Author: Team Sanchalana

ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಬಳ್ಳಿ ಶುಕ್ರವಾರ ಬೆಳಗಿನ ಜಾವಾ ಈಶರ್ ಗಾಡಿಗೆ ಲಾರಿ ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟಿದ್ದಾರೆ. ಗದಗ ಮೂಲದ ರೈತ ರಂಗಪ್ಪ, ಚಾಲಕ ಗಣೇಶ್ ಮೃತರು, ಗದಗದಿಂದ ಬೆಳೆದ ಉಳ್ಳಾಗಡ್ಡಿ ಬೆಳೆಯನ್ನು ಯಲಹಂಕಕ್ಕೆ ಮಾರಾಟಕ್ಕೆ ಕೊಂಡೋಯ್ಯುತ್ತಿದ್ದ ರೈತ ರಂಗಪ್ಪ, ಮತ್ತು ಚಾಲಕ ಗಣೇಶ್, ಈಶರ್ ಗಾಡಿಯ ಟೈಯರ್ ಬ್ಲಾಸ್ಟ್ ಆದ ಕಾರಣ, ಇಳಿದು ನೋಡುತ್ತಿದ್ದಾಗ ಅವಘಡ ಜರುಗಿದೆ. ಹಿಂಬದಿಯಿಂದ ಬಂದ ಲಾರಿ ಗುದ್ದಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಸ್ಥಳ್ಳಕ್ಕೆ ಕಾನಾಹೊಸಳ್ಳಿ ಪಿಎಸ್iಐ ಸಿದ್ರಾಮಪ್ಪ ಬಿದರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕೂಡ್ಲಿಗಿ; ತಾಲೂಕಿನ ಹಾರಕಭಾವಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಮಂಗಳವಾರ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ರಮೇಶ್ ಎಚ್, ಉಪಾಧ್ಯಕ್ಷರಾಗಿ ಗೋಲಾರ ಸಿದ್ದಪ್ಪ ಆಯ್ಕೆಯಾದರು, ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 12 ನಿರ್ದೇಶಕರ ಪೈಕಿ ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಎಚ್, ಉಪಾಧ್ಯಕ್ಷ ಸ್ಥಾನಕ್ಕೆ ಗೋಲಾರ ಸಿದ್ದಪ್ಪ ಹೊರತಾಗಿ ಬೇರೆ ಯಾರು ನಾಮಪತ್ರ ಸಲ್ಲಿಸದೇ ಇದದ್ದರಿಂದ ಚುನಾವಣಾಧಿಕಾರಿ ನಾಗರಾಜ್ ಇಬ್ಬರ ಆಯ್ಕೆಯನ್ನು ಅವಿರೋಧವಾಗಿ ಘೋಷಿಸಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಮಂಜುನಾಥ್‌ ಕಾರ್ಯನಿರ್ವಹಿಸಿದರು. ನಿರ್ದೇಶಕರಾದ ಎಸ್ ಜಾತಪ್ಪ, ಪಿ ಅಜಯ, ನಾಗೇಂದ್ರಪ್ಪ, ಸಿ ಈಶ್ವರಪ್ಪ, ತಿಪ್ಪೇಸ್ವಾಮಿ, ಕೊಟ್ರೇಶ್ ಎಸ್, ಹಂಪಣ್ಣ, ಡಿ ಶೃತಿ ಪ್ರಕಾಶ್, ಗೌರಮ್ಮ ಮದನಪ್ಪ , ಮೋಗಪ್ಪ, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಂ ತಿಪ್ಪೇಸ್ವಾಮಿ ಹಾಜರಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೋಟಿಲಿಂಗನಗೌಡ, ಮಾಜಿ ಉಪಾಧ್ಯಕ್ಷ ಡಿ ಶೇಖರಪ್ಪ ಮುಖಂಡರಾದ ರಮೇಶ್ ಗೌಡ, ಟಿ ಜಿ ಮಲ್ಲಿಕಾರ್ಜುನ ಗೌಡ, ಎಂ ಬಿ ಅಯ್ಯನಹಳ್ಳಿ ಅಜ್ಜನಗೌಡ, ಕಾನಹೊಸಹಳ್ಳಿ…

