ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪಟ್ಟಣದ ವೈಭವ ಶಾಲಾ ಆವರಣದಲ್ಲಿ ಕವಿರಾಜ್ ಅಕಾಡೆಮಿ ಹಾಗೂ ವೈಭವ ಶಾಲಾ ವತಿಯಿಂದ ಮಕ್ಕಳಿಗೆ ಅಭಕಾಸ್ ವೇದಿಕ್ ಗಣಿತ ಚಾಂಪಿಯನ್ ಟ್ರೋಫಿ ಪರೀಕ್ಷೆ ನಡೆಯಿತು. ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು. ವಿದ್ಯಾ ಸಂಸ್ಥೆಯ ಕಾರ್ಯದಲ್ಲಿ ಮುರುಳಿಧರ್ ಮಾತನಾಡಿ, ಗಣಿತ ಎಂದರೆ ಒಂದು ಕಾಲದಲ್ಲಿ ಕಬ್ಬಿಣದ ಕಡಲೆ ಯಾಗಿತ್ತು, ಆದರೆ ಈಗ ಮಕ್ಕಳು ಎಷ್ಟು ಸುಲಲಿತವಾಗಿ ಗಣಿತದಲ್ಲಿ ಪರಿಣಿತರಾಗಿದ್ದಾರೆ ನೊಡಿದರೆ ಖುಷಿಯಾಗುತ್ತದೆ ಎಂದರು. ಪ್ರದೀಪ್, ಶಿಲ್ಪ, ದಂಪತಿಗಳಿಬ್ಬರು ಅಭಕಾಸ್ ವೇದಿಕ್ ನಲ್ಲಿ ಅವರೇ ತಯಾರಿಸಿದ ವಿಶೇಷ ಸಾಧನೆ ಮೂಲಕ ಮಕ್ಕಳಿಗೆ ಗಣಿತವನ್ನು ಸುಲಭವಾಗಿ ಕಲಿಯುವ ಹಾಗೆ ಮಾಡಿದ್ದಾರೆ. ಇಂದು ವಿಜೇತರಾದ ಮಕ್ಕಳಿಗೆ ಟ್ರೋಪಿ ಹಾಗೂ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರಮೇಶ್ ಗೌಡ, ಇಂದು ಕಾಲೇಜ್ ನ ಪ್ರಾಂಶುಪಾಲ ಜಾತಪ್ಪ ಹಾಗೂ ಶಿಕ್ಷಕರಾದ ಚೇತನ್ ಕುಮಾರ್, ಪ್ರಸನ್ನ ಹಾಗೂ ಕವಿರಾಜ್ ಅಭಕಾಸ್ ಅಕಾಡೆಮಿಯ ಸಂಸ್ಥಾಪರಾದ ಪ್ರದೀಪ್, ಶಿಲ್ಪಾ ಸೇರಿದಂತೆ ಇತರರು ಭಾಗಿಯಾಗಿದ್ದರು. ಕೊಟ್ಟೂರು ಹಾಗೂ ಇತರೆ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Trending
- ಪ್ರಕೃತಿ ಸಂರಕ್ಷಣೆಗೆ ಪ್ರತಿಯೊಬ್ಬರು ಒಂದು ಗಿಡ ನೆಡಿ
- ಬಣವಿಕಲ್ಲು ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ
- ಮಾದರಿ ಗ್ರಾಮದಲ್ಲಿ ಮಿಯಾವಾಕಿ ಅರಣ್ಯ
- ಆನ್ಲೈನ್ ಔಷಧ ಮಾರಾಟ ನಿಯಂತ್ರಿಸಿ
- ರಂಗನಾಥಹಳ್ಳಿಗೆ 5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ -ಶಾಸಕ ಡಾ. ಶ್ರೀನಿವಾಸ್ ಎನ್. ಟಿ.
- ಮೆ.18 ರಿಂದ ಹುಲಿಕೆರೆಯಲ್ಲಿ ಯೋಗ ಶಿಬಿರ
- ಬಿರುಗಾಳಿಗೆ ಹಾರಿಹೋದ ಶಾಲೆಯ ಶೀಟ್
- ಇಬ್ಬರು ವಂಚಕರ ಬಂಧನ; ₹29.50 ಲಕ್ಷ ವಶ

