ಕೂಡ್ಲಿಗಿ: ಕೆರೆ ಹಾಗೂ ಮಣ್ಣು ಸಂರಕ್ಷಣೆ ಅತಿ ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಬಯಲುತುಂಬರಗುದ್ದಿ ಕೆರೆ ಅಭಿವೃಗೆ ಒತ್ತು ನೀಡಲಾಗಿದೆ ಎಂದು ತಾಲೂಕು ಯೋಜನಾಧಿಕಾರಿ ನವೀನ್ ಕುಮಾರ್ ಎಚ್ ಡಿ ಹೇಳಿದರು.
ತಾಲೂಕಿನ ಬಯಲುತುಂಬರಗುದ್ದಿ ಗ್ರಾಮದಲ್ಲಿ ಶನಿವಾರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ʼನಮ್ಮ ಊರು ನಮ್ಮ ಕೆರೆʼ ಕಾರ್ಯಕ್ರಮದಲ್ಲಿ ಹೊನ್ನಮ್ಮ ಕೆರೆ ಹೂಳೆತುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು, ಪ್ರತಿ ಹಳ್ಳಿಗಳ ಅಭಿವೃದ್ಧಿಗೆ ಕೆರೆಗಳೇ ಮೂಲ ಆಧಾರವಾಗಿವೆ, ಹಾಗಾಗಿ ಪ್ರತಿ ಹಳಿಗಳ ಕೆರೆ ಜೀರ್ಣೋಧರಕ್ಕೆ ಸಂಸ್ಥೆಯ ಕಡೆಯಿಂದ ಹೆಚ್ಚು ಮುತುವರ್ಜಿ ವಹಿಸಿ ಆಧ್ಯತೆ ನೀಡಲಾಗಿದೆ ಎಂದ ಅವರು,
ಕೆರೆ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಹೂಳೆತುವ ಕಾಮಗಾರಿಗೆ ಮೊದಲು ಚಾಲನೆ ನೀಡಲಾಗುವುದು ಈ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರ ಅಗತ್ಯವಾಗಿದ್ದು, ನಿಮ್ಮೆಲ್ಲಾರ ಸಹಕಾರದಿಂದ ಸುಂದರ ಕೆರೆ ನಿರ್ಮಾಣಕ್ಕೆ ಪಣ ತೊಡೋಣ ಎಂದರು.
ಮುಖಂಡರಾದ ಕೆ ಜಗದೀಶ್, ಸರ್ಕಾರಿ ಶಾಲಾ ಮುಖ್ಯ ಶಿಕ್ಷಕ ವೀರೇಶ್ ಮಾತನಾಡಿದರು. ಇದೆ ಸಂದರ್ಭದಲ್ಲಿ ಕೆರೆ ಸಂರಕ್ಷಣಾ ಸಮಿತಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಕೆ ಮಹಾದೇವಪ್ಪ, ಅಧ್ಯಕ್ಷರಾಗಿ ಜಿ ಎಚ್ ವೀರೇಶ್, ಉಪಾಧ್ಯಕ್ಷರಾಗಿ ಎಚ್ ಎಂ ವೀರಭದ್ರಯ್ಯ ಸ್ವಾಮಿ, ಡಿ ಎಸ್ ದುರುಗೇಶ್, ಎಂ ವಿ ನಾಗಭೂಷಣ, ಜಿ ನಾಗರಾಜ, ಕೋಶಾಧಿಕಾರಿಯಾಗಿ ಕೆ ಚಿದಾನಂದಪ್ಪ, ಖಜಾಂಜಿಯಾಗಿ ಜಿ ಅಜಯ್ ಹಾಗೂ ಇತರೆ ಸದಸ್ಯರು ಆಯ್ಕೆಯಾದರು.
ಕೊಪ್ಪಳ ಪ್ರಾದೇಶಿಕ ವಿಭಾಗದ ಎಂಜಿನಿಯರ್ ಸತೀಶ್, ಕೃಷಿ ಮೇಲ್ವಿಚರಾಕ ಮಹಾಂತೇಶ್ ಡಿ ಟಿ, ಮೇಲ್ವಿಚರಾಕರಾದ ಯಶೋಧ, ಗ್ರಾಮ ಪಂಚಾಯ್ತಿ ಸದಸ್ಯ ಮಡಿವಾಳರ ರಾಮಪ್ಪ, ಮುಖಂಡರಾದ ಊಟೆಪ್ಪ, ಮಂಜುನಾಥ, ಶಿವಣ್ಣ, ಕೃಷ್ಣಮೂರ್ತಿ ಸೇವಾ ಪ್ರತಿನಿಧಿ ಸಾಕಮ್ಮ, ವಿಲ್ಇ ಜಿ ಗುರುಕಿರಣ್ ಸೇರಿದಂತೆ ಗ್ರಾಮಸ್ತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

