ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಸಮೀಪದ ಆಲೂರು ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಹಲವರಿಗೆ ಗಾಯಗಳಾಗಿರುವ ಘಟನೆ ಬುಧವಾರ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಬೊಗಳರಹಟ್ಟಿಯಿಂದ ಕಾನಹೊಸಹಳ್ಳಿ ಬಳಿಯ ಗ್ರಾಮವೊಂದಕ್ಕೆ ನಾಮಕರಣ ಸಮಾರಂಭಕ್ಕೆಂದು ಜನರನ್ನು ತುಂಬಿಕೊಂಡು ಬರುವಾಗ ಪಲ್ಟಿಯಾಗಿದೆ.
15ಕ್ಕೂ ಹೆಚ್ಚು ಜನರು ಟ್ರ್ಯಾಕ್ಟರ್ ನಲ್ಲಿದ್ದು, ಅದೃಷ್ಟವಾಷತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ, ಕಾನಹೊಸಹಳ್ಳಿ ಪಿಎಸ್ಐ ಸಿದ್ದರಾಮಪ್ಪ ಬಿದರಾಣಿ, ಸಿಸಿಟಿವಿ ಸೇರಿದಂತೆ ಇತರೆ ಮಾಹಿತಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರಿಗೆ ಹೆದ್ದಾರಿ ಸಹಾಯಕರ ತಂಡ, ಹೆದ್ದಾರಿ ಸಿಬ್ಬಂದಿ, ಪೊಲೀಸರು, ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಿಲಾಗಿದೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

