Author: Team Sanchalana

ಕೂಡ್ಲಿಗಿ: ತಾಲೂಕಿನ ಗುಡೇಕೋಟೆ ಸಮೀಪದ ಕಸಾಪುರ ಗ್ರಾಮದಲ್ಲಿ ನಿರ್ಮಾಣವಾಗಿರುವ ರಾಜ್ಯದಲ್ಲಿ ಮೊದಲ ಹುಣಸೆಹಣ್ಣು ಮತ್ತು ಶೇಂಗಾ ಸಂಸ್ಕರಣ ಘಟಕಕ್ಕೆ ಭಾನುವಾರ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೆರೆ ಭೇಟಿ ನೀಡಿ ಪರಿಶೀಲಿಸಿದರು. ಕೂಡ್ಲಿಗಿ ತಾಲೂಕು ರಾಜ್ಯದಲ್ಲಿ ಅತೀ ಹೆಚ್ಚು ಹುಣಸೆಹಣ್ಣು ಉತ್ಪಾದನೆ ಮಾಡುತ್ತಿರುವ ಕಾರಣ ಸರ್ಕಾರ ಮತ್ತು ನಬಾರ್ಡ್ ಸಹಯೋಗದಲ್ಲಿ 4.5 ಕೋಟಿ ವೆಚ್ಚದಲ್ಲಿ ಈ ಘಟಕವನ್ನು ನಿರ್ಮಿಸಲಾಗಿದ್ದು, ಘಟಕದ ಕಾಮಗಾರಿ ಪೂರ್ಣಗೊಂಡಿದೆ. ಅ 17ರಂದು ಘಟಕವು ಉದ್ಘಾಟನೆಗೊಳ್ಳಲ್ಲಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಾಲ ಸೀತಾರಾಮನ್ ಅಗಮಿಸುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಅಲ್ಲದೆ, ಸಂಸ್ಕರಣ ಘಟಕದ ಮುಂದಿರುವ ಖಾಲಿಜಾಗದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲ್ಲಿದ್ದು, ಆ ಜಾಗವನ್ನು ಪರಿಶೀಲಿಸಿದರು ಮತ್ತು ಕಾರ್ಯಕ್ರಮಕ್ಕೆ ಅಗಮಿಸಿವ ಜನರ ಹಾಗೂ ಪೂರ್ವ ಸಿದ್ದತೆ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ, ಶನಿವಾರ ಸಂಜೆ ಸಹ ವಿಜಯನಗರ ಎಸ್ಪಿ ಎಸ್.ಜಾಹ್ನವಿ ಸಹ ಭೇಟಿ ನೀಡಿ ಕಾರ್ಯಕ್ರಮದ ಸಿದ್ದತೆ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕೂಡ್ಲಿಗಿ…

Read More

d0824820-518c-4aec-848f-2b35d28404a1ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ ಎಂದು ಹಿರಿಯ ಶಾಸಕ ಗವಿಯಪ್ಪ ರಾಜ್ಯ ಸರ್ಕಾರದ ಪರ ಬ್ಯಾಟ್ ಬೀಸಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಪುರಸಭೆ ಹೊಸ ಕಟ್ಟಡ ಉದ್ಘಾಟನೆ ವೇಳೆ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅನುದಾನದ ಸಮಸ್ಯೆ ಇಲ್ಲ, ಸಿಎಂ ಸಿದ್ದರಾಮಯ್ಯ ಪ್ರತಿ ಕ್ಷೇತ್ರಗಳಿಗೆ 50 ರಿಂದ 80 ಕೋಟಿ ರೂ.ವರೆಗೆ ವಿಶೇಷ ಅನುದಾನ‌ ಕೊಡುತ್ತಿದ್ದಾರೆ ಎಂದರು. ಕಮಲಾಪುರ ಆಡಳಿತದಲ್ಲಿ ಜನ ಪ್ರತಿನಿಧಿಗಳು, ಅಧಿಕಾರಿಗಳಿಗೆ ಎಂದಿಗೂ ಮುಂದಾಲೋಚನೆ ಹೆಚ್ಚಿದೆ. ಈ ನೂತನ ಕಚೇರಿ ಭವ್ಯವಾದ ಕಟ್ಟಡ ಮುಂದಿನ ಪೀಳಿಗೆಗೆ ಕೊಡುಗೆಯಾಗಿದೆ. ಪಟ್ಟಣದಲ್ಲಿ ಕುಡಿವ ನೀರಿನ ವ್ಯವಸ್ಥೆ, ಒಳಚರಂಡಿ ಸೇರಿದಂತೆ ಇತರೆ ಕಾರ್ಯಗಳಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ, ಆದ್ದರಿಂದ ಕಮಲಾಪುರ ಅಭಿವೃದ್ಧಿಗಾಗಿ 15 ಕೋಟಿ ರೂ. ಬಿಡುಗಡೆ ನೀಡಿರುವೆ, ಒಂದು ತಿಂಗಳ ಒಳಗೆ ಅಭಿವೃದ್ಧಿ ಕಾರ್ಯಗಳು ಆರಂಭ ಆಗಲಿದೆ ಎಂದರು. ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಫುಡ್ ಕೋಟ್‌ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ನೀಡಲಾಗುತ್ತದೆ, ಹಂಪಿ ಇಲ್ಲೇ…

