ಕೂಡ್ಲಿಗಿ: ಗುಡೆಕೋಟೆ ಉತ್ಸವದ ಲಾಂಛನವನ್ನ ಶಾಸಕ ಡಾ ಶ್ರೀನಿವಾಸ್ ಎನ್ ಟಿ ಅವರು ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಡುಗಡೆಗೊಳಿಸಿದರು.

ಜನವರಿ 31, ಫೆಬ್ರವರಿ 1ರಂದು ಗುಡೆಕೋಟೆಯಲ್ಲಿ ನಡೆಯುವ ಒನಕೆ ಓಬವ್ವ ಉತ್ಸವ (ಗುಡೇಕೋಟೆ ಉತ್ಸವ) ಕಾರ್ಯಕ್ರಮದ ಅಂಗವಾಗಿ ಲಾಂಛನ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಈ ನೆಲದ ಗತವೈಭವವನ್ನು ಸಾರುವ ಒನಕೆ ಓಬವ್ವನ ಉತ್ಸವವು ನಾಡ ಹಬ್ಬವಿದ್ದಂತೆ. ಆದ್ದರಿಂದ ವಿಜೃಂಭಣೆಯಿಂದ, ವಿನೂತನವಾಗಿ ಸ್ಥಳೀಯರ ಸಹಕಾರದೊಂದಿಗೆ ಅದ್ದೂರಿಯಾಗಿ ಆಚರಿಸೋಣ ಎಂದ ಅವರು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಾರಿಗೆ ಮತ್ತು ಮೂಲಸೌಕರ್ಯ ಒದಗಿಸಲಾಗುವುದು, ಫೆಬ್ರವರಿ 1 ರಂದು ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಿ. ಕೆ ನೇತ್ರಾವತಿ, ತಾ.ಪಂ. ಇಒ ನರಸಪ್ಪ, ಗುಡೆಕೋಟೆಯ ಹಿರಿಯ ಮುಖಂಡರಾದ ರಾಘವೇಂದ್ರರಾವ್, ಗ್ರಾ. ಪಂ. ಅಧ್ಯಕ್ಷರ ಕೃಷ್ಣ, ಶಿವಪ್ರಸಾದ್ ಗೌಡ ಸೇರಿದಂತೆ ಪ್ರಮುಖ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

