Author: Team Sanchalana

ಕೂಡ್ಲಿಗಿ: ಪರಿಸರ ಅಸಮತೋಲನದಿಂದ ಪ್ರಸುತ್ತವಾಗಿ ಹಲವು ಎದರಿಸಬೇಕಾದ ಅನಿವಾರ್ಯತೆ ಇದೆ, ಇದಕ್ಕೆ ಪ್ರತಿಯಾಗಿ ಪ್ರತಿಯೊಬ್ಬರು ಒಂದು ಗಿಡ ನೆಡುವ ಮೂಲಕ ಪ್ರಕೃತಿಯ ಸಂರಕ್ಷಣೆ ಕೈಜೋಡಿಸಬೇಕೆಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ಕಾನಹೊಸಹಳ್ಳಿ ಸಮೀಪದ ಚಿಕ್ಕಜೋಗಿಹಳ್ಳಿಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಮ್ಮನಿಗಾಗಿ ಒಂದು ಗಿಡ ಎಂಬ ಅಭಿಯಾನಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ನಂತರ್ ನಡೆದ ವೇದಿಕೆಯಲ್ಲಿ ಮಾತನಾಡಿದರು. ಸಾವಿರ ಮಕ್ಕಳಿಂದ ಸಾವಿರ ಗಿಡಗಳನ್ನು ಹಾಕಿದ್ದು ಐತಿಹಾಸಿಕ ಕ್ಷಣವಾಗಿದೆ. ವಿಜಯನಗರ ಸಾಮ್ರಾಜ್ಯವು ಐದು ಶತಮಾನಗಳ ಹಿಂದೆ ಪ್ರಕೃತಿವಾಗಿ, ಅರ್ಥಿಕವಾಗಿ ಏμÉ್ಟೂಂದು ಶ್ರೀಮಂತವಾಗಿತ್ತೆಂಬುದನ್ನು ಹೇಳಿದ್ದೆವೆ ನೋಡಲು ಸಾಧ್ಯವಾಗುತ್ತಿಲ್ಲ. ಈ ನೆಲದಲ್ಲಿ ವಿಯಾವಾಕಿ ಕಾಡುಕೃಷಿಕ ಡಾ.ಆರ್.ಕೆ.ನಾಯರ್ ನೇತೃತ್ವದಲ್ಲಿ ಹಸಿರು ಮೂಡಿಸುವ ಪ್ರಯತ್ನವಾಗಿ 2ವರ್ಷದಲ್ಲಿ 1ಲಕ್ಷ ಗಿಡಗಳು ಗುರಿ ಹೊಂದಲಾಗಿದೆ. ಪ್ರತಿದಿನವು ಒಬ್ಬೊಬ್ಬರು ಸಸಿ ನೆಡಿ ಎಂದು ಪ್ರಧಾನಿ ಹೇಳುತ್ತಾರೆ. ಕೃಷಿಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಪ್ರತಿ ಕಾರ್ಯಕ್ರಮದಲ್ಲೂ ಸಸಿಗಳನ್ನು ನೆಡುತ್ತಾರೆಂದು ಸ್ಮರಿಸಿದರು, ಅನೇಕ ರೈತರು ನಮ್ಮ ಜಮೀನಿನಲ್ಲೂ…

Read More

ಕೂಡ್ಲಿಗಿ: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಹೆಚ್ಚು ಗಮನ ಹರಿಸಬೇಕು ಎಂದು ಶಾಸಕ ಡಾ.ಎನ್.ಟಿ ಶ್ರೀನಿವಾಸ್ ಹೇಳಿದರು. ತಾಲೂಕಿನ ಬಣವಿಕಲ್ಲು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ದಾಖಲಾತಿ ಆಂದೋಲನ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮಗು ಶಿಕ್ಷಣ ಪಡೆದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿದಿನ ತಪ್ಪದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಮಗುವಿನ ಉತ್ತಮ ಭವಿಷ್ಯಕ್ಕಾಗಿ ಸರ್ಕಾರದ ಯೋಜನೆಗಳನ್ನು ಸದ್ದು ಉಪಯೋಗ ಪಡಿಸಿಕೊಳ್ಳಬೇಕು. ಸರ್ಕಾರಿ ಶಾಲೆಗಳ ಬಲವರ್ಧನೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭ್ಯವಾಗಬೇಕು. ಬಣವಿಕಲ್ಲು ಗ್ರಾಮದ ಮಕ್ಕಳು ಉತ್ತಮ ಸಾಧನೆ ಮಾಡುವ ಮೂಲಕ ಗ್ರಾಮ ಮತ್ತು ಜಿಲ್ಲೆಗೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಕಿವಿಮಾತು ಮಾತು ಹೇಳಿದರು. ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು ಪ್ರಾಸ್ತವಿಕವಾಗಿ ಮಾತನಾಡಿ ಕರ್ನಾಟಕ ಸರ್ಕಾರದಿಂದ ನಮ್ಮ ತಾಲೂಕಿಗೆ ಹೆಚ್ಚಿನ…