Read More

ಬೆಂಗಳೂರಿನ ಬಾಗಲಗುಂಟೆಯ ಭುವನೇಶ್ವರಿ ನಗರದಲ್ಲಿ ತಾಯಿ ಇಬ್ಬರು ಮಕ್ಕಳನ್ನು ಕೊಂದು ತಾನು ಸಹ ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ವರದಿಯಾಗಿದೆ. ಮೃತರನ್ನು ತಾಯಿ ವಿಜಯಲಕ್ಷ್ಮಿ ಮತ್ತು ಆಕೆಯ ಮಕ್ಕಳಾದ ಒಂದು ವರ್ಷದ ಭುವನ್ ಮತ್ತು ನಾಲ್ಕು ವರ್ಷದ ಬೃಂದಾ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ವಿಜಯಲಕ್ಷ್ಮಿಯ ತಂಗಿ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಮೂವರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೂಲತಃ ರಾಯಚೂರಿನ ಮಸ್ಕಿ ನಿವಾಸಿಗಳಾದ ರಮೇಶ್ ಮತ್ತು ವಿಜಯಲಕ್ಷ್ಮಿ ಅವರಿಗೆ ಮದುವೆಯಾಗಿ ಐದು ವರ್ಷಗಳಾಗಿತ್ತು. ರಮೇಶ್ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಕೌಟುಂಬಿಕ ಕಲಹದಿಂದಾಗಿ ಈ ಆತ್ಮಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ವಿಜಯಲಕ್ಷ್ಮಿಯ ಸಂಬಂಧಿಕರು ಆಕೆಯ ಆತ್ಮಹತ್ಯೆಗೆ ಪತಿ ರಮೇಶ್ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ರಮೇಶ್ ಮತ್ತೊಂದು ಮದುವೆಯಾಗಿದ್ದು, ವಿಜಯಲಕ್ಷ್ಮಿಗೆ ವಿಚ್ಛೇದನ ನೀಡುವಂತೆ ಒತ್ತಡ ಹೇರುತ್ತಿದ್ದರು, ಇದರಿಂದಾಗಿ ಕುಟುಂಬದಲ್ಲಿ ಪದೇ ಪದೇ ಜಗಳಗಳು ನಡೆಯುತ್ತಿದ್ದವು. ಪತಿಯ ಹಿಂಸೆಯಿಂದ ಬೇಸತ್ತು ವಿಜಯಲಕ್ಷ್ಮಿ ತನ್ನ ಮಕ್ಕಳನ್ನು ಕೊಂದು…

