ಕೂಡ್ಲಿಗಿ; ತಾಲೂಕಿನ ಕಾನಹೊಸಹಳ್ಳಿಯಲ್ಲಿ ಜನೌಷಧಿ ಕೇಂದ್ರ ತೆರೆಯುವಂತೆ ಹಿಂದೂಳಿದ ಜಾತಿಗಳ ಒಕ್ಕೂಟದಿಂದ ಪ್ರಾಥಮಿಕ ಅರೋಗ್ಯ ಕೇಂದ್ರದ ವ್ಯದ್ಯಾಧಿಕಾರಿ ಎಚ್ ವಿಶ್ವನಾಥ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು.
ನಂತರ ಹಿಂದುಳಿದ ಒಕ್ಕೂಟಗಳ ಜಿಲ್ಲಾ ಪ್ರಧಾನ ಕಾರ್ಯದ ಶಿ ಲಕ್ಕಜ್ಜಿ ಮಲ್ಲಿಕಾರ್ಜುನ ಮಾತಾನಾಡಿ, ಕೂಡ್ಲಿಗಿ ತಾಲೂಕಿನ ದೊಡ್ಡ ಹೋಬಳಿ ಕೇಂದ್ರವಾದ ಕಾನಹೊಸಹಳ್ಳಿ ಪಟ್ಟಣ್ಣದಲಿ ಸುಮಾರು 20 ಸಾವಿರಕೂ ಹೆಚ್ಚು ಜನಸಂಖ್ಯೆ ಇದ್ದು, ಸುತ್ತಲೂ ಸುಮಾರು ಐವತ್ತಕ್ಕು ಹೆಚ್ಚು ಹಳ್ಳಿಗಳ ಜನತೆ ಪಟ್ಟಣ್ಣವನು ಅವಲಂಬಿಸಿದ್ದು ಇಲ್ಲಿ ಜನವೌಷದಿ ಕೇಂದ್ರದ ಅಗತ್ಯತೆ ಹೆಚ್ಚಾಗಿದೆ.
ಬಿಪಿ, ಶುಗರ್ ಸೇರಿದಂತೆ ಜ್ವರ ಹಾಗು ಇತರೆ ರೋಗಿಗಳಿಗೆ ತುಂಬಾ ಅನಾನುಕೂಲವಾಗಲಿದೆ, ಖಾಸಗಿ ಮೆಡಿಕಲ್ ಶಾಪ್ ಗಳಲ್ಲಿ ಔಷಧಿ ಕೊಂಡುಕೊಳ್ಳುವುದು ಕಷ್ಟಕರವಾಗಲಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮಕೈಗೊಂಡರೆ ಬಡ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿ ಜಿ ವೆಂಕಟೇಶ್, ಎಂ ಎನ್ ಜಯ್ಯಣ್ಣ, ಸಿ ಬಿ ನಾಗೇಶ್, ಕೆ ಚಂದ್ರಪ್ಪ, ಕೆ ಎಚ್ ನಾಗೇಶ್, ಕೃಷ್ಣಪ್ಪ, ಅಜಯ್ ಕುಮಾರ್ ಪಿ ಟಿ, ಶಿವು ಎಂ ಇದ್ದರು.
ವೈದ್ಯಾಧಿಕಾರಿ ಎಚ್ ವಿಶ್ವನಾಥ ಮನವಿ ಸ್ವೀಕರಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