Read More

ವಿಜಯನಗರ; ಜಿಲ್ಲೆಯ ಮಾದರಿ ಗ್ರಾಮ ಚಿಕ್ಕಜೋಗಿಹಳ್ಳಿಯಲ್ಲಿ ರಾಜ್ಯದಲ್ಲಿಯೇ ಮೊದಲ ಭಾರಿಗೆ ಜಪಾನ್ ಮಾದರಿಯ ‘ಮಿಯಾವಾಕಿ’ ತೋಟಗಾರಿಕೆ ಬೆಳೆಗಳ ಅರಣ್ಯೀಕರಣ ಮಾಡುವಂಥ ಕಾರ್ಯಕ್ಕೆ ಈಗಾಗಲೇ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಕಿರು ಅರಣ್ಯ ಯೋಜನೆಯಡಿ ತಾಲೂಕಿನಾದ್ಯಂತ ಇರುವ ಬಂಜರು, ಅನುತ್ಪಾದಕ ಹಾಗೂ ನಿರ್ಲಕ್ಷö್ಯಕ್ಕೆ ಒಳಗಾಗಿರುವ ಭೂಮಿ, ಸರಕಾರಿ ಹಾಗೂ ಆಸಕ್ತ ರೈತರ ಜಮೀನುಗಳಲ್ಲಿ ಹುಣಸೆ, ಬೇಲ, ನೆಲ್ಲಿ, ನೇರಳೆ, ಕವಳೆ, ಚರ‍್ರಿ, ನಿಂಬೆ ಹಾಗೂ ಹಸಿರೆಲೆ ಗೊಬ್ಬರದ ಮರಗಳಾಗಿ ಬೆಳೆಸಲು ಬೇವು, ಹೊಂಗೆ ಸೇರಿದಂತೆ ಹತ್ತು ರೀತಿಯ ವಿಧದ ೧ ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಅದರ ಮೊದಲ ಭಾಗವಾಗಿ ಕಾನಾಹೊಸಹಳ್ಳಿ ಸಮೀಪದ ಚಿಕ್ಕಜೋಗಿಹಳ್ಳಿಯಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ ೧೦ ಎಕರೆಗೂ ಹೆಚ್ಚಿನ ವಿಸ್ತೀರ್ಣದ ಭೂಮಿಯಲ್ಲಿ ೧೫ ಸಾವಿರ ಸಸಿಗಳನ್ನು ನೆಡುವುದಕ್ಕಾಗಿ ಜಾಗದ ಸ್ವಚ್ಛತೆ ಹಾಗೂ ಗುಂಡಿ ತೋಡುವ ಕಾರ್ಯವೂ ಹದಿನೈದು ದಿನಗಳಿಂದ ಭರದಿಂದ ನಡೆಯುತ್ತಿದೆ. ಚಿಕ್ಕಜೋಗಿಹಳ್ಳಿಗೆ ಜೂ.೫ರಂದು ಕೇಂದ್ರ ಸಚಿವೆ ಜೂ.೫ರಂದು ನಡೆಯುವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಕೇಂದ್ರದ ಹಣಕಾಸು ಸಚಿವೆ…