Read More

ಮೈಸೂರು-ಕೊಡಗು ಹೆದ್ದಾರಿಯ ಹುಣಸೂರು ತಾಲೂಕಿನ ಬನ್ನಿಕುಪ್ಪೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸಿಮೆಂಟ್ ಲಾರಿ ಮತ್ತು ಬಸ್‌ ನಡುವಿನ ಈ ಡಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಬಸ್‌ನ ಚಾಲಕ ಮತ್ತು ಕ್ಲೀನರ್ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಬಸ್‌ನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸಿಮೆಂಟ್ ಲಾರಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಕೇರಳದಿಂದ ಮೈಸೂರಿನ ಕಡೆಗೆ ಬರುತ್ತಿದ್ದ ಬಸ್‌ಗೆ, ಮೈಸೂರಿನಿಂದ ಕೇರಳ ಕಡೆಗೆ ಹೊರಟಿದ್ದ ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿದೆ, ಅಪಘಾತಕ್ಕೀಡಾದ ಎರಡೂ ವಾಹನಗಳು ಕೇರಳ ಮೂಲದವು. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮೃತದೇಹಗಳನ್ನು ಹುಣಸೂರು ಸರ್ಕಾರಿ ಆಸ್ಪತ್ರೆಗೆರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಕೂಡ್ಲಿಗಿ; ಕ್ಷೇತ್ರದ ಪ್ರತಿಯೊಬ್ಬ ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಮನೆ ಮನೆಗು ಶಾಸಕರು ಎನ್ನುವ ವಿನೂತನ ಕಾರ್ಯಕ್ರಮ ಕೈಗೊಂಡಿದ್ದೇವೆ ಎಂದು ಶಾಸಕ ಡಾ ಶ್ರೀನಿವಾಸ್ ಎನ್ ಟಿ ಹೇಳಿದರು. ತಾಲೂಕಿನ ಸೂಲದಹಳ್ಳಿಯಲ್ಲಿ ಮನೆ ಮನೆಗೆ ನಮ್ಮ ಶಾಸಕರು, ಮನೆ ಬಾಗಿಲಿಗೆ ನಮ್ಮ ಸರ್ಕಾರ ಹಾಗೂ ಶಾಲಾ ಪ್ರಾರಂಭೊತ್ಸವ, ಅಂಗನವಾಡಿ ಶಾಲೆಗಳಿಗೆ ಹಾಗೂ ಇ ಸ್ವತ್ತು ವಿತರಣ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆ ಸೇರಿದಂತೆ ಸರ್ಕಾರದ ಸವಲತ್ತುಗಳು ಜನತೆಗೆ ತಲುಪಿಸುವ ಉದ್ದೇಶವಾಗಿದೆ ಎಂದ ಅವರು, ಕ್ಷೇತ್ರದಲ್ಲಿ ನಿರುದ್ಯೋಗ, ವಸತಿ ಸೌಕರ್ಯಗಳನ್ನು ಹಂತ ಹಂತವಾಗಿ ಬಗೆಹರಿಸಲು ಸೂಕ್ತ ಕ್ರಮಕೈಗೊಳಲಾಗುವುದು ಜತೆಗೆ ರಸ್ತೆ, ಚರಂಡಿ ಮೂಲಭೂತ ಸೌಕರ್ಯಗಳಿಗೆ ಈಗಾಗಲೇ ಸಾಕಷ್ಟು ಅನುಧಾನ ನೀಡಿದ್ದು, ಇನ್ನು ಹೆಚ್ಚಿನ ಕಾಳಜಿವಹಿಸಿ ಅನುದಾನ ನೀಡಲಾಗುವುದು ಎಂದರು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಉಸ್ತುವಾರಿ ಸಚಿವರು ನನಗೆ ವಿಶೇಷ ಒತ್ತು ನೀಡಿ ಹೆಚ್ಚಿನ ಅನುದಾನ ನೀಡಿದ್ದಾರೆ. ನವೆಂಬರ್ 9 ರಂದು ಕ್ಷೇತ್ರದ ದಶಕಗಳ ಬೇಡಿಕೆಯಾದ 74 ಕೆರೆಗಳಿಗೆ…

Read More

ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಘಟನೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಳನ್ನು ಹೊತ್ತ ಟ್ರಕ್‌ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸರಣಿ ಸ್ಫೋಟಗಳು ಸಂಭವಿಸಿವೆ. ಈ ಸ್ಫೋಟದಿಂದಾಗಿ ಏಳು ವಾಹನಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಚಾಲಕ ರಸ್ತೆ ಬದಿಯಲ್ಲಿ ಟ್ರಕ್ ನಿಲ್ಲಿಸಿ ಊಟಕ್ಕೆ ಹೋಗಿದ್ದಾಗ, ತಿರುವು ಪಡೆಯುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡು, ನಂತರ ಗ್ಯಾಸ್ ಸಿಲಿಂಡರ್‌ಗಳು ಒಂದರ ನಂತರ ಒಂದರಂತೆ ಸ್ಫೋಟಗೊಂಡಿವೆ. ಸ್ಫೋಟದ ಸದ್ದು ಮತ್ತು ಬೆಂಕಿಯ ಜ್ವಾಲೆಗಳು ಬಹುದೂರದವರೆಗೆ ಕೇಳಿಸಿವೆ ಹಾಗೂ ಕಾಣಿಸಿವೆ. ಘಟನೆಯಲ್ಲಿ ಗಾಯಗೊಂಡ ಮೂವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ದಳವು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಿಸಿದೆ.

