನನ್ನ ಗಮನಕ್ಕೆ ಬಂದಿದೆ. ಹಣ ಕೇಳುವುದಾಗಿ ಅಥವಾ ಇನ್ನು ಯಾವುದೇ ರೀತಿಯಾಗಿ ಸಂದೇಶ ಬಂದರೆ ಯಾರು ಅದಕ್ಕೆ ಪ್ರತಿಕ್ರಿಯಿಸಬೇಡಿ ಎಂದು ನೇತ್ರಾವತಿ ವಿ ಕೆ ಅವರು ತಿಳಿಸಿದ್ದಾರೆ. ಕಳೆದ ವಾರದಲ್ಲಿ ಕೊಟ್ಟೂರು ತಹಶೀಲ್ದಾರ್ ಅಮರೇಶ ಅವರ ಹೆಸರಿನಲ್ಲಿಯೂ ಕೂಡ ನಕಲಿ ಖಾತೆ ಸೃಷ್ಟಿಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿರುವ ಸಂದೇಶ ಕಳುಹಿಸಲಾಗಿತ್ತು ಎನ್ನಲಾಗಿದೆ. ಐಎಎಸ್ ಕೆಎಎಸ್ ಅಧಿಕಾರಿಗಳೇ ಟಾರ್ಗೆಟ್ ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಎಂ ಎಸ್…
ಕೂಡ್ಲಿಗಿ: ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಗೆ ಕ್ಷೇತ್ರಶಿಕ್ಷಣಾಧಿಕಾರಿ ಮಹತ್ವದ ಹೆಜ್ಜೆ ಇಟ್ಟಿದ್ದು, ಮೊಬೈಲ್ ಮತ್ತು ಟಿವಿ ಸ್ವಿಚ್ ಆಪ್ ಮಾಡುವಂತೆ ಡಂಗೂರ ಸಾರಲು ಮುಂದಾಗಿದ್ದಾರೆ. ಕೂಡ್ಲಿಗಿ BEO ಮೈಲೇಶ್ ಬೇವೂರ ಜೆ, ಅವರು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಡಂಗೂರ ಸಾರುವಂತೆ ನಿರ್ದೇಶನ ನೀಡುವಂತೆ ಕೋರಿಕೆ ಮಾಡಿದ್ದಾರೆ. ಸಾಯಂಕಾಲ 7 ರಿಂದ 9 ಗಂಟೆಯವರೆಗೆ ಮೊಬೈಲ್ ಹಾಗೂ ಪೋನ್ ಸ್ವಿಚ್ ಆಪ್ ಮಾಡುವಂತೆ ಡಂಗೂರ ಸಾರಬೇಕು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ. 2025-26ನೇ ಸಾಲಿನ SSLC ಫಲಿತಾಂಶ ಸುಧಾರಣೆಗಾಗಿ ಮಕ್ಕಳು ಓದುವ ಹಿತದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿದ್ದಾರೆ. ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975
ಕೂಡ್ಲಿಗಿ; ತಾಲೂಕಿನ ಕಾನಹೊಸಹಳ್ಳಿಯ ಆರಾಧ್ಯ ದೇವತೆ ಶ್ರೀ ಶಕ್ತಿ ಮಾರಮ್ಮ ದೇವಿಯ ರಥದ ಗಾಲಿಯನ್ನು ಹೊರ ಹಾಕುವ ಮೂಲಕ ಜಾತ್ರೋತ್ಸವಕ್ಕೆ ಮಂಗಳವಾರ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಫೆ.26 ರಂದು ರಥೋತ್ಸವ ಜರುಗಲಿದೆ. ಜಾತ್ರೋತ್ಸವದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ಗುಗ್ಗರಿ ಹಾಕುವ ಕಾರ್ಯಕ್ಕೆ ಚಾಲನೆ ನೀಡಲಾಯಿತು, 287 ಸೇರು ಸಂಗ್ರಹವಾದ ಹುಳ್ಳಿ ಕಾಳುಗಳನ್ನು ಸುಮಾರು 41 ಮಡಿಕೆಗಳಲ್ಲಿ ಬೆರಣಿಯಿಂದ ಬೇಯಿಸಿ ಗುಗ್ಗರಿ ಮಾಡಿದ್ದು ವಿಶೇಷವಾಗಿತ್ತು. ಮಂಗಳವಾರ ಬೆಳಗಿನ ಜಾವಾ ಗ್ರಾಮದ ಎಲ್ಲಾ ದೇವಸ್ಥಾನಗಳಿಗೆ ಗುಗ್ಗರಿ ನೈವೇದ್ಯ ಅರ್ಪಿಸಿ, ದೈವಸ್ಥರಿಗೆ ವಿತರಿಸಲಾಯಿತು. ನಂತರ ಸಕಲ ವಾಧ್ಯಗಳ ಮೂಲಕ ರಥದ ಮನೆಯಿಂದ ದೇವಿಯ ರಥದ ಗಾಲಿ(ಗಡ್ಡೆ) ಯನ್ನು ಹೊರ ಹಾಕುವ ಮೂಲಕ ಜಾತ್ರೋತ್ಸವಕ್ಕೆ ಅದ್ದೂರಿ ಚಾಲನೆ ದೊರೆಯಿತು. ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಗ್ರಾಮಸ್ಥರು ಸೇರಿದಂತೆ ಅಪಾರ ಭಕ್ತರ ಸಮ್ಮುಖದಲ್ಲಿ ರಥದ ಗಾಲಿಗೆ ವಿಧಿ ವಿಧಾನಗಳಂತೆ ಪೂಜೆ ಸಲ್ಲಿಸಿಲಾಯಿತು. ಒಂದು ತಿಂಗಳಿಗೂ ಹೆಚ್ಚು ಕಾಲ ಜಾತ್ರೋತ್ಸವ ಅದ್ದೂರಿಯಾಗಿ ನಡೆಯಲ್ಲಿದ್ದು ಫೆ.10 ರಂದು ಕೋಟೆಗೆ…
