ಕೂಡ್ಲಿಗಿ; ಮನುಷ್ಯನ ಮನಸ್ಸು ಮತ್ತು ದೇಹವನ್ನು ಒಂದೇ ದಾರದಲ್ಲಿ ಕಟ್ಟುವ ಕಲೆ ಯೋಗ. ಈ ಯೋಗದ ಮಹತ್ವವನ್ನು ಮನೆಮನೆಗೆ ತಲುಪಿಸುವ ಉದ್ದೇಶದಿಂದ ನಮ್ಮ ತಾಲೂಕಿನ ಹುಲಿಕೆರೆ ಗ್ರಾಮದ ಸಜ್ಜನ ವಠಾರದಲ್ಲಿ ಮೇ ಹದಿನೆಂಟರಿಂದ ಹತ್ತು ದಿನಗಳ ಕಾಲ “ಸಿದ್ಧಸಮಾಧಿ ಯೋಗ ಶಿಬಿರ”ವನ್ನು ಹಮ್ಮಿಕೊಳ್ಳಲಾಗಿದೆ.
ಹದಿನೆಂಟನೇ ತಾರೀಕು ಸಂಜೆ ನಾಲ್ಕು ಗಂಟೆಗೆ ಶಿಬಿರದ ಪರಿಚಯ ಕಾರ್ಯಕ್ರಮ ನಡೆಯಲಿದ್ದು, ಹತ್ತೊಂಬತ್ತರಿಂದ ಪ್ರತಿದಿನ ಬೆಳಗಿನ ಜಾವ ಐದು ಗಂಟೆಗೆ ಪ್ರಾರಂಭವಾಗುತ್ತದೆ. ಎಸ್ಎಸ್ವೈ ಗುರು ರೇಣುಕಾ ಮಾತಾಜಿ ಅವರು ಯೋಗಾಸನ, ಧ್ಯಾನ, ಪ್ರಾಣಾಯಾಮ ಮತ್ತು ಯೋಗಿಕ ಆಹಾರ ಪದ್ಧತಿಯ ಬಗ್ಗೆ ಸಂಪೂರ್ಣ ತರಬೇತಿ ನೀಡಲಿದ್ದಾರೆ ಎಂದು ನಿವೃತ ಶಿಕ್ಷಕ ಮಹೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮಹೇಶ್ ಮಾಸ್ಟರ್ pho no.9986950375 ರಮೇಶ್ಗೌಡ ಮೊ:9164344701 ಇವರುಗಳನ್ನುಸಂಪರ್ಕಿಸಬಹುದು.
ಸುದ್ದಿಗಾಗಿ ಸಂಪರ್ಕಿಸಿ
ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

