d0824820-518c-4aec-848f-2b35d28404a1ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ ಎಂದು ಹಿರಿಯ ಶಾಸಕ ಗವಿಯಪ್ಪ ರಾಜ್ಯ ಸರ್ಕಾರದ ಪರ ಬ್ಯಾಟ್ ಬೀಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಪುರಸಭೆ ಹೊಸ ಕಟ್ಟಡ ಉದ್ಘಾಟನೆ ವೇಳೆ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅನುದಾನದ ಸಮಸ್ಯೆ ಇಲ್ಲ, ಸಿಎಂ ಸಿದ್ದರಾಮಯ್ಯ ಪ್ರತಿ ಕ್ಷೇತ್ರಗಳಿಗೆ 50 ರಿಂದ 80 ಕೋಟಿ ರೂ.ವರೆಗೆ ವಿಶೇಷ ಅನುದಾನ ಕೊಡುತ್ತಿದ್ದಾರೆ ಎಂದರು.
ಕಮಲಾಪುರ ಆಡಳಿತದಲ್ಲಿ ಜನ ಪ್ರತಿನಿಧಿಗಳು, ಅಧಿಕಾರಿಗಳಿಗೆ ಎಂದಿಗೂ ಮುಂದಾಲೋಚನೆ ಹೆಚ್ಚಿದೆ. ಈ ನೂತನ ಕಚೇರಿ ಭವ್ಯವಾದ ಕಟ್ಟಡ ಮುಂದಿನ ಪೀಳಿಗೆಗೆ ಕೊಡುಗೆಯಾಗಿದೆ.
ಪಟ್ಟಣದಲ್ಲಿ ಕುಡಿವ ನೀರಿನ ವ್ಯವಸ್ಥೆ, ಒಳಚರಂಡಿ ಸೇರಿದಂತೆ ಇತರೆ ಕಾರ್ಯಗಳಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ, ಆದ್ದರಿಂದ ಕಮಲಾಪುರ ಅಭಿವೃದ್ಧಿಗಾಗಿ 15 ಕೋಟಿ ರೂ. ಬಿಡುಗಡೆ ನೀಡಿರುವೆ, ಒಂದು ತಿಂಗಳ ಒಳಗೆ ಅಭಿವೃದ್ಧಿ ಕಾರ್ಯಗಳು ಆರಂಭ ಆಗಲಿದೆ ಎಂದರು.
ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಫುಡ್ ಕೋಟ್ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ನೀಡಲಾಗುತ್ತದೆ, ಹಂಪಿ ಇಲ್ಲೇ ಇರುವುದರಿಂದ ಪ್ರವಾಸೊದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದ ಅವರು, ಆನಂದ್ ಸಿಂಗ್ ಅವರು ಈ ಹಿಂದೆ ಹಾಕಿದ 1.80 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು, ಪ್ರವಾಸೋದ್ಯಮ ಇಲಾಖೆಯಿಂದ ಹಣ ಬಿಡುಗಡೆ ಮಾಡಿದ್ದರು ಎಂದು ಸ್ಮರಿಸಿದರು.

