ಕೂಡ್ಲಿಗಿ : ಬಡವರ ಜೀವನ ನಿರ್ವಹಣೆಗೆ ಆಧಾರವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನುರದ್ದು ಮಾಡಿ, ಕೇಂದ್ರ ಸರ್ಕಾರ ಬಯಸಿದಾಗಷ್ಟೇ ಉದ್ಯೋಗ ನೀಡುವ ವಿಬಿ ಗ್ರಾಮ್ ಜಿ ಯೋಜನೆಯನ್ನು ಜಾರಿ ಮಾಡುತ್ತಿರುವುದು ಖಂಡನೀಯ ಎಂದು ಶಾಸಕ ಡಾ ಶ್ರೀನಿವಾಸ್ ಎನ್ ಟಿ ಹೇಳಿದರು.

ತಾಲೂಕಿನ ತಾಯಕನಹಳ್ಳಿಯಲ್ಲಿ ಎಂಜಿನರೇಗಾ ರದ್ದು ಪಡಿಸಿ ವಿಬ್ ಜಿ ಜಾರಿ ಕ್ರಮವನ್ನು ವಿರೋಧಿಸಿ ಹುಡೇಂನಿಂದ ತಾಯಕ್ಕನಹಳ್ಳಿ ಗ್ರಾಮದವರೆಗೂ ಪಾದಯಾತ್ರೆ ಮೂಲಕ ಪ್ರತಿಭಟಿಸಿ ನಂತರ ಮಾತನಾಡಿದರು.
ಮನರೇಗಾ ಮರು ಜಾರಿಯಾಗುವವರೆಗೂ ಹೋರಾಟ ಬಿಡಲ್ಲ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜನಪರ ಚಿಂತನೆಯಿಂದ ಜಾರಿಗೊಂಡ ಮನರೇಗಾ ಯೋಜನೆಯಡಿ ಬಡವರು, ಸಣ್ಣರೈತರು, ಮಹಿಳೆಯರಿಗೆ 100 ದಿನಗಳ ಕಾಲ ಕೆಲಸವನ್ನು ಖಾತ್ರಿಪಡಿಸುತ್ತಿತ್ತು. ಬಡವರಿಗೆ ಕೆಲಸದ ಹಕ್ಕು ಸಂವಿಧಾನಬದ್ಧವಾದದ್ದು, ಆದರೆ ವಿಬಿ ಜಿ ರಾಮ್ ಜಿ ಕಾಯ್ದೆಯಿಂದ ಸಂವಿಧಾನಬದ್ದವಾದ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದರು.
ಪ್ರತಿ ಪಂಚಾಯತ್ ವರ್ಷಕ್ಕೆ ಸುಮಾರು 1-2 ಕೋಟಿ ರೂ.ಗಳನ್ನು ಪಡೆಯುತ್ತಿತ್ತು ಆದರೆ ಕೇಂದ್ರದ ಹೊಸ ಯೋಜನೆಯಿಂದ ಅದು ಅಪಾಯಕ್ಕೆ ಸಿಲುಕುತ್ತಿದೆ. 90:10 ಅನುಪಾತವನ್ನು 60:40 ಕ್ಕೆ ಬದಲಾಯಿಸಲಾಗಿದೆ, ಇದು ರಾಜ್ಯಗಳ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ ಎಂದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ದನಗೌಡ್ರು ಕಾನಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಮಾರಗೌಡ್ರು, ಕೂಡ್ಲಿಗಿ ಎಪಿಎಂಸಿ ಬೋಸಣ್ಣ ಕುರಿಹಟ್ಟಿ, ಉಪಾಧ್ಯಕ್ಷ ಮಹಾದೇವಣ್ಣ, ಮುಖಂಡರಾದ ಪೇಪರ್ ಸೂರಯ್ಯ, ಮಾಂತಣ್ಣ, ಹುಡೆಂ ಜಿ. ಪಾಪನಾಯಕ, ಅಜ್ಜನಗೌಡ್ರು, ಸೂರ್ಯಪ್ರಕಾಶ, ಹೊಸಹಳ್ಳಿ ಬಿ ಇ ಜಗದೀಶ್, ಪೋಟೋ ಸಿದ್ಲಿಂಗಪ್ಪ, ಜುಟ್ಟಲಿಂಗನಹಟ್ಟಿ ಬೊಮ್ಮಣ್ಣ,
ಹರೀಶ್, ತಳವಾರ ಶರಣಪ್ಪ, ಇಒ ಬಸಣ್ಣ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