Read More

ಕೂಡ್ಲಿಗಿ; ಅನಿಯಂತ್ರಿತ ಆನ್‌ಲೈನ್ ಔಷಧ ಮಾರಾಟದಿಂದ ಸಾರ್ವಜನಿಕರ ಆರೋಗ್ಯಕ್ಕೆ ಕುತ್ತು ಬಂದಿದೆ. ಶೆಡ್ಯೂಲ್ ಡ್ರಗ್ಸ್ ದುರುಪಯೋಗ ತಡೆದು ಚಿಲ್ಲರೆ ಔಷಧ ಅಂಗಡಿಗಳನ್ನು ಉಳಿಸುವಂತೆ ಆಗ್ರಹಿಸಿ ಕಾನ ಹೊಸಹಳ್ಳಿ ಔಷಧ ವ್ಯಾಪಾರಿಗಳ ಸಂಘದ ವತಿಯಿಂದ ಬುಧವಾರ ನಾಡಕಚೇರಿಯ ಅನಿತಾ ಪೂಜಾರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಂಘದ ಮುಖಂಡ ಬಿ. ಮಂಜುನಾಥ್ ಮಾತನಾಡಿ,”ಕಾರ್ಪೊರೇಟ್ ಕಂಪನಿಗಳು ಆನ್‌ಲೈನ್‌ನಲ್ಲಿ ವೈದ್ಯರ ಚೀಟಿ ಇಲ್ಲದೆ H, H1 ಔಷಧಗಳನ್ನು ಮಾರಾಟ ಮಾಡುತ್ತಿವೆ. ನಕಲಿ ಔಷಧ, ಸ್ವಯಂ ಚಿಕಿತ್ಸೆಯಿಂದ ಜನರ ಪ್ರಾಣಕ್ಕೆ ಅಪಾಯವಾಗಿದೆ. ಸರ್ಕಾರ ಕೂಡಲೇ ಆನ್‌ಲೈನ್ ಔಷಧ ಮಾರಾಟಕ್ಕೆ ಕಡಿವಾಣ ಹಾಕಬೇಕು. ಹಳ್ಳಿಗಳಲ್ಲಿ 30-40 ವರ್ಷದಿಂದ ಸೇವೆ ನೀಡುತ್ತಿರುವ ನಮ್ಮಂತಹ ಚಿಲ್ಲರೆ ಅಂಗಡಿಗಳು ಬೀಗ ಹಾಕುವ ಸ್ಥಿತಿ ಬಂದಿದೆ. ಇಂದು ಸಾಂಕೇತಿಕ ಬಂದ್ ಮಾಡಿದ್ದೇವೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯವ್ಯಾಪಿ ಉಗ್ರ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು. “ಆನ್‌ಲೈನ್‌ನಲ್ಲಿ ಶೇ. 20 ರಿಂದ 30 ರಷ್ಟು ರಿಯಾಯಿತಿ ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಆದರೆ ಔಷಧದ ಗುಣಮಟ್ಟ, ಅವಧಿ…

Read More

ಕೂಡ್ಲಿಗಿ ; ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಯುತ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿನಾಂಕ; 18-05-2026 ರಂದು, ರಂಗನಾಥಹಳ್ಳಿ ಗ್ರಾಮದಲ್ಲಿ ಸಿ.ಸಿ. ರಸ್ತೆ ನಿರ್ಮಾಣ ( 10 -ಲಕ್ಷಗಳು), ಹಾಗೂ ರಂಗನಾಥ ಹಳ್ಳಿ ಗ್ರಾಮದ ಮುಖ್ಯ ರಸ್ತೆಯಿಂದ ನಿಂಬಳಗೆರೆಗೆ ಹೋಗುವ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ( 490 ಲಕ್ಷಗಳು) ಭೂಮಿಪೂಜೆಯನ್ನು ನೆರವೇರಿಸಿದರು. ಮಾನ್ಯ ಶಾಸಕರು ರಂಗನಾಥಹಳ್ಳಿ ಗ್ರಾಮದ ವಿವಿಧ ಓಣಿಗಳನ್ನು ಸುತ್ತುವ ಮೂಲಕ ಖುದ್ದಾಗಿ ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ಮಾಡಿ, ಈ ಸಂದರ್ಭದಲ್ಲಿ ಶಾಸಕರ ನಿಧಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಸಮಸ್ಯೆಗಳಿಗೆ ನಾನು ಎದುರಿ ಓಡಿ ಹೋಗುವವನು ಅಲ್ಲ. ನಮ್ಮ ಸರ್ಕಾರದ ಸಹಕಾರದೊಂದಿಗೆ ಅಂತಹ ಸಮಸ್ಯೆಗಳಿಗೆ ಪರಿಹಾರ ಕೊಡುತ್ತೇನೆ ಎಂದರು. ಈ ಸಂದರ್ಭದಲ್ಲಿ ಶೇಟು ನಾಗರಾಜ, ಅಜ್ಜಪ್ಪ ನೀರಘಂಟಿ, ಕುಮಾರ್ ಸ್ವಾಮಿ, ಶೇಖರಪ್ಪ, ರಾಜಪ್ಪ ವಿ, ಬಸವರಾಜಪ್ಪ ವಿ, ಶ್ರೀನಿವಾಸ್. ಬಿ. ಪಿ, ವಿರೇಶ ಪತ್ರಯ್ಯ, ರೇವಣ್ಣ, ಕಲ್ಲೇಶ, ಚಿನ್ನಾಪುರ ಸಿದ್ದೇಶ, ಊರಿನ ಪ್ರಮುಖರು,…