Read More

ಕೂಡ್ಲಿಗಿ ; ಶಾಲೆಗಳು ಧಾರ್ಮಿಕ ಕೇಂದ್ರಗಳಾಗದೆ, ಮಕ್ಕಳಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸುವ ಕೇಂದ್ರಗಳಾಗಲಿ ಎಂದು ಶಾಸಕ ಡಾ ಶ್ರೀನಿವಾಸ್ ಎನ್ ಟಿ ಹೇಳಿದರು. ತಾಲೂಕಿನ ಕಾನಹೊಸಹಳ್ಳಿಯ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದಲ್ಲಿ ನಡೆಯುತ್ತಿರುವ ಕೆಲ ಘಟನೆಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿವೆ, ಇವುಗಳು ಆಗಬಾರದು ಎಂದರೆ ವೈಜ್ಞಾನಿಕ ಚಿಂತನೆ ಅಗತ್ಯವಾಗಿದೆ. ಮಕ್ಕಳ ನಮ್ಮಂತೆ ಆಗಬಾರದು ಉತ್ತಮ ಪ್ರಜೆಗಳಾಗಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ೭ ಕೆಪಿಎಸ್ಸಿ ಶಾಲೆಗಳನ್ನು ಮಂಜೂರು ಮಾಡಲಾಗಿದೆ , ಅದರ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ದೊರಯಲಿದೆ ಎಂದರು. ಸಹಾಯಕ ಆಯುಕ್ತರಾದ ವಿವೇಕಾನಂದ ಮಾತನಾಡಿ, ಸರ್ಕಾರಿ ಶಾಲಾ- ಹಾಸ್ಟೇಲ್ಗಳಲ್ಲಿ ಇತ್ತೀಚೆಗೆ ಗುಣಮಟ್ಟ ಹೆಚ್ಚಾಗಿದೆ. ಈ ಭಾಗದಲ್ಲಿ ಶಿಕ್ಷಣ ಆರೋಗ್ಯಕ್ಕೆ ಒತ್ತು ನೀಡಲಾಗಿದೆ , ಸೀಟ್ ಬೇಡಿಕೆ ಹೆಚ್ಚಿಸಲು ಶಾಸಕ ಶ್ರೀನಿವಾಸ್ ಹೇಳಿದ್ದರು, ಅದರಂತೆ ಮಾಡಲಾಗಿದೆ ಎಂದ ಅವರು,…

Read More

ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿಯ ಬಾಲಕಿಯರ ವಸತಿ ನಿಲಯಕ್ಕೆ ತಹಶೀಲ್ದಾರ್ ನೇತ್ರಾವತಿ ವಿ ಕೆ ಅವರು ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಕುಂದುಕೊರತೆ ವಿಚಾರಿಸಿದರು. ಸಮಯ ವ್ಯರ್ಥ ಮಾಡದೆ ಉತ್ತಮವಾಗಿ ವ್ಯಾಸಂಗ ಮಾಡಬೇಕೆಂದು ಕಿವಿಮಾತು ಹೇಳಿದರು. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತವಾಗಿ ಇರಬೇಕಾದ ಸೌಕರ್ಯಗಳು, ಆಹಾರದ ಗುಣಮಟ್ಟ, ಶೌಚಾಲಯಗಳ ಶುಚಿತ್ವದ ಬಗ್ಗೆ ಅವರು ಪರಿಶೀಲಿಸಿದ ನಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಬೇಕು. ಅವರ ಆರೋಗ್ಯದ ಕಡೆಗೆ ಗಮನಹರಿಸಬೇಕು. ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ವಸತಿ ನಿಲಯದಲ್ಲಿರುವ ಸಣ್ಣ ಪುಟ್ಟ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ ಅಜಯ್ 8123302594, ದಯಾನಂದ್ ಸಜ್ಜನ್ 9886972975

