ಕೊಟ್ಟೂರು: ಅಂಚೆ ಇಲಾಖೆ ನೌಕರನೊಬ್ಬ ಇಲಾಖೆ ಮೇಲಿನ ಅಭಿಮಾನ ಹಾಗೂ ಋಣ ತೀರಿಸುವದಕ್ಕಾಗಿ ತಾನು ನಿರ್ಮಿಸಿರುವ ‘ಮನೆಗೆ ಅಂಚೆ ಮನೆ’ ಎಂಬ ಹೆಸರು ನಾಮಕರಣ ಮಾಡಿರುವುದಲ್ಲದೇ, ಮನೆ ಪ್ರವೇಶ ಆಮಂತ್ರಣ ಪತ್ರಿಕೆ ಅಂಚೆ ಕಾರ್ಡ್ ನಲ್ಲಿ ಮುದ್ರಿಸುವ ಮೂಲಕ ಗಮನ ಸೆಳೆದಿದ್ದಾರೆ.
34 ವರ್ಷಗಳಿಂದಿರುವ ಅಂಚೆ ಇಲಾಖೆಯಲ್ಲಿ ಕೆಲಸ ಮಾಡ್ತಿರೋ ಕೆ.ಕೊಟ್ರೇಶ ಅವರು ಅಂಚೆ ಕೊಟ್ರೇಶ ಎಂದೇ ಪರಿಚಿತರು. ಕೊಟ್ಟೂರಿನಲ್ಲಿ ಈ ಹೆಸರಿನವರು ಸಾಕಷ್ಟು ಜನರಿರುವುರಿಂದ ಮತ್ತು ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಇವರ ಹೆಸರಿನೊಂದಿಗೆ ಅಂಚೆ ಸೇರಿಕೊಂಡಿದೆ. ಅಂಚೆ ಸಹಾಯಕರಾಗಿ ಸೇರಿದ್ದ ಇವರು ಕೊಟ್ಟೂರು, ಧಾರವಾಡ, ಕಲಬುರಗಿ, ಯಾದಗಿರಿ, ಕಂಪ್ಲಿ, ಬಳ್ಳಾರಿ, ಕೂಡ್ಲಿಗಿ, ಹರಪನಹಳ್ಳಿಗಳಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಹೂ.ಹಡಗಲಿ ಕಚೇರಿಯಲ್ಲಿ ತಾಲೂಕು ಪೋಸ್ಟ್ ಮಾಸ್ಟರ್ ಆಗಿದ್ದಾರೆ.
ಕೊಟ್ಟೂರಿನ ಬಸವೇಶ್ವರ ನಗರದಲ್ಲಿ ನಿರ್ಮಿಸಿರುವ ಹೊಸ ಮನೆಗೆ ‘ ಅಂಚೆ ಮನೆ’ ಎಂದು ಹೆಸರಿಟ್ಟು, ಅಕ್ಟೋಬರ್ 26 ರಂದು ಗೃಹ ಪ್ರವೇಶ ಮಾಡ್ತಿದ್ದಾರೆ. ಆಡಂಬರದ ಅಮಂತ್ರಣ ಪತ್ರಿಕೆ ಮುದ್ರಣ ಮಾಡಿಸದೇ, 2 ಸಾವಿರ ಅಂಚೆ ಕಾರ್ಡ್ ಖರೀದಿಸಿ ಅದರಲ್ಲಿಯೇ ಮುದ್ರಣ ಮಾಡಿಸಿ ಹಂಚಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

