ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್.ಟಿ ಶ್ರೀನಿವಾಸ್ ಅವರು ತಾಲೂಕಿನ ಸೂಲದಹಳ್ಳಿಯಲ್ಲಿ (ಅ.8) ನಾಳೆ ಮನೆ-ಮನೆಗೂ ಶಾಸಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲಿದೆ. ಗ್ರಾಮ ಪಂಚಾಯ್ತಿ ಆವರಣದಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆ ಮೂಲಕ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸೇರಿದಂತೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಭಾಗಿಯಾಗಲ್ಲಿದ್ದು, ಸ್ಥಳದಲ್ಲೇ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಶಾಸಕರ ಕಚೇರಿ ಪ್ರಕಟಣೆ ಮೂಲಕ ತಿಳಿಸಿದೆ.
Author: Team Sanchalana
ವಿಜಯನಗರದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮೂರು ಕರಡಿಗಳು ಕಾವಲುಗಾರನ ಮೇಲೆ ದಾಳಿ ಮಾಡಿವೆ. ಕರಡಿಗಳ ದಾಳಿಗೆ ಒಳಗಾದ ಕಾವಲುಗಾರ ನಿಂಗಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕುಲಪತಿಗಳ ವಸತಿ ಗೃಹದ ಮುಂದೆ ಇರುವ ರಸ್ತೆಯಲ್ಲಿ ನಿಂತಿದ್ದ ನಾಯಕರ ನಿಂಗಪ್ಪನ ಮೇಲೆ ಹಲ್ಲೆ ನಡೆಸಲು ಓಡಿ ಬಂದ ಕರಡಿಗಳಿಂದ ತಪ್ಪಿಸಿಕೊಳ್ಳಲು ಗಾಬರಿಯಿಂದ ಓಡಿ ಹೋಗುವಾಗ ನೆಲಕ್ಕೆ ಬಿದ್ದು ಸಣ್ಣ ಪುಟ್ಟ ಗಾಯ ಮಾಡಿಕೊಂಡಿರುವ ನಾಯಕರ ನಿಂಗಪ್ಪನು, ಮತ್ತೆ ಜೀವ ಭಯದಲ್ಲಿ ಕುಲಪತಿಗಳ ಹೊರ ಕೊಠಡಿಯಲ್ಲಿ ಅವಿತುಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ರೈತರು ವಿಭಿನ್ನ ಪ್ರತಿಭಟನೆ ಮಾಡಿದ್ದಾರೆ. ಈರುಳ್ಳಿ ಚೀಲ ತುಂಬಿ, ಚಟ್ಟ ಕಟ್ಟಿ ಈರುಳ್ಳಿ ಬೆಳೆಗಾರರು ಶವಯಾತ್ರೆ ಮಾಡಿದ್ದಾರೆ. ಈರುಳ್ಳಿಗೆ ಬೆಂಬಲ ಬೆಲೆ ಇಲ್ಲ, ರಾಜ್ಯ ಸರ್ಕಾರ ಈರುಳ್ಳಿ ಬೆಳೆಗಾರರ ನೇರವಿಗೆ ಬರ್ತಿಲ್ಲ, ಬೆಳೆದ ಬೆಳೆಗೆ ಮಾಡಿದ ಸಾಲ ತೀರಿಸಲು ಸಹ ಬೆಳೆ ಕೈ ಸೇರ್ತಿಲ್ಲ. ಸಾಲ ಮಾಡಿಯೇ ಜೀವನ ಕಳೆಯುವ ಪರಿಸ್ಥಿತಿ ಇದೆ . ಈ ಪರಿಸ್ಥಿತಿಗೆ ರಾಜ್ಯ ಸರ್ಕಾರ ಕಾರಣವೆಂದು ರೈತರು ಆಕ್ರೋಶ ಹೊರ ಹಾಕಿದರು. ಒಂದು ಕಡೆ ಶವಯಾತ್ರೆ ಮತ್ತೊಂದು ಕಡೆ ಕೈಯಲ್ಲಿ ವಿಷದ ಬಾಟಲ್ ಹಿಡಿದು ಪ್ರತಿಭಟನೆ ಮಾಡಲಾಗಿದೆ. ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಇಲ್ಲದೇ, ಅನ್ನದಾತರು ರೋಸಿ ಹೋಗಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ (ಜಾತಿ ಸಮೀಕ್ಷೆ) ಅವಧಿಯನ್ನು ಶಿಕ್ಷಣ ಇಲಾಖೆ ವಿಸ್ತರಿಸಿದೆ. ಅಕ್ಟೋಬರ್ 7 ರಂದು ಕೊನೆಗೊಳ್ಳಬೇಕಿದ್ದ ಸಮೀಕ್ಷಾ ಕಾರ್ಯವನ್ನು ಅಕ್ಟೋಬರ್ 12 ರವರೆಗೆ ವಿಸ್ತರಿಸಲಾಗಿದೆ. ಬೆಂಗಳೂರಿನಲ್ಲಿ ಒಂದು ವಾರದಷ್ಟು ತಡವಾಗಿ ಆರಂಭವಾಗಿದ್ದರಿಂದ, ಬೆಂಗಳೂರಿನಲ್ಲಿ ಸಮೀಕ್ಷೆಯನ್ನು ಅಕ್ಟೋಬರ್ 24 ರವರೆಗೆ ವಿಸ್ತರಿಸಲಾಗಿದೆ. ಶಿಕ್ಷಣ ಇಲಾಖೆಯು ಇನ್ನು ಮುಂದೆ ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಾಲಾ ತರಗತಿಗಳನ್ನು ಮುಗಿಸಿ, ಮಧ್ಯಾಹ್ನದ ನಂತರ ಸಮೀಕ್ಷೆ ನಡೆಸುವಂತೆ ಸೂಚಿಸಿದೆ. ಸಮೀಕ್ಷೆಯ ಪ್ರಗತಿ ರಾಜ್ಯದಲ್ಲಿ ಈವರೆಗೆ ಶೇ. 80.39 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. 1.43 ಕೋಟಿ ಮನೆಗಳ ಪೈಕಿ 1.15 ಕೋಟಿ ಮನೆಗಳ ಸಮೀಕ್ಷೆ ಮುಗಿದಿದೆ. ಇದುವರೆಗೆ 4.32 ಕೋಟಿ ಜನರು ಗಣತಿ ವ್ಯಾಪ್ತಿಗೆ ಬಂದಿದ್ದಾರೆ. ಇಂದು (ಸಮೀಕ್ಷೆ ನಡೆದ ದಿನ) 5,52,345 ಮನೆಗಳ ಸಮೀಕ್ಷೆ ಆಗಿದೆ ಬೆಂಗಳೂರಿನಲ್ಲಿ ಇಂದು 1.36 ಲಕ್ಷ ಮನೆಗಳು ಸೇರಿದಂತೆ, ಒಟ್ಟು 2.60 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಎದುರಾದ ಸಮಸ್ಯೆಗಳು ಮತ್ತು…