Read More

ಕೂಡ್ಲಿಗಿ; ಮನುಷ್ಯನ ಮನಸ್ಸು ಮತ್ತು ದೇಹವನ್ನು ಒಂದೇ ದಾರದಲ್ಲಿ ಕಟ್ಟುವ ಕಲೆ ಯೋಗ. ಈ ಯೋಗದ ಮಹತ್ವವನ್ನು ಮನೆಮನೆಗೆ ತಲುಪಿಸುವ ಉದ್ದೇಶದಿಂದ ನಮ್ಮ ತಾಲೂಕಿನ ಹುಲಿಕೆರೆ ಗ್ರಾಮದ ಸಜ್ಜನ ವಠಾರದಲ್ಲಿ ಮೇ ಹದಿನೆಂಟರಿಂದ ಹತ್ತು ದಿನಗಳ ಕಾಲ “ಸಿದ್ಧಸಮಾಧಿ ಯೋಗ ಶಿಬಿರ”ವನ್ನು ಹಮ್ಮಿಕೊಳ್ಳಲಾಗಿದೆ. ಹದಿನೆಂಟನೇ ತಾರೀಕು ಸಂಜೆ ನಾಲ್ಕು ಗಂಟೆಗೆ ಶಿಬಿರದ ಪರಿಚಯ ಕಾರ್ಯಕ್ರಮ ನಡೆಯಲಿದ್ದು, ಹತ್ತೊಂಬತ್ತರಿಂದ ಪ್ರತಿದಿನ ಬೆಳಗಿನ ಜಾವ ಐದು ಗಂಟೆಗೆ ಪ್ರಾರಂಭವಾಗುತ್ತದೆ. ಎಸ್‌ಎಸ್‌ವೈ ಗುರು ರೇಣುಕಾ ಮಾತಾಜಿ ಅವರು ಯೋಗಾಸನ, ಧ್ಯಾನ, ಪ್ರಾಣಾಯಾಮ ಮತ್ತು ಯೋಗಿಕ ಆಹಾರ ಪದ್ಧತಿಯ ಬಗ್ಗೆ ಸಂಪೂರ್ಣ ತರಬೇತಿ ನೀಡಲಿದ್ದಾರೆ ಎಂದು ನಿವೃತ ಶಿಕ್ಷಕ ಮಹೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮಹೇಶ್ ಮಾಸ್ಟರ್ pho no.9986950375 ರಮೇಶ್‌ಗೌಡ ಮೊ:9164344701 ಇವರುಗಳನ್ನುಸಂಪರ್ಕಿಸಬಹುದು. ಸುದ್ದಿಗಾಗಿ ಸಂಪರ್ಕಿಸಿ ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

