ಕೊಟ್ಟೂರು; ಬೆಳೆದ ಬೆಳೆ ಲಾಸ್ ಆಗಿ , ಬ್ಯಾಂಕ್ ಸಾಲ ತೀರಿಸಲಾಗದೇ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಟ್ಟೂರು ತಾಲೂಕಿನ ಅಲಬೂರು ಗ್ರಾಮದಲ್ಲಿ ನಡೆದಿದೆ. ದುರ್ಗಪ್ಪ( 50) ಆತ್ಮಹತ್ಯೆ ಮಾಡಿಕೊಂಡ ರೈತ, ಬ್ಯಾಂಕ್ ಲೋನ್ ಒಂದೂವರೇ ಲಕ್ಷ, ೫೦ ಸಾವಿರ ಕೈ ಸಾಲ ಮಾಡಿಕೊಂಡಿದ್ದರು. ಇಟ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: Team Sanchalana
ಕೂಡ್ಲಿಗಿ; ತಾಲೂಕಿನ ಹುಲಿಕೆರೆಯಲ್ಲಿ ರಸ್ತೆ ಅಭಿವೃದ್ದಿ ಹೆಸರನಲ್ಲಿ ನಡೆಸುತ್ತಿರುವ ಕಾಮಗಾರಿ ಮೂಲಕ ಕೆರೆ ಕೋಡಿಯ ಎತ್ತರವನ್ನು ತಗಿಸುತ್ತಿದ್ದು ಯಥಾಸ್ಥಿತಿ ಕಾಪಾಡುವಂತೆ ಗ್ರಾಮಸ್ಥರು ಬುಧವಾರ ಒತ್ತಾಯಿಸಿದರು. ಕೆರೆ ಕೋಡಿ ಬಳಿ ನಡೆಯುತ್ತಿರುವ ದುರಸ್ಥಿ ಕಾರ್ಯದ ಸ್ಥಳದಲ್ಲಿ ನೆರೆದ ಗ್ರಾಮಸ್ಥರು ಸುದ್ದಿಗಾರರ ಜತೆ ಮಾತನಾಡಿದರು, ದುರಸ್ತಿ ಕಾರ್ಯದ ಮೂಲಕ ಕೆರೆಯ ಕೋಡಿಯ ಎತ್ತರವನ್ನು 1 ಅಡಿಗು ಅಧಿಕ ತಗ್ಗಿಸಲು ಅಗೆದಿದ್ದು, ಅವೈಜ್ಞಾನಿಕ ಕಾಮಗಾರಿಗೆ ಮುಂದಗಿದ್ದಾರೆ. ಬ್ರಿಟಿಷರ ಕಾಲದಲ್ಲಿದ್ದ ತಡೆಗೊಡೆಗಳನ್ನು ಆಗೆದಿದ್ದು, ಕಬ್ಬಿಣವಿಲ್ಲದೇ ನೇರವಾಗಿ ಕಾಂಕ್ರಿಟ್ ಹಾಕುತ್ತಿದ್ದಾರೆ, ಕಳಪೆ ಕಾಮಗಾರಿ ಮಾಡುವ ಮೂಲಕ ನಮ್ಮ ಕೆರೆಯನ್ನು ನಾಶ ಮಾಡಲು ಹೊರಟ್ಟಿದ್ದಾರೆ ಎಂದು ಗ್ರಾಮಸ್ತರು ಒತ್ತಾಯಿಸಿದರು. ಕೆರೆ ತುಂಬಿದ್ದರಿಂದ ಕೆರೆ ಆವರಣದಲ್ಲಿನ ಅತಿಕ್ರಮಣ ಹಾಗೂ ಪಟ್ಟ ಜಾಗಗಳಲ್ಲಿನ ಮನೆ ಹಾಗೂ ಜಮೀನುಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿತ್ತು, ಜನತೆ ಸಂಕಷ್ಟಕ್ಕೆ ಸಿಲುಕ್ಕಿದ್ದರು. ಕೆರೆಯ ವಿಸ್ತಿರ್ಣವನ್ನು ಸರ್ವೆ ಮಾಡಿ ತಡೆಗೋಡೆ ನಿರ್ಮಿಸುವ ಮೂಲಕ ಅಲ್ಲಿನ ಜನತೆಯ ಹಿತ ಕಾಪಾಡಲು ಶಾಸಕರು, ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ಅಲವತ್ತುಕೊಂಡರು. ಇನ್ನು…
ವಿಜಯನಗರ; ಹುಬ್ಬಳ್ಳಿ ಮೂಲದ ಸಿವಿಲ್ ಗುತ್ತಿಗೆದಾರ ಹೂವಿನಹಡಗಲಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿವಿಲ್ ಗುತ್ತಿಗೆದಾರ ಆನಂದ ಉಮೇಶ್ ಹೆಗಡೆ (40) ಆತ್ಮಹತ್ಯೆ ಮಾಡಿಕೊಂಡಾತ, ಹುಬ್ಬಳ್ಳಿಯ ಭವಾನಿ ನಿವಾಸಿಯಾಗಿದ್ದ ಸಿವಿಲ್ ಗುತ್ತಿಗೆದಾರ ಆನಂದ ಉಮೇಶ್ ಹೆಗಡೆ, ಹೂವಿನಹಡಗಲಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿ ಹಾಗೂ ನವೀಕರಣ ಕಾಮಗಾರಿ ಟೆಂಡರ್ ಪಡೆದು ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದರು. ಭಾನುವಾರ ಸಂಜೆ ಹುಬ್ಬಳ್ಳಿಯಿಂದ ಹೂವಿನಹಡಗಲಿಗೆ ಬಂದು ಉಳಿದುಕೊಂಡಿದ್ದರು, ಬೆಳಗ್ಗೆಯಾದ್ರೂ ಕುಟುಂಬಸ್ಥರ ಕರೆ ಸ್ವೀಕರಿಸದೇ ಇದ್ದಾಗ ಲಾಡ್ಜ್ ನಂಬರ್ ಗೆ ಕರೆ ಮಾಡಿದ್ದಾರೆ, ಬಾಗಿಲು ತೆಗೆಯದೇ ಇದ್ದಾಗ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಬಾಗಿಲು ಓಪನ್ ಮಾಡಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಡ್ಲಿಗಿ; ತಾಲೂಕಿನ ಕಾನಹೊಸಹಳ್ಳಿಯಲ್ಲಿ ಜನೌಷಧಿ ಕೇಂದ್ರ ತೆರೆಯುವಂತೆ ಹಿಂದೂಳಿದ ಜಾತಿಗಳ ಒಕ್ಕೂಟದಿಂದ ಪ್ರಾಥಮಿಕ ಅರೋಗ್ಯ ಕೇಂದ್ರದ ವ್ಯದ್ಯಾಧಿಕಾರಿ ಎಚ್ ವಿಶ್ವನಾಥ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು. ನಂತರ ಹಿಂದುಳಿದ ಒಕ್ಕೂಟಗಳ ಜಿಲ್ಲಾ ಪ್ರಧಾನ ಕಾರ್ಯದ ಶಿ ಲಕ್ಕಜ್ಜಿ ಮಲ್ಲಿಕಾರ್ಜುನ ಮಾತಾನಾಡಿ, ಕೂಡ್ಲಿಗಿ ತಾಲೂಕಿನ ದೊಡ್ಡ ಹೋಬಳಿ ಕೇಂದ್ರವಾದ ಕಾನಹೊಸಹಳ್ಳಿ ಪಟ್ಟಣ್ಣದಲಿ ಸುಮಾರು 20 ಸಾವಿರಕೂ ಹೆಚ್ಚು ಜನಸಂಖ್ಯೆ ಇದ್ದು, ಸುತ್ತಲೂ ಸುಮಾರು ಐವತ್ತಕ್ಕು ಹೆಚ್ಚು ಹಳ್ಳಿಗಳ ಜನತೆ ಪಟ್ಟಣ್ಣವನು ಅವಲಂಬಿಸಿದ್ದು ಇಲ್ಲಿ ಜನವೌಷದಿ ಕೇಂದ್ರದ ಅಗತ್ಯತೆ ಹೆಚ್ಚಾಗಿದೆ. ಬಿಪಿ, ಶುಗರ್ ಸೇರಿದಂತೆ ಜ್ವರ ಹಾಗು ಇತರೆ ರೋಗಿಗಳಿಗೆ ತುಂಬಾ ಅನಾನುಕೂಲವಾಗಲಿದೆ, ಖಾಸಗಿ ಮೆಡಿಕಲ್ ಶಾಪ್ ಗಳಲ್ಲಿ ಔಷಧಿ ಕೊಂಡುಕೊಳ್ಳುವುದು ಕಷ್ಟಕರವಾಗಲಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮಕೈಗೊಂಡರೆ ಬಡ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಜಿ ಜಿ ವೆಂಕಟೇಶ್, ಎಂ ಎನ್ ಜಯ್ಯಣ್ಣ, ಸಿ ಬಿ ನಾಗೇಶ್, ಕೆ ಚಂದ್ರಪ್ಪ, ಕೆ ಎಚ್ ನಾಗೇಶ್,…
ಕೂಡ್ಲಿಗಿ; ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಓರ್ವ ಮಹಿಳೆಯಾಗಿ ಕಿತ್ತೂರು ಚನ್ನಮ್ಮ ಹೋರಾಡಿದ್ದು ಇತಿಹಾಸ, ಅವಳ ಹೋರಾಟದ ಕಿಚ್ಚು ಇಂದಿನ ಯುವಜನರಿಗೆ ಸ್ಪೂರ್ತಿಯಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ ತಿಪ್ಪೇಸ್ವಾಮಿ ಹೇಳಿದರು. ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿಯ ಚನ್ನಮ್ಮ ವೃತದಲ್ಲಿ ಸೋಮವಾರ ನಡೆದ ಕಿತ್ತೂರು ಚನ್ನಮ್ಮನ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪುಷ್ಪಾಮಾಲೆ ಸಲ್ಲಿಸಿ ಅವರು ಮಾತನಾಡಿದರು. ಕಿತ್ತೂರು ಸಂಸ್ಥಾನದ ರಾಣಿಯಾಗಿದ್ದ ಚನ್ನಮ್ಮ ಪುತ್ರ ಸಂತಾನವಿಲ್ಲದ ಕಾರಣ ದತ್ತು ಮಗವನ್ನು ಪಡೆದುಕೊಂಡಿದ್ದಳು. ಆದರೆ, ಬ್ರಿಟಿಷ್‌ರು ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ಕಾನೂನು ಜಾರಿಗೆ ತಂದರು ಇದರ ವಿರುದ್ದ ದ್ವನಿ ಎತ್ತಿದ್ದ ನಾಡಿನ ಮೊದಲ ಸಂಸ್ಥಾನ ಕಿತ್ತೂರು ಅಗಿದ್ದು ಅದರ ವಿರುದ್ದ ಹೋರಾಟ ಮಾಡಿದ ಮೊದಲ ನಾರಿಯಾಗಿದ್ದಾರೆ ಎಂದರು. ಕಾನಮಡಗು ದಾಸೋಹ ಮಠದ ಧರ್ಮಾದಿಕಾರಿ ಐಮಡಿ ಶರಣಾರ್ಯರು ಮಾತನಾಡಿದರು. ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಎಚ್ ರೇವಣ್ಣ, ಯುವ ಘಟಕದ ರಾಜ್ಯಧ್ಯಕ್ಷ ಕಿಚಡಿ ಕೊಟ್ರೇಶ್,ತಾಲೂಕು ಅಧ್ಯಕ್ಷ ಮಂಜುನಾಥ, ಗ್ರಾಮ ಪಂಚಾಯತ್ ಅಧ್ಯಕ್ಷ…
ಕೂಡ್ಲಿಗಿ: ಕ್ಷೇತ್ರದ ಗಡಿಭಾಗದ ಹಳ್ಳಿಗರ ಆರೋಗ್ಯ ಸುಧಾರಣೆಗೆ ಅಧ್ಯತೆ ನೀಡುವ ಉದ್ದೇಶದಿಂದ ಮೂಲಕಟ್ಟಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ ಮತ್ತು ಅಗತ್ಯ ಸೌಲಭ್ಯ ಕಲ್ಲಿಸಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು. ತಾಲೂಕಿನ ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 2ಕೋಟಿ ವೆಚ್ಚದ ಉನ್ನತೀಕರಣ ಕಾಮಗಾರಿಗೆ ಶನಿವಾರ ಚಾಲನೆ ಮಾತನಾಡಿದರು. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಮತ್ತು ರಾಷ್ಟ್ರೀಯ ಹೆದ್ದಾರಿ 5೦ಕ್ಕೆ ಹೊಂದಿಕೊಂಡಿರುವ ಆಲೂರು ಆಸ್ಪತ್ರೆಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕಿರುವುದು ಅನಿವಾರ್ಯತೆ ಇತ್ತು. ಈಗಾಗಿ ಜಿಲ್ಲಾ ಖನಿಜ ನಿಧಿ 2ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುವುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಕರಣ ಗಣನೀಯವಾಗಿ ಜರುಗುವುದರಿಂದ ಅಗತ್ಯ ಚಿಕಿತ್ಸೆ ಸೌಲಭ್ಯ ಕಲ್ಪಿಸಬೇಕಿದೆ. ಮುಂಬರುವ ದಿನಗಳಲ್ಲಿ ಏಕ್ಸರೇಯಂತಹ ಸೌಲಭ್ಯಕ್ಜೆ ಅಧತ್ಯೆ ನೀಡಲಾಗುವುದು ಎಂದರು. ಈಗಾಲೆ ವೈದ್ಯ ಮತ್ತು ಸಿಬ್ಬಂದಿ ವಸತಿ ನಿಲಯಗಳ ಕಟ್ಟಲು ಕ್ರಮಕೈಗೊಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಾನಾಮಡುಗು ಶರಣಬಸವೇಶ್ವರ ದಾಸೋಹಮಠದ ದಾ.