Read More

ಶಾಲೆ ಬೀಗ ಮುರಿದು ಬ್ಯಾಟರಿಗಳ ಕಳ್ಳತನ ಮಾಡಿರುವ ಘಟನೆ ಹೂವಿನಹಡಗಲಿ ತಾಲೂಕಿನ ಮೀರಾಕೊರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗ್ರಾಮದ ಶರಣಬಸವೇಶ್ವರ ಸರ್ಕಾರಿ ಪ್ರೌಢಶಾಲೆಯ ಬಾಗಿಲು ಮುರಿದು ಕಂಪ್ಯೂಟರ್ ತರಬೇತಿ ಕೊಠಡಿಯಲ್ಲಿದ್ದ 16 ಬ್ಯಾಟರಿಗಳು ಖದೀಮರು ಕಳ್ಳತನ ಮಾಡಿದ್ದಾರೆ. ಗ್ರಾಮದ ಶಾಲಾ ಆವರಣದಲ್ಲಿ ವಾಯುವಿಹಾರಕ್ಕೆ ಗ್ರಾಮಸ್ಥರು ತೆರಳಿದ ಸಂದರ್ಭದಲ್ಲಿ ಶಾಲೆಯ ಬಾಗಿಲು ಮುರಿದಿರುವುದು ಕಂಡು ಬಂದಿದೆ, ಕಂಪ್ಯೂಟರ್ ತರಬೇತಿ ಕೊಠಡಿಯಲ್ಲಿದ್ದ 16 ಬ್ಯಾಟರಿಗಳಿಗೆ ಸಂಪರ್ಕ ಕಲ್ಪಿಸುವ ತಂತಿಗಳು ತುಂಡಾಗಿ ಬಿದ್ದು ಬ್ಯಾಟರಿಗಳು ಕಣ್ಮರೆಯಾಗಿವೆ. ಇದರಿಂದ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿ ಕ್ಯಾಮರಗಳನ್ನು ಪರಿಶೀಲಿಸಿದಾಗ ಇಬ್ಬರು ಯುವಕರು ಬ್ಯಾಟರಿಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ.

