ಹೊಸಪೇಟೆಯಲ್ಲಿ ಹೊಟೇಲ್ ಉದ್ಯಮಿಯ ಮೇಲೆ ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ(ED) ದಾಳಿ ನಡೆಸಿದೆ.
ಶ್ರೀನಿವಾಸ್ ರಾವ್( ಸೀನಾಬಾಬು ) ರವರ ಪ್ರಿಯದರ್ಶನೀ ಹೋಟೆಲ್, ವಿನಾಯಕ ನಗರದ ಮನೆ ಮತ್ತು ಬಸವೇಶ್ವರ ಬಡಾವಣೆಯ ಮನೆಯ ಮೇಲೆ ಇಡಿ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಸೀನಬಾಬು, ಗಣಿ ಗುತ್ತಿಗೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು ಹಾಗೂ ಪ್ರೀಯದರ್ಶನಿ ಹೋಟೆಲ್ ನ ಲೆಕ್ಕಪತ್ರ ವ್ಯವಹಾರದಲ್ಲಿ ವ್ಯತ್ಯಾಯ ಇರೋ ಕಾರಣದಿಂದಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳಗ್ಗೆಯೇ ಬಂದು ದಾಳಿ ಮಾಡಿರೋ ED ಅಧಿಕಾರಿಗಳು, ಹೊಸಪೇಟೆಯ ರೈಲ್ವೇ ನಿಲ್ದಾಣ ರಸ್ತೆಯಲ್ಲಿರೋ ಪ್ರಿಯದರ್ಶಿನಿ ಹೊಟೇಲ್ ನಲ್ಲಿ ಲೆಕ್ಕಪತ್ರ ಪರಿಶೀಲನೆ ನಡೆಸುತ್ತಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