ಮ.ಐಮುಡಿ ಶರಣಾರ್ಯರು, ಗ್ರಾಪಂ ಅಧ್ಯಕ್ಷೆ ಉಮಾದೇವಿ, ಉಪಾಧ್ಯಕ್ಷೆ ಚೌಡಮ್ಮ, ಮಾಜಿ ಜಿಪಂ ಸದಸ್ಯ ಕೆ.ಎಂ.ಶಶಿಧರ್, ತಾಪಂ…
ವಿಜಯನಗರ; ಶಿವಮೊಗ್ಗ, ಚಿಕ್ಕಮಗಳೂರು ಸಹಿತ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚು ಮಳೆಯಾದರಿಂದ ತುಂಗಭದ್ರಾ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿದೆ. ಈ ಹಿನ್ನಲ್ಲೆಯಲ್ಲಿ ನದಿ ಪಾತ್ರದ ಜನರಿಗೆ ತುಂಗಭದ್ರಾ ಬೋರ್ಡ್ ಎಚ್ಚರಿಕೆ ಸಂದೇಶ ನೀಡಿದೆ. ತುಂಗಭದ್ರಾ ಗೇಟ್‌ನಿಂದ ನೀರು ಬಿಡುಗಡೆಯ ಎಚ್ಚರಿಕೆ ನೀಡಿದ್ದು, ನಾಳೆ ಬೆಳಿಗ್ಗೆ ಆಣೆಕಟ್ಟೆಯ ಗೇಟ್ ತೆರೆದು ನೀರನ್ನು ಹರಿಸಲಾಗುವುದು ಎಂದು ಮಂಡಳಿ ಎಚ್ಚರಿಕೆ ನೀಡಿದೆ. ತುಂಗಾ ಜಲಾಶಯದಿಂದ 12 ಸಾವಿರ ಕ್ಯೂಸೆಕ್, ಭದ್ರಾ ಜಲಾಶಯದಿಂದ 2 ಸಾವಿರ ಕ್ಯೂಸೆಕ್ ಹಾಗೂ ವರದಾ ನದಿಯಿಂದ 2 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದು ಬರುತಿದೆ. ನಾಳೆ ಬೆಳಿಗ್ಗೆ ಒಳಹರಿವಿನ ಪ್ರಮಾಣ 25 ಸಾವಿರ ಕ್ಯೂಸೆಕ್‌ಗೆ ಹೆಚ್ಚುವ ನಿರೀಕ್ಷೆ ಇದೆ. ಹೀಗಾಗಿ ಕೆಲವು ಗೇಟ್‌ಗಳನ್ನು ತೆರೆದು 5 ಸಾವಿರ ಕ್ಯೂಸೆಕ್‌ನಿಂದ 20 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ನದಿಗೆ ಹರಿಸುವ ಸಾಧ್ಯತೆ ಇದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮಂಡಳಿ ಎಚ್ಚರಿಕೆ ಸಂದೇಶ ನೀಡಿದೆ. ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ ಅಜಯ್…
ಕೊಟ್ಟೂರು: ಅಂಚೆ ಇಲಾಖೆ ನೌಕರನೊಬ್ಬ ಇಲಾಖೆ ಮೇಲಿನ ಅಭಿಮಾನ ಹಾಗೂ ಋಣ ತೀರಿಸುವದಕ್ಕಾಗಿ ತಾನು ನಿರ್ಮಿಸಿರುವ ‘ಮನೆಗೆ ಅಂಚೆ ಮನೆ’ ಎಂಬ ಹೆಸರು ನಾಮಕರಣ ಮಾಡಿರುವುದಲ್ಲದೇ, ಮನೆ ಪ್ರವೇಶ ಆಮಂತ್ರಣ ಪತ್ರಿಕೆ ಅಂಚೆ ಕಾರ್ಡ್ ನಲ್ಲಿ ಮುದ್ರಿಸುವ ಮೂಲಕ ಗಮನ ಸೆಳೆದಿದ್ದಾರೆ. 34 ವರ್ಷಗಳಿಂದಿರುವ ಅಂಚೆ ಇಲಾಖೆಯಲ್ಲಿ ಕೆಲಸ ಮಾಡ್ತಿರೋ ಕೆ.