ಕೂಡ್ಲಿಗಿ; ತಾಲೂಕಿನ ಕಾನಹೊಸಹಳ್ಳಿಯ ವಿದ್ಯಾನಿಕೇತನ/ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ ರಾಜ್ಯದ ಪ್ರತಿಷ್ಠಿತ ರಂಗಭೂಮಿ ಶಿಕ್ಷಣ ಸಂಸ್ಥೆ ನೀನಾಸಂನಿಂದ ನವೆಂಬರ್ 9 ಮತ್ತು 10ರಂದು ಸಾಂಸ್ಕೃತಿಕ ಹಬ್ಬ ಆಯೋಜಿಸಲಾಗಿದೆ ಎಂದು ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಕೆ ಎಂ ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸತತ 75 ವರ್ಷಗಳಿಂದ ರಂಗಭೂಮಿಗೆ ತನ್ನದೇ ಆದ ಅಪಾರ ಸೇವೆ ಸಲ್ಲಿಸುತ್ತಿರುವ ರಾಜ್ಯ ಪ್ರತಿಷ್ಠಿತ ರಂಗಭೂಮಿ ಶಿಕ್ಷಣ ಸಂಸ್ಥೆಯಾದ ನೀನಾಸಂ ತಂಡವು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇದೆ ಪ್ರಪ್ರಥಮ ಬಾರಿಗೆ ನಮ್ಮ ಕಾನ ಹೊಸಹಳ್ಳಿಯಲ್ಲಿ ವಿಶೇಷ ನೀನಾಸಂ ನಾಟಕೋತ್ಸವವನ್ನು ತನ್ನ ರಂಗಭೂಮಿ ಪರಂಪರೆಯನ್ನು ಮುಂದುವರಿಸಲು ನಾಡಿನ ಸಂಸ್ಕೃತಿ, ನಾಟಕ, ಸಾಹಿತ್ಯ ಮತ್ತು ಕಲೆಯ ಮೌಲ್ಯವನ್ನು ಬೆಳಗಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಅವರು ತಿಳಿಸಿದರು.
ಸುತ್ತಮುತ್ತಲಿನ ಎಲ್ಲಾ ಸಾಹಿತ್ಯ ಮತ್ತು ರಂಗಭೂಮಿ ಅಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಕಾರ್ಯದರ್ಶಿ ಕೆ ಎಂ ಹರ್ಷವರ್ಧನ್ ತಿಳಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