Read More

ಕೂಡ್ಲಿಗಿ: ಇಂದಿನ ಜಗತ್ತಿಗೆ ಕೂಡ ಆಧ್ಯಾತ್ಮಿಕತೆ ಮತ್ತು ಮಾನವೀಯತೆಯ ದಾರಿ ತೋರಿಸುವಂತಹ ವಾಲ್ಮೀಕಿ ಮಹರ್ಷಿಗಳ ಜೀವನ ಸದಾ ಪ್ರೇರಣದಾಯಕ, ಅವರ ಜಯಂತಿಯದು ನಾವೆಲ್ಲರೂ ಜೀವನದ ಆದರ್ಶಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣವೆಂದು ಕೂಡ್ಲಿಗಿ ಶಾಸಕಡಾ. ಶ್ರೀನಿವಾಸ್ ಎನ್.ಟಿ ಹೇಳಿದರು. ತಾಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದರು, ತಳ ಸಮುದಾಯದಲ್ಲಿ ಹುಟ್ಟಿದ ವಾಲ್ಮೀಕಿ ರಾಮಾಯಣದಂತ ಮಹಾಕಾವ್ಯವನ್ನು ರಚಿಸಿ ಮಹರ್ಷಿಗಳಾದರು, ಸಾಧನೆಗೆ ಜಾತಿ, ಕುಲ, ಧರ್ಮದ ಹಂಗಿಲ್ಲ ಶ್ರದ್ಧೆ ಮತ್ತು ಪರಿಶ್ರಮವಿದ್ದರೆ ಯಾರು ಬೇಕಾದವರು ಸಾಧನೆ ಮಾಡಬಹುದು ಎಂಬುದಕ್ಕೆ ವಾಲ್ಮೀಕಿ ಅವರೆ ನಮಗೆಲ್ಲರಿಗೂ ಆದರ್ಶನ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ವಿ ಕೆ ನೇತ್ರಾವತಿ, ಪಟ್ಟಣ ಪಂಚಾಯತ್ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ, ವಾಲ್ಮೀಕಿ ಸಣಘದ ಅಧ್ಯಕ್ಷ ಸುರೇಶ್, ಕಂಪ್ಯೂಟರ್ ರಾಘು ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಕೂಡ್ಲಿಗಿ; ತಾಲೂಕಿನ ಕಾನಹೊಸಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಶೇಷ ಹಾಗೂ ವಿಭಿನ್ನವಾಗಿ ಮಂಗಳವಾರ ಆಚರಿಸಲಾಯಿತು. ಪ್ರಯೋಗಶಾಲಾ ತಾಂತ್ರಿಕ ವಿಭಾಗದ ಅಧಿಕಾರಿ ಸೋಮಶೇಖರ ಕೆ ಆರ್‌, ಶೈಲಜಾ ಕೆ ಎಂ ದಂಪತಿಗಳು ಆರೋಗ್ಯ ಕೇಂದ್ರಕ್ಕೆ ಹದಿನೈದು ಸ್ವತಂತ್ರ್ಯ ಹೋರಾಟಗಾರರು ಮತ್ತು ವಚನಕಾರರ ಭಾವಚಿತ್ರಗಳನ್ನು ಕೊಡುಗೆಯಾಗಿ ನೀಡುವ ಮೂಲಕ ವಾಲ್ಮೀಕಿ ಮಹರ್ಷಿಯವರ ಜಯಂತುಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ನಂತರ ವೈದ್ಯಾಧಿಕಾರಿ ವಿಶ್ವನಾಥ ಎ ಕೆ ಮಾತನಾಡಿ, ರಾಮಾಯಣದಂತ ಮಹಾಕಾವ್ಯದಂತ ಮಹಾಗ್ರಂಥವನ್ನು ಸಮಾಜಕ್ಕೆ ನೀಡಿದ ಮಹರ್ಷಿ ವಾಲ್ಮೀಕಿಯವರು ವಿಶ್ವಕಂಡ ಮಹಾನ್‌ ದಾರ್ಶನಿಕ ಎಂದರು. ಈ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ಅಧಿಕಾರಿಗಳಾದ ಎಂ.ಬಿ ಭಾರತಿ, ರಮ್ಯಾ,  ರಾಘವರೆಡ್ಡಿ, ಶೈಲಾ ಸಿಬ್ಬಂದಿ ಲತಾ, ಸುಮಾ, ಸವಿತಾ, ಸುಧಾ, ರೇಖಾ, ಕೃಷ್ಣಾ ಮಹೇಂದ್ರಕರ್‌, ರವಿಕುಮಾರ್‌ , ಉಮಾದೇವಿ, ಶ್ರೀದೇವಿ  ಆಶಾ ಕಾರ್ಯಕರ್ತೆಯರು ಭಾಗಿಯಾಗಿದ್ದರು.

Read More

ಕೂಡ್ಲಿಗಿ: ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ತಿಳಿಸಿದವರು ಮಹರ್ಷಿ ವಾಲ್ಮೀಕಿಯವರು ಎಂದು ಉಪತಹಶೀಲ್ದಾರ್ ಮೊದಲಟ್ಟಿ ಹೇಳಿದರು. ತಾಲೂಕಿನ ಕಾನಹೊಸಹಳ್ಳಿಯ ನಾಡ ಕಚೇರಿಯಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದ ಅವರು, ಪರಿಶ್ರಮ ಮತ್ತು ಶ್ರದ್ದೆಯಿದ್ದರೆ ಏನಾನು ಬೇಕಾದರೂ ಸಾಧಿಸಲು ಸಾಧ್ಯವಾಗಬಲದ್ದು ಎಂಬುದಕ್ಕೆ ವಾಲ್ಮೀಕಿಯವರೇ ಸಾಕ್ಷಿ ಎಂದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಕೊಟ್ರೇಶ್, ಗ್ರಾಮ ಲೆಕ್ಕಾಧಿಕಾರಿ ಶ್ರೀನಿವಾಸ್ ಕೊಂಡಿ, ಗ್ರಾಮ ಪಂಚಾಯ್ತಿ ಸದಸ್ಯ ಹೊನ್ನುರಸ್ವಾಮಿ, ಮುಖಂಡರಾದ ಶರತ್ ಕುಮಾರ್, ಬಸವರಾಜ್ ಪಾಲ್ಗೊಂಡಿದ್ದರು.

Read More