ಕೊಟ್ರೇಶ ಅವರು ಅಂಚೆ ಕೊಟ್ರೇಶ ಎಂದೇ ಪರಿಚಿತರು. ಕೊಟ್ಟೂರಿನಲ್ಲಿ ಈ ಹೆಸರಿನವರು ಸಾಕಷ್ಟು ಜನರಿರುವುರಿಂದ ಮತ್ತು ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಇವರ ಹೆಸರಿನೊಂದಿಗೆ ಅಂಚೆ ಸೇರಿಕೊಂಡಿದೆ. ಅಂಚೆ ಸಹಾಯಕರಾಗಿ ಸೇರಿದ್ದ ಇವರು ಕೊಟ್ಟೂರು, ಧಾರವಾಡ, ಕಲಬುರಗಿ, ಯಾದಗಿರಿ, ಕಂಪ್ಲಿ, ಬಳ್ಳಾರಿ, ಕೂಡ್ಲಿಗಿ, ಹರಪನಹಳ್ಳಿಗಳಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಹೂ.ಹಡಗಲಿ ಕಚೇರಿಯಲ್ಲಿ ತಾಲೂಕು ಪೋಸ್ಟ್ ಮಾಸ್ಟರ್ ಆಗಿದ್ದಾರೆ. ಕೊಟ್ಟೂರಿನ ಬಸವೇಶ್ವರ ನಗರದಲ್ಲಿ ನಿರ್ಮಿಸಿರುವ ಹೊಸ ಮನೆಗೆ ‘ ಅಂಚೆ ಮನೆ’ ಎಂದು ಹೆಸರಿಟ್ಟು, ಅಕ್ಟೋಬರ್ 26 ರಂದು ಗೃಹ ಪ್ರವೇಶ ಮಾಡ್ತಿದ್ದಾರೆ. ಆಡಂಬರದ ಅಮಂತ್ರಣ ಪತ್ರಿಕೆ ಮುದ್ರಣ ಮಾಡಿಸದೇ,…
ಬೆಂಗಳೂರು: ಹವಾಮಾನ ಇಲಾಖೆ (IMD)ಯು ಇಂದಿನಿಂದ 4 ದಿನಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಇದರ ಪರಿಣಾಮವಾಗಿ, ಅಕ್ಟೋಬರ್ 25 ರವರೆಗೆ ರಾಜ್ಯದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು, ಉತ್ತರದ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸಂಜೆಯ ನಂತರ ಗುಡುಗು ಸಹಿತ ಮಳೆ ಸಾಧ್ಯತೆ ಇದ್ದು, ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಸಹಿತ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕೂಡ್ಲಿಗಿ; ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿರುವ ಘಟನೆ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಶನಿವಾರ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಮೋಹನ್ (27) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಮೋಹನ್ ಕೂಡ್ಲಿಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಸ್ಥಳಕ್ಕೆ ಕಾನಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಹೆದ್ದಾರಿ ಸಹಾಯಕರು, ಸ್ಥಳೀಯರು, ಹೈವೆ ಸಿಬ್ಬಂದಿ, ಪೊಲೀಸರು ನೆರವಿಗೆ ಧಾವಿಸಿದ್ದಾರೆ. ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ ಅಜಯ್ 8123302594, ದಯಾನಂದ್ ಸಜ್ಜನ್ 9886972975