Read More

ಕೂಡ್ಲಿಗಿ; ಕಾನಹೊಸಹಳ್ಳಿ ಭಾಗದಲ್ಲಿ ಮಂಗಳವಾರ ಸಂಜೆ ಬೀಸಿದ ಬಿರುಗಾಳಿಗೆ ಯಂಬಳಿ ವಡ್ಡರಹಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಚಾವಣಿ ಶೀಟ್‌ಗಳು ಹಾರಿ ಹೋಗಿದ್ದರೆ, ಅದೇ ಗ್ರಾಮದ ರೈತ ಚನ್ನಬಸಪ್ಪ ಎಂಬುವವರಿಗೆ ಸೇರಿದ ಕೋಳಿ ಫಾರಂ ಶೆಡ್ ಸಂಪೂರ್ಣ ನೆಲಕ್ಕುರುಳಿದೆ. ಬಿರುಗಾಳಿ ಸಹಿತ ತಾಲೂಕಿನ ಅಲ್ಲಲ್ಲಿ ಮಳೆಯಾಗಿದ್ದು, ಯಂಬಳಿ ವಡ್ಡರಹಟ್ಟಿ ಗ್ರಾಮದಲ್ಲಿ ಅಪಾರ ಹಾನಿಯಾಗಿದೆ. ಸರಕಾರಿ ಶಾಲೆಯ ಆರ್‌ಸಿಸಿ ಕಟ್ಟಡದ ಚಾವಣಿ ಮಳೆಗೆ ಸೋರದಂತೆ ತಗಡಿನ ಶೀಟ್‌ಗಳ ಟ್ರಸ್ ರೂಫಿಂಗ್ ಹಾಕಲಾಗಿತ್ತು. ಬೀಸಿದ ಬಿರುಗಾಳಿಯಿಂದ ಎರಡು ಕೊಠಡಿಗಳಿಗೆ ಹಾಕಿದ್ದ ತಗಡಿನ ಶೀಟ್‌ಗಳೆಲ್ಲವೂ ಹಾರಿ ಬಿದ್ದಿದ್ದು, ಆ ಸಂದರ್ಭದಲ್ಲಿ ಯಾರೂ ಇರಲಿಲ್ಲವಾದ್ದರಿಂದ ಯಾವುದೇ ತೊಂದರೆಯಾಗಿಲ್ಲ. ಈಗ ಶಾಲೆಗೆ ರಜೆ ಇರುವುದರಿಂದ ಕೆಲ ವಿದ್ಯಾರ್ಥಿಗಳು, ಯುವಕರು ಶಾಲೆಯ ಬಳಿ ಆಗಾಗ ಆಟವಾಡುತ್ತಿದ್ದರು. ಆದರೆ, ಗಾಳಿಗೆ ಶೀಟ್ ಹಾರಿ ಬಿದ್ದಿರುವ ಸಂದರ್ಭದಲ್ಲಿ ಯಾರೂ ಇರಲಿಲ್ಲ ಎಂಬುದು ಸಮಾಧಾನ ತಂದಿದೆ ಎನ್ನುತ್ತಾರೆ ಯಂಬಳಿ ವಡ್ಡರಹಟ್ಟಿಯ ನಿವಾಸಿ ದಿನೇಶ್ ಅವರು. ಇನ್ನು, ರೈತ ಚನ್ನಬಸಪ್ಪ ಅವರಿಗೆ ಸೇರಿದ…

Read More

ಕೂಡ್ಲಿಗಿ; 1 ಕೆಜಿ ಬಂಗಾರದ ಆಸೆ ತೋರಿಸಿ 30 ಲಕ್ಷ ವಂಚನೆ ಮಾಡಿದ್ದ ಪ್ರಕರಣ ಭೇದಿಸಿ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಕಾನಹೊಸಹಳ್ಳಿಯ ಪೊಲೀಸರು ಯಶಸ್ವಿಯಾಗಿದ್ದಾರೆ. ಲಿಂಗನಹಳ್ಳಿ ಕೊರಚರಹಟ್ಟಿಯ ಸುರೇಶ್(ರಮೇಶ್), ಸೋಮಣ್ಣ ಬಂಧಿತರು. ತಾಲೂಕಿನ ಕ್ಯಾಸನಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಈ ಇಬ್ಬರು ಜನವರಿ 28 ರಂದು ಚೆನೈನಾ ಅಯ್ಯಾಪಾಕಂನ ನಿವಾಸಿ ಜಿ ಕುಮಾರಸ್ವಾಮಿ ಎಂಬುವರಿಗೆ ನಮ್ಮ ಮನೆಯ ಪಾಯ ತಗೆಯುವಾಗ 1 ಕೆಜಿ ಬಂಗಾರ ಸಿಕ್ಕಿದ್ದು ಅದನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿದ್ದಾರೆ. ನಂತರ ಕ್ಯಾಸನಕೆರೆ ಬಳಿ ಅರಣ್ಯ ಪ್ರದೇಶಕ್ಕೆ ಕರೆಸಿಕೊಂಡು ಆತನನ್ನು ಜೋರಾಗಿ ದೂಡಿ ಆತನ ಬಳಿಯಿದ್ದ ₹30 ಲಕ್ಷ ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದರು. ಪಿರಿಯದುದಾರರು ಭಯಗೊಂಡು ತಡವಾಗಿ ಮಾರ್ಚ್ 14ರಂದು ದೂರು ನೀಡಿದ್ದರು. ದೂರು ಆಧರಿಸಿದ ಪೊಲೀಸರು ಅವರ ಫೋನ್ ಸಂಖ್ಯೆಯ ಮೂಲಕ ಟ್ರೇಸ್ ಮಾಡಿ ಪ್ರಕರಣ ದಾಖಲಾದ ಒಂದೇ ವಾರದಲ್ಲಿ ಮಾರ್ಚ್ 21ರಂದು ಅವರನ್ನು ಬಂಧಿಸಿ ಅವರ ಬಳಿಯಿದ್ದ ₹29,50,…

