ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ರೈತರು ವಿಭಿನ್ನ ಪ್ರತಿಭಟನೆ ಮಾಡಿದ್ದಾರೆ. ಈರುಳ್ಳಿ ಚೀಲ ತುಂಬಿ, ಚಟ್ಟ ಕಟ್ಟಿ ಈರುಳ್ಳಿ ಬೆಳೆಗಾರರು ಶವಯಾತ್ರೆ ಮಾಡಿದ್ದಾರೆ.
ಈರುಳ್ಳಿಗೆ ಬೆಂಬಲ ಬೆಲೆ ಇಲ್ಲ, ರಾಜ್ಯ ಸರ್ಕಾರ ಈರುಳ್ಳಿ ಬೆಳೆಗಾರರ ನೇರವಿಗೆ ಬರ್ತಿಲ್ಲ, ಬೆಳೆದ ಬೆಳೆಗೆ ಮಾಡಿದ ಸಾಲ ತೀರಿಸಲು ಸಹ ಬೆಳೆ ಕೈ ಸೇರ್ತಿಲ್ಲ. ಸಾಲ ಮಾಡಿಯೇ ಜೀವನ ಕಳೆಯುವ ಪರಿಸ್ಥಿತಿ ಇದೆ . ಈ ಪರಿಸ್ಥಿತಿಗೆ ರಾಜ್ಯ ಸರ್ಕಾರ ಕಾರಣವೆಂದು ರೈತರು ಆಕ್ರೋಶ ಹೊರ ಹಾಕಿದರು. ಒಂದು ಕಡೆ ಶವಯಾತ್ರೆ ಮತ್ತೊಂದು ಕಡೆ ಕೈಯಲ್ಲಿ ವಿಷದ ಬಾಟಲ್ ಹಿಡಿದು ಪ್ರತಿಭಟನೆ ಮಾಡಲಾಗಿದೆ. ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಇಲ್ಲದೇ, ಅನ್ನದಾತರು ರೋಸಿ ಹೋಗಿದ್ದಾರೆ.
Trending
- ಶಾಲೆಗಳು ಧಾರ್ಮಿಕ ಕೇಂದ್ರಗಳಾಗಬಾರದು: ಡಾ. ಶ್ರೀನಿವಾಸ್ ಎನ್ ಟಿ
- ಬಾಲಕಿಯರ ವಸತಿ ನಿಲಯಕ್ಕೆ ತಹಶೀಲ್ದಾರ್ ನೇತ್ರಾವತಿ ದಿಢೀರ್ ಭೇಟಿ
- ಕಾನಮಡಗು ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ಸಂಪನ್ನ
- ಕ್ಷೇತ್ರದ ಜನರು ಶಿಕ್ಷಣದಿಂದ ವಂಚಿತರಾಗಬಾರದು
- ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ರಸ್ತೆ ಅಪಘಾತದಲ್ಲಿ ನಿಧನ
- ಅಭಕಾಸ್ ವೇದಿಕ್; ಗಣಿತ ಚಾಂಪಿಯನ್ ಟ್ರೋಫಿ ಪರೀಕ್ಷೆ
- ವೈಭವ ಶಾಲೆಗೆ ರಾಜ್ಯ ಮಟ್ಟದ ಪ್ರಶಸ್ತಿ
- ಕೂಡ್ಲಿಗಿ: ಬೈಕ್ ಡಿಕ್ಕಿ; ಇಬ್ಬರು ಸಾವು