Read More

ಕೂಡ್ಲಿಗಿ ; ಬಯಲುಸೀಮೆಯ ಶಿಕ್ಷಣಕಾಶಿ ಎಂದೇ ಪ್ರಸಿದಿಯಾದ ತಾಲೂಕಿನ ಕಾನಮಡಗು ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ಭಾನುವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ, ಭಕ್ತಿಯಿಂದ ಸಂಭ್ರಮದಿಂದ ನೆರವೇರಿತು. ಶರಣಬಸವೇಶ್ವರರ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಸಕಲ ಪೂಜಾವಿಧಿ ವಿಧಾನಗಳೊಂದಿಗೆ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥ ಮುಂದೆ ಸಾಗುತ್ತಿದಂತೆ ಭಕ್ತರು ಜಯಘೋಷ ಹಾಕಿ, ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಧರ್ಮಾಧಿಕಾರಿ ಐಮಡಿ ಶರಣಾರ್ಯರು, ಚನ್ನಗಿರಿಯ ಕೇದಾರಲಿಂಗ ಶಿವಾಚಾರ್ಯ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ ನೇತೃತ್ವದಲ್ಲಿ ರಥಕ್ಕೆ ಪೂಜೆ ಸಲ್ಲಿಸಲಾಯಿತು. ರಥದ ಮುಕ್ತಿಪಠವನ್ನು ₹ 1,01101 ಲಕ್ಷಕ್ಕೆ ಮೆಟ್ರಿಕುರ್ಕಿ ತಿಪ್ಪೇಸ್ವಾಮಿ ಹರಾಜಿನಲ್ಲಿ ಪಡೆದುಕೊಂಡರು. ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಕಾರ್ತಿಕ ಮಾಸದಲ್ಲಿ ರಥೋತ್ಸವ ನಡೆಯವುದು ಇಲ್ಲಿನ ವಿಶೇಷವಾಗಿದ್ದು, ರಥೋತ್ಸವಕ್ಕೂ ಮುನ್ನ ಮಠದ ಆವರಣದಲ್ಲಿ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿತ್ತು. ಕೊಟ್ಟೂರು ಸಿಪಿಐ ದುರುಗಪ್ಪ, ಪಿಸ್ಐ ಸಿದ್ರಾಮಪ್ಪ ಬಿದಾರಾಣಿ…

Read More

ಕೂಡ್ಲಿಗಿ: ಕ್ಷೇತ್ರದ ಜನರಲ್ಲಿನ ಮೌಡ್ಯತೆ ಹಾಗೂ ಶಿಕ್ಷಣದ ಕೊರತೆಯನ್ನು ದೂರಮಾಡಲು ಪೂಜಾರಹಳ್ಳಿ ಸೇರಿದಂತೆ ಕ್ಷೇತ್ರದಲ್ಲಿ ೩ ಕೆಪಿಎಸ್ಸಿ ಶಾಲೆಗಳನ್ನು ಮಂಜೂರು ಮಾಡಲಾಗಿದೆ ಎಂದು ಶಾಸಕ ಡಾ ಶ್ರೀನಿವಾಸ್ ಎನ್ ಟಿ ಹೇಳಿದರು. ತಾಲೂಕಿನ ಪೂಜಾರಹಳ್ಳಿಯಲ್ಲಿ ಮನೆ ಮನೆಗು ಶಾಸಕರು, ಮನೆ ಬಾಗಿಲಿಗೆ ಶಾಸಕರು ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಶಿಕ್ಷಣದ ಕೊರತೆಯಿಂದಾಗಿ ನಮ್ಮ ಭಾಗದಲ್ಲಿ ಬಾಲ್ಯ ವಿವಾಹ ಹಾಗೂ ಪೋಕ್ಸೊ ಪ್ರಕರಣಗಳು ಹೆಚ್ಚಾಗಿವೆ ಇವುಗಳನ್ನ ಮನಃಗಂಡು ಕ್ಷೇತ್ರದಲ್ಲಿ ಕೆಪಿಎಸ್ಸಿ ಶಾಲೆಗಳ ತೆರೆಯಲು ಅಧಿವೇಶನದಲ್ಲಿ ಧ್ವನಿ ಎತ್ತಿದ್ದೆ, ಕೂಡಲೇ ಶಿಕ್ಷಣ ಸಚಿವರ ನೇತೃತ್ವದಲ್ಲಿ ಸಭೆ ಕರೆದು ರಾಜ್ಯದಾದ್ಯಾಂತ ಶಾಲೆಗಳನ್ನು ಮಂಜೂರು ಮಾಡಿದೆ ಎಂದರು. ರಸ್ತೆ, ಚರಂಡಿ ಅಭಿವೃದ್ದಿ ಕಾರ್ಯಗಳು ತಾತ್ಕಾಲಿಕ ಅಷ್ಟೇ, ಕ್ಷೇತ್ರದ ಜ್ವಲಂತ ಸಮಸ್ಯೆಗಳಿಂದ ಮುಕ್ತಿಯಾಗಬೇಕಾದರೆ ನೀರು ಮತ್ತು ವಿದ್ಯುತ್ ಪೂರೈಕೆ ಶಾಶ್ವತ ಪರಿಹಾರ ಈ ನಿಟ್ಟಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಮಹತ್ತರ ಯೋಜನೆ ಜಾರಿಗೆ ತರಲಾಗಿದೆ. ತಿಪ್ಪೇಹಳ್ಳಿ ಕೆರೆ ಅಭಿವೃದ್ದಿಗೆ ೨…

