ಕೂಡ್ಲಿಗಿ: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಹೆಚ್ಚು ಗಮನ ಹರಿಸಬೇಕು ಎಂದು ಶಾಸಕ ಡಾ.ಎನ್.ಟಿ ಶ್ರೀನಿವಾಸ್ ಹೇಳಿದರು. ತಾಲೂಕಿನ ಬಣವಿಕಲ್ಲು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ದಾಖಲಾತಿ ಆಂದೋಲನ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮಗು ಶಿಕ್ಷಣ ಪಡೆದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿದಿನ ತಪ್ಪದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಮಗುವಿನ ಉತ್ತಮ ಭವಿಷ್ಯಕ್ಕಾಗಿ ಸರ್ಕಾರದ ಯೋಜನೆಗಳನ್ನು ಸದ್ದು ಉಪಯೋಗ ಪಡಿಸಿಕೊಳ್ಳಬೇಕು. ಸರ್ಕಾರಿ ಶಾಲೆಗಳ ಬಲವರ್ಧನೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭ್ಯವಾಗಬೇಕು. ಬಣವಿಕಲ್ಲು ಗ್ರಾಮದ ಮಕ್ಕಳು ಉತ್ತಮ ಸಾಧನೆ ಮಾಡುವ ಮೂಲಕ ಗ್ರಾಮ ಮತ್ತು ಜಿಲ್ಲೆಗೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಕಿವಿಮಾತು ಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು ಪ್ರಾಸ್ತವಿಕವಾಗಿ ಮಾತನಾಡಿ ಕರ್ನಾಟಕ ಸರ್ಕಾರದಿಂದ ನಮ್ಮ ತಾಲೂಕಿಗೆ ಹೆಚ್ಚಿನ ಸರ್ಕಾರಿ ಪಬ್ಲಿಕ್ ಶಾಲೆಗಳು ಮತ್ತು ಸರ್ಕಾರಿ ದ್ವಿ ಭಾಷಾ ಮಾಧ್ಯಮ ಶಾಲೆಗಳು ಸರ್ಕಾರಿ ಎಲ್ ಕೆ ಜಿ ಮತ್ತು ಯುಕೆಜಿ ಶಾಲೆಗಳು ಹೊಸ ಪ್ರೌಢಶಾಲೆಗಳು ಕ್ಷೇತ್ರದ ಶಾಸಕರ ಶಿಕ್ಷಣ ಮೇಲಿನ ಕಾಳಜಿಯಿಂದ ಹೆಚ್ಚಿನ ಅನುಕೂಲ ಆಗಿದೆ. ಆದ್ದರಿಂದ ಎಲ್ಲಾ ಪೋಷಕರು ಮತ್ತು ಮಕ್ಕಳು ಅನುಕೂಲ ಪಡೆದುಕೊಳ್ಳಬೇಕಾಗಿ
ಪ್ರಾಸ್ತವಿಕವಾಗಿ ನುಡಿದರು.ಈ ಕಾರ್ಯಕ್ರಮದ ಸ್ವಾಗತವನ್ನು ಶಿಕ್ಷಕ ಜಿ ಕರಿಬಸವನಗೌಡ ಇವರು ನೆರವೇರಿಸಿದರು. ಪ್ರಾರ್ಥನ ಗೀತೆಯನ್ನು ಶಿಕ್ಷಕಿ ಪವಿತ್ರ ನೆರವೇರಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ಗೀತಾ ಬಪ್ರಿ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷ ಪಾಪಣ್ಣ ಬಣವಿಕಲ್, ಎಪಿಎಂಸಿ ಸದಸ್ಯ ಲಿಂಗನಗೌಡ, ವಿಎಸ್ ಎನ್ ಅಧ್ಯಕ್ಷ ಕಮಶೆಟ್ಟಿ ನಾಗರಾಜ್, ತಳವಾರ್ ಶರಣಪ್ಪ, ಬಣವಿಕಲ್ಲು ಎರ್ರಿಸ್ವಾಮಿ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮೂರ್ತಿ, ಸಾಮಿಲ್ ಆನಂದ, ಸಿದ್ದಣ್ಣ, ಅಲ್ಲಭಕ್ಷಿ, ಕುಬೇರಗೌಡ್ರು, ಚೌಡೇಶ, ಪಾಪಣ್ಣ, ಪಾಲೇಶ್, ರಾಜ ಸಾಬ್, ಕಾರ್ತಿಕ್, ಗ್ರಾ.ಪಂ ಪಿಡಿಒ ಶಾಂತಕುಮಾರಿ, ಎಸ್ಡಿಎಂಸಿ ಉಪಾಧ್ಯಕ್ಷ ಪಿ ಬಸವರಾಜ್, ಸಿ ಆರ್ ಪಿ ಮಹಾಂತೇಶ್, ಗುರುಗಳು ಪಾರ್ವತಮ್ಮ ಸೇರಿದಂತೆ ಶಿಕ್ಷಕರು, ಸಿಬ್ಬಂದಿಗಳು, ಎಸ್ಡಿಎಂಸಿ ಸರ್ವ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸಿತರಿದ್ದರು.
ಸುದ್ದಿಗಾಗಿ ಸಂಪರ್ಕಿಸಿ
ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

