Author: Team Sanchalana

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ (ಜಾತಿ ಸಮೀಕ್ಷೆ) ಅವಧಿಯನ್ನು ಶಿಕ್ಷಣ ಇಲಾಖೆ ವಿಸ್ತರಿಸಿದೆ.  ಅಕ್ಟೋಬರ್ 7 ರಂದು ಕೊನೆಗೊಳ್ಳಬೇಕಿದ್ದ ಸಮೀಕ್ಷಾ ಕಾರ್ಯವನ್ನು ಅಕ್ಟೋಬರ್ 12 ರವರೆಗೆ ವಿಸ್ತರಿಸಲಾಗಿದೆ. ಬೆಂಗಳೂರಿನಲ್ಲಿ ಒಂದು ವಾರದಷ್ಟು ತಡವಾಗಿ ಆರಂಭವಾಗಿದ್ದರಿಂದ, ಬೆಂಗಳೂರಿನಲ್ಲಿ ಸಮೀಕ್ಷೆಯನ್ನು ಅಕ್ಟೋಬರ್ 24 ರವರೆಗೆ ವಿಸ್ತರಿಸಲಾಗಿದೆ. ಶಿಕ್ಷಣ ಇಲಾಖೆಯು ಇನ್ನು ಮುಂದೆ ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಾಲಾ ತರಗತಿಗಳನ್ನು ಮುಗಿಸಿ, ಮಧ್ಯಾಹ್ನದ ನಂತರ ಸಮೀಕ್ಷೆ ನಡೆಸುವಂತೆ ಸೂಚಿಸಿದೆ. ಸಮೀಕ್ಷೆಯ ಪ್ರಗತಿ ರಾಜ್ಯದಲ್ಲಿ ಈವರೆಗೆ ಶೇ. 80.39 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. 1.43 ಕೋಟಿ ಮನೆಗಳ ಪೈಕಿ 1.15 ಕೋಟಿ ಮನೆಗಳ ಸಮೀಕ್ಷೆ ಮುಗಿದಿದೆ. ಇದುವರೆಗೆ 4.32 ಕೋಟಿ ಜನರು ಗಣತಿ ವ್ಯಾಪ್ತಿಗೆ ಬಂದಿದ್ದಾರೆ. ಇಂದು (ಸಮೀಕ್ಷೆ ನಡೆದ ದಿನ) 5,52,345 ಮನೆಗಳ ಸಮೀಕ್ಷೆ ಆಗಿದೆ ಬೆಂಗಳೂರಿನಲ್ಲಿ ಇಂದು 1.36 ಲಕ್ಷ ಮನೆಗಳು ಸೇರಿದಂತೆ, ಒಟ್ಟು 2.60 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಎದುರಾದ ಸಮಸ್ಯೆಗಳು ಮತ್ತು…

Read More