Read More

ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಹಾಂತೇಶ್ ಬೀಳಗಿ ಅವರು ವಿಜಯಪುರದಿಂದ ಕಲಬುರಗಿಗೆ ತಮ್ಮ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗೌನಹಳ್ಳಿ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು. ಬೀಳಗಿ ಅವರೊಂದಿಗೆ ಕಾರಿನಲ್ಲಿದ್ದ ಒಟ್ಟು ಮೂವರು ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಮಹಾಂತೇಶ್ ಬೀಳಗಿ ಅವರು 2012ರ ಕರ್ನಾಟಕ ಕೆಡರ್‌ನ ಐಎಎಸ್ ಅಧಿಕಾರಿಯಾಗಿದ್ದರು. ಕೆಎಸ್‌ಎಂಸಿಎಲ್‌ ಎಂಡಿ ಆಗುವ ಮೊದಲು ಅವರು ಬೆಸ್ಕಾಂ ಎಂಡಿ ಆಗಿಯೂ ಕಾರ್ಯನಿರ್ವಹಿಸಿದ್ದರು.

Read More

ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪಟ್ಟಣದ ವೈಭವ ಶಾಲಾ ಆವರಣದಲ್ಲಿ ಕವಿರಾಜ್ ಅಕಾಡೆಮಿ ಹಾಗೂ ವೈಭವ ಶಾಲಾ ವತಿಯಿಂದ ಮಕ್ಕಳಿಗೆ ಅಭಕಾಸ್ ವೇದಿಕ್ ಗಣಿತ ಚಾಂಪಿಯನ್ ಟ್ರೋಫಿ ಪರೀಕ್ಷೆ ನಡೆಯಿತು. ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು. ವಿದ್ಯಾ ಸಂಸ್ಥೆಯ ಕಾರ್ಯದಲ್ಲಿ ಮುರುಳಿಧರ್ ಮಾತನಾಡಿ, ಗಣಿತ ಎಂದರೆ ಒಂದು ಕಾಲದಲ್ಲಿ ಕಬ್ಬಿಣದ ಕಡಲೆ ಯಾಗಿತ್ತು, ಆದರೆ ಈಗ ಮಕ್ಕಳು ಎಷ್ಟು ಸುಲಲಿತವಾಗಿ ಗಣಿತದಲ್ಲಿ ಪರಿಣಿತರಾಗಿದ್ದಾರೆ ನೊಡಿದರೆ ಖುಷಿಯಾಗುತ್ತದೆ ಎಂದರು. ಪ್ರದೀಪ್,  ಶಿಲ್ಪ, ದಂಪತಿಗಳಿಬ್ಬರು ಅಭಕಾಸ್ ವೇದಿಕ್ ನಲ್ಲಿ ಅವರೇ ತಯಾರಿಸಿದ ವಿಶೇಷ ಸಾಧನೆ ಮೂಲಕ ಮಕ್ಕಳಿಗೆ ಗಣಿತವನ್ನು ಸುಲಭವಾಗಿ ಕಲಿಯುವ ಹಾಗೆ ಮಾಡಿದ್ದಾರೆ. ಇಂದು ವಿಜೇತರಾದ ಮಕ್ಕಳಿಗೆ ಟ್ರೋಪಿ ಹಾಗೂ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರಮೇಶ್ ಗೌಡ, ಇಂದು ಕಾಲೇಜ್ ನ ಪ್ರಾಂಶುಪಾಲ ಜಾತಪ್ಪ ಹಾಗೂ ಶಿಕ್ಷಕರಾದ ಚೇತನ್ ಕುಮಾರ್, ಪ್ರಸನ್ನ ಹಾಗೂ ಕವಿರಾಜ್ ಅಭಕಾಸ್ ಅಕಾಡೆಮಿಯ  ಸಂಸ್ಥಾಪರಾದ ಪ್ರದೀಪ್, ಶಿಲ್ಪಾ ಸೇರಿದಂತೆ  ಇತರರು…

