ಕೂಡ್ಲಿಗಿ; ಗಾಣಿಗ ಸಮುದಾಯವು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಲು ಪ್ರಯತ್ನಿಸಬೇಕು, ಜತೆಗೆ ಸಮಾಜದ ಜತೆ ಉತ್ತಮ ಬಾಂದವ್ಯದೊಂದಿಗೆ ಅಭಿವೃದ್ದಿಯತ್ತ ಸಾಗಬೇಕಿದೆ ಎಂದು ಬಿಜಾಪುರದ ಗಾಣಿಗ ಸಮಾಜದ ವನಶ್ರೀ ಸಂಸ್ಥಾನ ಮಠದ ಡಾ. ಜಯಬಸವ ಕುಮಾರಸ್ವಾಮಿ ನುಡಿದರು.
ತಾಲೂಕಿನ ಕಾನಹೊಸಹಳ್ಳಿಯ ಗಾಣಿಗ ಸಮುದಾಯ ಭವನದಲ್ಲಿ ಈಚೇಗೆ ಆಯೋಜಿಸಿದ್ದ ಹೆಚ್ಚುವರಿ ಕೊಠಡಿಗಳಿಗೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು, ಸಮುದಾಯ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಸಮುದಾಯಗಳ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಒಂದು ಶಾಲೆ ಮತ್ತು ಹಾಸ್ಟೇಲ್ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರೀತಿಯಿಂದಲೂ ಸಹಕಾರ ನೀಡಲಾಗುವುದು ಎಂದ ಅವರು. ಕೂಡ್ಲಿಗಿ ಭಾಗದ ಗಾಣಿಗರ ಸಂಘವು ಆಸಕ್ತಿಯಿಂದ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಇದೇ ರೀತಿ ಮುಂದುವರೆಯಲಿ ಎಂದು ಅಶಿರ್ವಚ ನೀಡಿದರು.
ವಿಜಯನಗರ ಜಿಲ್ಲಾಧ್ಯಕ್ಷ ಜಿ ಉಮೇಶ್, ಸಮುದಾಯ ಭವನದಲ್ಲಿ ಕೊಠಡಿಗಳ ಕೊರತೆಯನ್ನು ನೀಗಿಸಲು ಇನ್ನು ಹೆಚ್ಚುವರಿ ಯಾಗಿ 8 ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷರ ಎಸ್. ಶೇಖರಪ್ಪ ಕಾರ್ಯದರ್ಶಿ ಡಾ.ಕೆ.ಶಿವಪ್ರಸಾದ್ ಖಜಾಂಚಿ ಜೆ.ಸಿ. ಧನಂಜಯ್ ನಿರ್ದೇಶಕ ಎಸ್ ಕೊಟ್ರೇಶ್, ದಿನ್ನೇ ಮಲ್ಲಿಕಾರ್ಜುನ್, ಎ ಎಸ್ ಕೊಟ್ರಣ್ಣ, ಚಿರತಗೊಂಡ ಈಶ್ವರಪ್ಪ, ಟಿ ಆರ್ ಬಸವೇಶ್ವರ, ಕೆ ಬಸವರಾಜಣ್ಣ, ಬಿ ಶರಣಪ್ಪ ಇಂಜಿನಿಯರ್. ಆಲೂರು ಕೆ ಗುರುಮೂರ್ತಿ, ಕೆ ಸುಭಾಷ್ ಚಂದ್ರ, ಎ ಕೊಟ್ರೇಶ್, ಕೆ ಬಾಬಣ್ಣ, ಜಿ ಯಜಮಾನಪ್ಪ, ಕೆ.ಟಿ. ಮಲ್ಲಿಕಾರ್ಜುನ್ ಆಲೂರ್ ಹಾಗೂ ಇತರರು ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

