ಕೂಡ್ಲಿಗಿ; ಕಾನಹೊಸಹಳ್ಳಿ ಭಾಗದಲ್ಲಿ ಮಂಗಳವಾರ ಸಂಜೆ ಬೀಸಿದ ಬಿರುಗಾಳಿಗೆ ಯಂಬಳಿ ವಡ್ಡರಹಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಚಾವಣಿ ಶೀಟ್ಗಳು ಹಾರಿ ಹೋಗಿದ್ದರೆ, ಅದೇ ಗ್ರಾಮದ ರೈತ ಚನ್ನಬಸಪ್ಪ ಎಂಬುವವರಿಗೆ ಸೇರಿದ ಕೋಳಿ ಫಾರಂ ಶೆಡ್ ಸಂಪೂರ್ಣ ನೆಲಕ್ಕುರುಳಿದೆ. ಬಿರುಗಾಳಿ ಸಹಿತ ತಾಲೂಕಿನ ಅಲ್ಲಲ್ಲಿ ಮಳೆಯಾಗಿದ್ದು, ಯಂಬಳಿ ವಡ್ಡರಹಟ್ಟಿ ಗ್ರಾಮದಲ್ಲಿ ಅಪಾರ ಹಾನಿಯಾಗಿದೆ.
ಸರಕಾರಿ ಶಾಲೆಯ ಆರ್ಸಿಸಿ ಕಟ್ಟಡದ ಚಾವಣಿ ಮಳೆಗೆ ಸೋರದಂತೆ ತಗಡಿನ ಶೀಟ್ಗಳ ಟ್ರಸ್ ರೂಫಿಂಗ್ ಹಾಕಲಾಗಿತ್ತು. ಬೀಸಿದ ಬಿರುಗಾಳಿಯಿಂದ ಎರಡು ಕೊಠಡಿಗಳಿಗೆ ಹಾಕಿದ್ದ ತಗಡಿನ ಶೀಟ್ಗಳೆಲ್ಲವೂ ಹಾರಿ ಬಿದ್ದಿದ್ದು, ಆ ಸಂದರ್ಭದಲ್ಲಿ ಯಾರೂ ಇರಲಿಲ್ಲವಾದ್ದರಿಂದ ಯಾವುದೇ ತೊಂದರೆಯಾಗಿಲ್ಲ. ಈಗ ಶಾಲೆಗೆ ರಜೆ ಇರುವುದರಿಂದ ಕೆಲ ವಿದ್ಯಾರ್ಥಿಗಳು, ಯುವಕರು ಶಾಲೆಯ ಬಳಿ ಆಗಾಗ ಆಟವಾಡುತ್ತಿದ್ದರು. ಆದರೆ, ಗಾಳಿಗೆ ಶೀಟ್ ಹಾರಿ ಬಿದ್ದಿರುವ ಸಂದರ್ಭದಲ್ಲಿ ಯಾರೂ ಇರಲಿಲ್ಲ ಎಂಬುದು ಸಮಾಧಾನ ತಂದಿದೆ ಎನ್ನುತ್ತಾರೆ ಯಂಬಳಿ ವಡ್ಡರಹಟ್ಟಿಯ ನಿವಾಸಿ ದಿನೇಶ್ ಅವರು. ಇನ್ನು, ರೈತ ಚನ್ನಬಸಪ್ಪ ಅವರಿಗೆ ಸೇರಿದ ಯಂಬಳಿ ವಡ್ಡರಹಟ್ಟಿ ಮತ್ತು ಸುಲ್ತಾನ್ಪುರ ಮಧ್ಯೆ ಇರುವ ಕೋಳಿ ಸಾಕಣೆ ಶೆಡ್ ಸಂಪೂರ್ಣ ನೆಲಕ್ಕುರುಳಿ ಅಪಾರ ನಷ್ಟ ಸಂಭವಿಸಿದೆ. ಇದಲ್ಲದೆ, ಅದೇ ಗ್ರಾಮದ ಮಾರಪ್ಪ, ಗಂಗಪ್ಪ ಎಂಬುವವರ ಮನೆ ಮುಂಭಾಗದ ಶೀಟ್ಗಳು ಹಾರಿ ಹೋಗಿವೆ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಧರ್ಮೇಂದ್ರ ನಾಯ್ಕ ಸೇರಿ ಗ್ರಾಪಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
Trending
- ಬಿರುಗಾಳಿಗೆ ಹಾರಿಹೋದ ಶಾಲೆಯ ಶೀಟ್
- ಇಬ್ಬರು ವಂಚಕರ ಬಂಧನ; ₹29.50 ಲಕ್ಷ ವಶ
- ಸಿಡಿಲು ಬಡಿದು ಹೊತ್ತಿ ಉರಿದ ವಿಂಡ್ ಫ್ಯಾನ್
- ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಮತ್ತು ಮಹಿಳಾ ಸಾಧಕರಿಗೆ ಸನ್ಮಾನ
- ಕೇಂದ್ರದ ವಿರುದ್ಧ ಶಾಸಕ ಶ್ರೀನಿವಾಸ್ ಪ್ರತಿಭಟನೆ
- ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ
- ವಿದ್ಯಾರ್ಥಿಗಳಿಗೆ ಕಾನೂನು ಪಾಠ ಮಾಡಿದ ಪಿಎಸ್ಐ
- ಸ್ವಸ್ಥ ಮಣ್ಣಿನಿಂದಲೇ ಸ್ವಸ್ಥ ಆರೋಗ್ಯ : ಬಂಡ್ರಿ ದುರುಗಪ್ಪ