Read More

ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪಟ್ಟಣದ ಕಾಳಿದಾಸ ಹಿರಿಯ ಪ್ರಾಥಮಿಕ ಹಾಗೂ ವೈಭವ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ರಾಜ್ಯ ಮಟ್ಟದ ಶಿಕ್ಷಣ ಚೈತನ್ಯ ಪ್ರಶಸ್ತಿಗೆ ಭಾಜನವಾಗಿದ್ದು, ಭಾನುವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ವೈಭವ ಶಾಲೆಯ ವಾತಾವರಣ, ಶಿಕ್ಷಣದ ಗುಣಮಟ್ಟ ಹಾಗೂ ಶಿಕ್ಷಕರ ಗುಣಮಟ್ಟವನ್ನು ಆಧರಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಿದ್ದು, ಸ್ವಾರ್ಥ ಅಕಾಡೆಮಿ ಹಾಗೂ ಸೂರ್ಯ ಫೌಂಡೇಶನ್ ವತಿಯಿಂದ ಭಾನುವಾರ, ಬೆಂಗಳೂರಿನ ಶಿಕ್ಷಕರ ಸದನದಲ್ಲಿ ವೈಭವ ವಿದ್ಯಾ ಸಂಸ್ಥೆ ಯ ಶಿಕ್ಷಕ ವೃಂದಕ್ಕೆ ಪ್ರಶಸ್ತಿಯನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಪ್ರಕಾಶಗೌಡ, ಮಲ್ಲೇಶ್, ಕಂಪಳೇಶ್, ಬಸವರಾಜ್, ತಿಪ್ಪೇಸ್ವಾಮಿ, ಮಂಜುನಾಥ, ಹೇಮಂತ್ ಕುಮಾರ್, ನಂದೀಶ್ ಗೌಡ, ಅಪರ್ಣ, ಬಸವರಾಜ್, ಚೌಡಪ್ಪ, ಓಮೇಶ್,ಸೇರಿದಂತೆ ಇತರರಿದ್ದರು. ನಮ್ಮ ಶಿಕ್ಷಣ ಸಂಸ್ಥೆ ಗೆ ಪ್ರಶಸ್ತಿ ಬಂದಿರುವುದು ತುಂಬಾ ಸಂತಸ ತಂದಿದೆ ಎಂದು ವಿದ್ಯಾ ಸಂಸ್ಥೆ ಯ ಕಾರ್ಯದರ್ಶಿ ಮುರುಳಿಧರ್ ಸಂತಸ ವ್ಯಕ್ತಪಡಿಸಿದರು. ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ ಅಜಯ್ 8123302594, ದಯಾನಂದ್ ಸಜ್ಜನ್ 9886972975

Read More

ಕೂಡ್ಲಿಗಿ: ಬೈಕ್ ಹಿಂಬದಿಗೆ ಮತ್ತೊಂದು ಬೈಕ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಕೂಡ್ಲಿಗಿ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನಡೆದಿದೆ. ಕೂಡ್ಲಿಗಿಯ 16 ನೇ ವಾರ್ಡಿನ ಕುಂಬಾರ ಓಣಿಯ ಮಜಾರ್(30) ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಕಲ್ಲಹಳ್ಳಿ ತಾಂಡಾದ ಮಹೇಶ್(26) ಮೃತಪಟ್ಟ ಸವಾರರಾಗಿದ್ದು. ಪಟ್ಟಣದ ಹೊರ ವಲಯದಲ್ಲಿ ಮ್ಯಾಕನಿಕ್ ಶಾಪ್ ನಡೆಸುತ್ತಿದ್ದ ಮಜಾರ್ ತನ್ನ ಬೈಕಿನಲ್ಲಿ ಹೆದ್ದಾರಿ-50ರ ಕೊಟ್ಟೂರು ಬೈಪಾಸ್ ರಸ್ತೆಯ ಮುಖಾಂತರ ಹೋಗುತ್ತಿದ್ದಾಗ, ಚಿತ್ರದುರ್ಗ ಕಡೆಯಿಂದ ಸರ್ವಿಸ್ ರಸ್ತೆಯ ಮುಖಾಂತರ ಅತಿ ವೇಗ ಹಾಗೂ ಅಜಾಗಾರುಕತೆಯಿಂದ ತನ್ನ ಬೈಕ್ ಚಾಲನೆ ಮಾಡಿಕೊಂಡ ಬಂದ ಮಹೇಶ ಮಜಾರ್‍ ನ ಬೈಕ್ ಹಿಂಬದಿಗೆ ಡಿಕ್ಕಿಹೊಡೆಸಿದ್ದಾನೆ. ಇದರಿಂದ ಮಜಾರ್ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮಹೇಶ ಬಳ್ಳಾರಿ ಬೀಮ್ಸ್ ಗೆ ಹೋಗುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ ಅಜಯ್ 8123302594, ದಯಾನಂದ್ ಸಜ್ಜನ್ 9886972975

Read More