Read More

ಕೂಡ್ಲಿಗಿ; ಪವನ್ ವಿದ್ಯುತ್ ಯಂತ್ರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿದಿರುವ ಘಟನೆ ತಾಲೂಕಿನ ಯಂಬಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಯಂಬಳಿ ವಡರಹಟ್ಟಿಯ ನೀಲಪ್ಪರ ಶರಣಪ್ಪ ಎಂಬುವವರ ಜಮೀನಿನಲ್ಲಿ ಅಳವಡಿಸಿದ್ದ ಖಾಸಗಿ ಕಂಪನಿಯ ವಿಂಡ್ ಫ್ಯಾನ್gಗೆ ಸಿಡಿಲು ಬಡಿದು ಹೊತ್ತಿ ಉರಿದಿದ್ದು, ದಟ್ಟ ಹೊಗೆ ಆವರಿಸಿಕೊಂಡಿದೇ. ಸಮೀಪಕ್ಕೆ ಸ್ಥಳೀಯರನ್ನು ಬಿಡದಂತೆ ಕಂಪನಿಯವರು ತಡೆದಿದ್ದಾರೆ. ತಾಲೂಕಿನಾದ್ಯಂತ ಸಿಡಿಲು ಗುಡುಗು ಸಹಿತ ಸಾಧಾರಣ ಮಳೆಯಾಗಿದೆ, ಅಕಾಲಿಕವಾಗಿ ಸೋಮವಾರ ಸಂಜೆ ಧಿಡೀರ್ ಮಳೆಯಾದರಿಂದ ರೈತಾಪಿ ವರ್ಗ ಜಾನುವಾರುಗಳಿಗೆ ಮೇವು ಹಾಗು ಕಟಾವು ಮಾಡಿದ್ದ ರಾಗಿಯನ್ನು ರಕ್ಷಿಸಿಕೊಳ್ಳಲು ಪರದಾಡಿದರು. ಇನ್ನು ಪವನ ವಿದ್ಯುತ್ ಯಂತ್ರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

Read More

ಕೂಡ್ಲಿಗಿ ; ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅವರ ಆರೋಗ್ಯ ಮತ್ತು ಕ್ಷೇಮವನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಶಾಸಕ ಡಾ ಶ್ರೀನಿವಾಸ್ ಎನ್ ಟಿ ಹೇಳಿದರು. ತಾಲೂಕಿನ ನರಸಿಂಹಗಿರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ, ಆಶಾ ಕಾರ್ಯಕರ್ತರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಮಹಿಳಾ ಅಧಿಕಾರಿಗಳು ಹಾಗೂ ರಾಜಕೀಯ ಮುಂಚೂಣಿಯ ಮಹಿಳೆಯರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಸನ್ಮಾನ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ಆಶಾ ಕಾರ್ಯಕರ್ತರ ಕೊಡುಗೆಯನ್ನು ಶ್ಲಾಘಿಸಿದ ಅವರು ಆಶಾ ಕಾರ್ಯಕರ್ತೆಯರು ಇಂದು ಪ್ರತಿ ಮನೆಗಳ ಆಶಾ ದೀಪಗಳಂತೆ ಕೆಲಸ ಮಾಡುತ್ತಿದಾರೆ ಎಂದರು. ಕಾರ್ಯಕ್ರಮದಲ್ಲಿ ಸಂಸದ ಈ ತುಕಾರಾಂ ಮಾತನಾಡಿ, ಸಹೋದರ ಶ್ರೀನಿವಾಸ್ ಅವರು ಕ್ಷೇತ್ರದಲ್ಲಿ ಮಾದರಿ ಕೆಲಸ ಮಾಡುತ್ತಿದ್ದಾರೆ. ಸೀಮಂತ ಸೇರಿದಂತೆ ಮಹಿಳೆಯರಿಗೆ ಸನ್ಮಾನಿಸಿ ಗೌರವ ಸಲ್ಲಿಸಿರುವುದು ಪುಣ್ಯದ ಕಾರ್ಯವಾಗಿದೆ ಎಂದ ಅವರು,…

Read More