ಕೂಡ್ಲಿಗಿ ; ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಯುತ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿನಾಂಕ; 18-05-2026 ರಂದು, ರಂಗನಾಥಹಳ್ಳಿ ಗ್ರಾಮದಲ್ಲಿ ಸಿ.ಸಿ. ರಸ್ತೆ ನಿರ್ಮಾಣ ( 10 -ಲಕ್ಷಗಳು), ಹಾಗೂ ರಂಗನಾಥ ಹಳ್ಳಿ ಗ್ರಾಮದ ಮುಖ್ಯ ರಸ್ತೆಯಿಂದ ನಿಂಬಳಗೆರೆಗೆ ಹೋಗುವ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ( 490 ಲಕ್ಷಗಳು) ಭೂಮಿಪೂಜೆಯನ್ನು ನೆರವೇರಿಸಿದರು.
ಮಾನ್ಯ ಶಾಸಕರು ರಂಗನಾಥಹಳ್ಳಿ ಗ್ರಾಮದ ವಿವಿಧ ಓಣಿಗಳನ್ನು ಸುತ್ತುವ ಮೂಲಕ ಖುದ್ದಾಗಿ ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ಮಾಡಿ, ಈ ಸಂದರ್ಭದಲ್ಲಿ ಶಾಸಕರ ನಿಧಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಸಮಸ್ಯೆಗಳಿಗೆ ನಾನು ಎದುರಿ ಓಡಿ ಹೋಗುವವನು ಅಲ್ಲ. ನಮ್ಮ ಸರ್ಕಾರದ ಸಹಕಾರದೊಂದಿಗೆ ಅಂತಹ ಸಮಸ್ಯೆಗಳಿಗೆ ಪರಿಹಾರ ಕೊಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶೇಟು ನಾಗರಾಜ, ಅಜ್ಜಪ್ಪ ನೀರಘಂಟಿ, ಕುಮಾರ್ ಸ್ವಾಮಿ, ಶೇಖರಪ್ಪ, ರಾಜಪ್ಪ ವಿ, ಬಸವರಾಜಪ್ಪ ವಿ, ಶ್ರೀನಿವಾಸ್. ಬಿ. ಪಿ, ವಿರೇಶ ಪತ್ರಯ್ಯ, ರೇವಣ್ಣ, ಕಲ್ಲೇಶ, ಚಿನ್ನಾಪುರ ಸಿದ್ದೇಶ, ಊರಿನ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ದಿಗಾಗಿ ಸಂಪರ್ಕಿಸಿ
ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

