ಕೂಡ್ಲಿಗಿ; 1 ಕೆಜಿ ಬಂಗಾರದ ಆಸೆ ತೋರಿಸಿ 30 ಲಕ್ಷ ವಂಚನೆ ಮಾಡಿದ್ದ ಪ್ರಕರಣ ಭೇದಿಸಿ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಕಾನಹೊಸಹಳ್ಳಿಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಲಿಂಗನಹಳ್ಳಿ ಕೊರಚರಹಟ್ಟಿಯ ಸುರೇಶ್(ರಮೇಶ್), ಸೋಮಣ್ಣ ಬಂಧಿತರು.
ತಾಲೂಕಿನ ಕ್ಯಾಸನಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಈ ಇಬ್ಬರು ಜನವರಿ 28 ರಂದು ಚೆನೈನಾ ಅಯ್ಯಾಪಾಕಂನ ನಿವಾಸಿ ಜಿ ಕುಮಾರಸ್ವಾಮಿ ಎಂಬುವರಿಗೆ ನಮ್ಮ ಮನೆಯ ಪಾಯ ತಗೆಯುವಾಗ 1 ಕೆಜಿ ಬಂಗಾರ ಸಿಕ್ಕಿದ್ದು ಅದನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿದ್ದಾರೆ.
ನಂತರ ಕ್ಯಾಸನಕೆರೆ ಬಳಿ ಅರಣ್ಯ ಪ್ರದೇಶಕ್ಕೆ ಕರೆಸಿಕೊಂಡು ಆತನನ್ನು ಜೋರಾಗಿ ದೂಡಿ ಆತನ ಬಳಿಯಿದ್ದ ₹30 ಲಕ್ಷ ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದರು. ಪಿರಿಯದುದಾರರು ಭಯಗೊಂಡು ತಡವಾಗಿ ಮಾರ್ಚ್ 14ರಂದು ದೂರು ನೀಡಿದ್ದರು. ದೂರು ಆಧರಿಸಿದ ಪೊಲೀಸರು ಅವರ ಫೋನ್ ಸಂಖ್ಯೆಯ ಮೂಲಕ ಟ್ರೇಸ್ ಮಾಡಿ ಪ್ರಕರಣ ದಾಖಲಾದ ಒಂದೇ ವಾರದಲ್ಲಿ ಮಾರ್ಚ್ 21ರಂದು ಅವರನ್ನು ಬಂಧಿಸಿ ಅವರ ಬಳಿಯಿದ್ದ ₹29,50, 000 ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಜಯನಗರ ಎಸ್ಪಿ ಜಾನ್ಹವಿ ಎಸ್, ಎಎಸ್ಪಿ ಮಂಜುನಾಥ್, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಕೊಟ್ಟೂರು ಸಿಪಿಐ ಡಿ ದುರುಗಪ್ಪ ಹಾಗೂ ಕಾನಹೊಸಹಳ್ಳಿಯ ಪಿಎಸ್ಐ ಸಿದ್ರಾಮ್ ಬಿದಾರಾಣಿ ನೇತೃತ್ವದಲ್ಲಿ ಸಿಬ್ಬಂದಿ ಅಂಜನಮೂರ್ತಿ, ಎನ್ ಎಂ ಸ್ವಾಮಿ, ವಿಜಯಕುಮಾರ್, ಬಿ ಎಸ್ ಮಂಜುನಾಥ್, ಕೃಷ್ಣಪ್ಪ, ಯು ಸುರೇಶ್, ಕೊಟ್ರೇಶ್ ಅಂಗಡಿ, ಸಿದ್ದಲಿಂಗಪ್ಪ ಕೆ, ಸಂದೀಪ್ ಎಂ, ಬಿಳಿಚೋಡು ಮಾಲತೇಶ್, ಗೌಡ್ರು ರವಿಚಂದ್ರ, ಕೃಷ್ಣನಾಯಕ, ಕುಮಾರನಾಯಕ ಒಳಗೊಂಡ ತಂಡ ಕಾರ್ಯಚರಣೆ ನಡೆಸಿದೆ. ಪ್ರಕರಣ ಭೇದಿಸಿದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಾನ್ಹವಿ ಎಸ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

