ಕೂಡ್ಲಿಗಿ: ಪರಿಸರ ಅಸಮತೋಲನದಿಂದ ಪ್ರಸುತ್ತವಾಗಿ ಹಲವು ಎದರಿಸಬೇಕಾದ ಅನಿವಾರ್ಯತೆ ಇದೆ, ಇದಕ್ಕೆ ಪ್ರತಿಯಾಗಿ ಪ್ರತಿಯೊಬ್ಬರು ಒಂದು ಗಿಡ ನೆಡುವ ಮೂಲಕ ಪ್ರಕೃತಿಯ ಸಂರಕ್ಷಣೆ ಕೈಜೋಡಿಸಬೇಕೆಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಕಾನಹೊಸಹಳ್ಳಿ ಸಮೀಪದ ಚಿಕ್ಕಜೋಗಿಹಳ್ಳಿಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಮ್ಮನಿಗಾಗಿ ಒಂದು ಗಿಡ ಎಂಬ ಅಭಿಯಾನಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ನಂತರ್ ನಡೆದ ವೇದಿಕೆಯಲ್ಲಿ ಮಾತನಾಡಿದರು.
ಸಾವಿರ ಮಕ್ಕಳಿಂದ ಸಾವಿರ ಗಿಡಗಳನ್ನು ಹಾಕಿದ್ದು ಐತಿಹಾಸಿಕ ಕ್ಷಣವಾಗಿದೆ. ವಿಜಯನಗರ ಸಾಮ್ರಾಜ್ಯವು ಐದು ಶತಮಾನಗಳ ಹಿಂದೆ ಪ್ರಕೃತಿವಾಗಿ, ಅರ್ಥಿಕವಾಗಿ ಏμÉ್ಟೂಂದು ಶ್ರೀಮಂತವಾಗಿತ್ತೆಂಬುದನ್ನು ಹೇಳಿದ್ದೆವೆ ನೋಡಲು ಸಾಧ್ಯವಾಗುತ್ತಿಲ್ಲ. ಈ ನೆಲದಲ್ಲಿ ವಿಯಾವಾಕಿ ಕಾಡುಕೃಷಿಕ ಡಾ.ಆರ್.ಕೆ.ನಾಯರ್ ನೇತೃತ್ವದಲ್ಲಿ ಹಸಿರು ಮೂಡಿಸುವ ಪ್ರಯತ್ನವಾಗಿ 2ವರ್ಷದಲ್ಲಿ 1ಲಕ್ಷ ಗಿಡಗಳು ಗುರಿ ಹೊಂದಲಾಗಿದೆ. ಪ್ರತಿದಿನವು ಒಬ್ಬೊಬ್ಬರು ಸಸಿ ನೆಡಿ ಎಂದು ಪ್ರಧಾನಿ ಹೇಳುತ್ತಾರೆ. ಕೃಷಿಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಪ್ರತಿ ಕಾರ್ಯಕ್ರಮದಲ್ಲೂ ಸಸಿಗಳನ್ನು ನೆಡುತ್ತಾರೆಂದು ಸ್ಮರಿಸಿದರು, ಅನೇಕ ರೈತರು ನಮ್ಮ ಜಮೀನಿನಲ್ಲೂ ಸಸಿಗಳನ್ನು ನೆಡಬೇಕೆಂದು ನನಗೆ ಹೇಳಿದ್ದು ಸಂತೋಷವಾಯಿತು ಎಂದರು.
ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ತಾಲೂಕಿನಲ್ಲಿ ಶೇ.80ರಷ್ಟು ಭೂಮಿ ಇದ್ದು, ಗುಳೆ ಹೋಗುವುದನ್ನು ತಪ್ಪಿಸುವುದು ಮೂಲ ಆಶಯದಿಂದ ಕಾಡು ಕೃಷಿಗೆ ಅಧ್ಯತೆ ನೀಡಿದ್ದು, ಪರಿಸರ ಉಳಿಸಲು ಎಲ್ಲರೂ ಕಟಿಬದ್ಧರಾಗಬೇಕು. ತಾಲೂಕಿನಲ್ಲಿ 1ಸಾವಿರ ಎಕರೆಯಷ್ಟು ಅರಣ್ಯ ಮಾಡುವ ಮೂಲಕ ಪ್ರಪಂಚದಲ್ಲೇ ದೊಡ್ಡ ಕಾಡು ಮಾಡಬೇಕಿದೆ. ತಾಲೂಕಿಗೆ ತಾಯಿ ಪ್ರೀತಿ ನೀಡಿದ ಸಚಿವೆಗೆ ಋಣಿಯಾಗಿದೆ. 50ಎಕರೆ ಜಾಗದಲ್ಲಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಅನುಮೋದನೆ ರಾಜ್ಯ ಸರಕಾರ ನೀಡಿದೆ. ಕೇಂದ್ರ ಸರಕಾರದಿಂದ ಕೃಷಿ ವಿಜ್ಞಾನ ಕೇಂದ್ರಕ್ಕೆ ಅನುಮೋದನೆ ನೀಡಲು ಕ್ರಮಕೈಗೊಳ್ಳಬೇಕು. ಎಂದರು. ಅಲ್ಲದೆ,ಡಾ.ಆರ್.ಕೆ.ನಾಯರ್ ಅವರ ಬದ್ಧತೆ ಕಲಿಯಬೇಕಿದೆ ತಿಳಿಸಿದರು.
ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಡಾ.ಆರ್.ಕೆ.ನಾಯರ್ ಮಾತನಾಡಿ, ಸಾವಯವ ಕೃಷಿ ಯೋಜನೆಯ ಮೂಲಕ ಪ್ರಕೃತಿಯ ಸಂರಕ್ಷಣೆ ಜತೆಗೆ ಕೃಷಿಯ ಲಾಭದಾಯಕವಾಗುವುದು, ರಾಸಾಯನಿಕ ಕೃಷಿಯಿಂದ ಭೂಮಿ ಹಾಳಾಗಿದೆ. ಭೂಮಿಯು ಅಮ್ಮನಂತೆ ಎಲ್ಲವನ್ನೂ ಕೊಟ್ಟಿದೆ. ಕಾಡು ಕೃಷಿಯಿಂದ ಸೂಕ್ಷ್ಮಾಣು ಜೀವಿಗಳಿಗೆ ಅನುಕೂಲವಾಗಲಿದೆ. 3-4ಕಂಪನಿಗಳು ಕೂಡ್ಲಿಗಿಗೆ ಬರುವಂತಾಗಲು ಈ ಯೋಜನೆ ರೂಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವರು ಐದು ಸ್ವಹಾಯ ಸಂಘಗಳಿಗೆ ತಲಾ 5ಲಕ್ಷ ರೂ ಚೆಕ್ ವಿತರಿಸಿದರು. ಆರಂಭದಲ್ಲಿ ನೆರೆದ ಜನಸಮೂಹಕ್ಕೆ ಕನ್ನಡದಲ್ಲಿ ಪರಿಸರ ದಿನಾಚರಣೆ ಶುಭಾಶಯ ಕೋರಿದರು ನಂತರ ಗ್ರಾಪಂ ಕಚೇರಿಗೆ ತೆರಳಿ ಅಲ್ಲಿ ಸ್ವ ಸಹಾಯ ಸಂಘದ ಸದಸ್ಯರೊಂದಿಗೆ ಸಮಲೋಚನೆ ನಡೆಸಿದರು.
ಈ ವೇದಿಕೆಯಲ್ಲಿ ವಿಜಯ್ ರಂಜನ್ ಸಿಂಗ್, ಎಸ್ಬಿಐನ ರಾಜ್ಯ ಮುಖ್ಯ ಜನರಲ್ ಮ್ಯಾನೇಜರ್ ಜೂಲಿ ಸ್ಮೀತಾ ಸಿನ್ಹಾ, ಹಣಕಾಸು ಇಲಾಖೆ ಅನಿರುದ್ಧ ಶ್ರವಣ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ನೊಂಗ್ಜಾಯ್ ಮಹಮ್ಮದ್ ಅಕ್ರಮ್ ಅಲಿ ಷಾ, ಎಸ್ಪಿ ಎಸ್.ಜಾಹ್ನವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ಬಿಡಿಸಿಸಿಬ್ಯಾಂಕ್ ಅಧ್ಯಕ್ಷ ಗುಂಡುಮುಣಗು ಕೆ.ತಿಪ್ಪೇಸ್ವಾಮಿ, ಎಪಿಎಂಸಿ ಅಧ್ಯಕ್ಷ ಬೋಸಯ್ಯ ಆಯುಕ್ತ ವಿವೇಕಾನಂದ ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಬಿಇಒ ಮೈಲೇಶ್ ಬೇವೂರ್, ತಾಪಂ ಇಒ ನರಸಪ್ಪ, ತೋಟಗಾರಿಕಾ ಸಹಾಯಕ ನಿರ್ದೇಶಕ ಕುಬೇರಾಚಾರಿ,ಬಿಸಿಎಂ ಅಧಿಕಾರಿ ಶ್ಯಾಮಪ್ಪ, ಪಿಡಿಓ ಭರತ್ ಕುಮಾರ್, ತೋಟಗಾರಿಕೆ ಅಧಿಕಾರಿ ಶಿವಕುಮಾರ್ ಇದ್ದರು.
ಸುದ್ದಿಗಾಗಿ ಸಂಪರ್ಕಿಸಿ
ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

