ಕೂಡ್ಲಿಗಿ; ಪವನ್ ವಿದ್ಯುತ್ ಯಂತ್ರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿದಿರುವ ಘಟನೆ ತಾಲೂಕಿನ ಯಂಬಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಯಂಬಳಿ ವಡರಹಟ್ಟಿಯ ನೀಲಪ್ಪರ ಶರಣಪ್ಪ ಎಂಬುವವರ ಜಮೀನಿನಲ್ಲಿ ಅಳವಡಿಸಿದ್ದ ಖಾಸಗಿ ಕಂಪನಿಯ ವಿಂಡ್ ಫ್ಯಾನ್gಗೆ ಸಿಡಿಲು ಬಡಿದು ಹೊತ್ತಿ ಉರಿದಿದ್ದು, ದಟ್ಟ ಹೊಗೆ ಆವರಿಸಿಕೊಂಡಿದೇ. ಸಮೀಪಕ್ಕೆ ಸ್ಥಳೀಯರನ್ನು ಬಿಡದಂತೆ ಕಂಪನಿಯವರು ತಡೆದಿದ್ದಾರೆ.
ತಾಲೂಕಿನಾದ್ಯಂತ ಸಿಡಿಲು ಗುಡುಗು ಸಹಿತ ಸಾಧಾರಣ ಮಳೆಯಾಗಿದೆ, ಅಕಾಲಿಕವಾಗಿ ಸೋಮವಾರ ಸಂಜೆ ಧಿಡೀರ್ ಮಳೆಯಾದರಿಂದ ರೈತಾಪಿ ವರ್ಗ ಜಾನುವಾರುಗಳಿಗೆ ಮೇವು ಹಾಗು ಕಟಾವು ಮಾಡಿದ್ದ ರಾಗಿಯನ್ನು ರಕ್ಷಿಸಿಕೊಳ್ಳಲು ಪರದಾಡಿದರು.
ಇನ್ನು ಪವನ ವಿದ್ಯುತ್ ಯಂತ್ರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