ಕೂಡ್ಲಿಗಿ: ಕೆರೆ ಹಾಗೂ ಮಣ್ಣು ಸಂರಕ್ಷಣೆ ಅತಿ ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಬಯಲುತುಂಬರಗುದ್ದಿ ಕೆರೆ ಅಭಿವೃಗೆ ಒತ್ತು ನೀಡಲಾಗಿದೆ ಎಂದು ತಾಲೂಕು ಯೋಜನಾಧಿಕಾರಿ ನವೀನ್ ಕುಮಾರ್ ಎಚ್ ಡಿ ಹೇಳಿದರು. ತಾಲೂಕಿನ ಬಯಲುತುಂಬರಗುದ್ದಿ ಗ್ರಾಮದಲ್ಲಿ ಶನಿವಾರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ʼನಮ್ಮ ಊರು ನಮ್ಮ ಕೆರೆʼ ಕಾರ್ಯಕ್ರಮದಲ್ಲಿ ಹೊನ್ನಮ್ಮ ಕೆರೆ ಹೂಳೆತುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು, ಪ್ರತಿ ಹಳ್ಳಿಗಳ ಅಭಿವೃದ್ಧಿಗೆ ಕೆರೆಗಳೇ ಮೂಲ ಆಧಾರವಾಗಿವೆ, ಹಾಗಾಗಿ ಪ್ರತಿ ಹಳಿಗಳ ಕೆರೆ ಜೀರ್ಣೋಧರಕ್ಕೆ ಸಂಸ್ಥೆಯ ಕಡೆಯಿಂದ ಹೆಚ್ಚು ಮುತುವರ್ಜಿ ವಹಿಸಿ ಆಧ್ಯತೆ ನೀಡಲಾಗಿದೆ ಎಂದ ಅವರು, ಕೆರೆ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಹೂಳೆತುವ ಕಾಮಗಾರಿಗೆ ಮೊದಲು ಚಾಲನೆ ನೀಡಲಾಗುವುದು ಈ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರ ಅಗತ್ಯವಾಗಿದ್ದು, ನಿಮ್ಮೆಲ್ಲಾರ ಸಹಕಾರದಿಂದ ಸುಂದರ ಕೆರೆ ನಿರ್ಮಾಣಕ್ಕೆ ಪಣ ತೊಡೋಣ ಎಂದರು. ಮುಖಂಡರಾದ ಕೆ ಜಗದೀಶ್, ಸರ್ಕಾರಿ ಶಾಲಾ ಮುಖ್ಯ ಶಿಕ್ಷಕ ವೀರೇಶ್ ಮಾತನಾಡಿದರು. ಇದೆ ಸಂದರ್ಭದಲ್ಲಿ ಕೆರೆ ಸಂರಕ್ಷಣಾ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ…
ಕೂಡ್ಲಿಗಿ: ಗುಡೆಕೋಟೆ ಉತ್ಸವದ ಲಾಂಛನವನ್ನ ಶಾಸಕ ಡಾ ಶ್ರೀನಿವಾಸ್ ಎನ್ ಟಿ ಅವರು ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಡುಗಡೆಗೊಳಿಸಿದರು. ಜನವರಿ 31, ಫೆಬ್ರವರಿ 1ರಂದು ಗುಡೆಕೋಟೆಯಲ್ಲಿ ನಡೆಯುವ ಒನಕೆ ಓಬವ್ವ ಉತ್ಸವ (ಗುಡೇಕೋಟೆ ಉತ್ಸವ) ಕಾರ್ಯಕ್ರಮದ ಅಂಗವಾಗಿ ಲಾಂಛನ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಈ ನೆಲದ ಗತವೈಭವವನ್ನು ಸಾರುವ ಒನಕೆ ಓಬವ್ವನ ಉತ್ಸವವು ನಾಡ ಹಬ್ಬವಿದ್ದಂತೆ. ಆದ್ದರಿಂದ ವಿಜೃಂಭಣೆಯಿಂದ, ವಿನೂತನವಾಗಿ ಸ್ಥಳೀಯರ ಸಹಕಾರದೊಂದಿಗೆ ಅದ್ದೂರಿಯಾಗಿ ಆಚರಿಸೋಣ ಎಂದ ಅವರು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಾರಿಗೆ ಮತ್ತು ಮೂಲಸೌಕರ್ಯ ಒದಗಿಸಲಾಗುವುದು, ಫೆಬ್ರವರಿ 1 ರಂದು ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ವಿ. ಕೆ ನೇತ್ರಾವತಿ, ತಾ.ಪಂ. ಇಒ ನರಸಪ್ಪ, ಗುಡೆಕೋಟೆಯ ಹಿರಿಯ ಮುಖಂಡರಾದ ರಾಘವೇಂದ್ರರಾವ್, ಗ್ರಾ. ಪಂ. ಅಧ್ಯಕ್ಷರ ಕೃಷ್ಣ, ಶಿವಪ್ರಸಾದ್ ಗೌಡ ಸೇರಿದಂತೆ ಪ್ರಮುಖ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ ಅಜಯ್ 8123302594, ದಯಾನಂದ್ ಸಜ್ಜನ್ 9886972975
