ಕೂಡ್ಲಿಗಿ : ವಿದ್ಯಾರ್ಥಿ ದಿಸೆಯಲ್ಲಿ ಉತ್ತಮ ಗುರಿಯಿಟ್ಟುಕೊಂಡು ಮುನ್ನಡೆದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು, ಕಾನೂನಿನ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಅರಿವು ಮೂಡಿಸಿಕೊಂಡು ತಮ್ಮ ಪೋಷಕರಿಗೂ ಈ ಬಗ್ಗೆ ತಿಳಿಸಿ ಕೊಡಬೇಕು ಎಂದು ಪಿಎಸ್ಐ ಸಿದ್ದರಾಮಪ್ಪ ಬಿದರಾಣಿ ಹೇಳಿದರು.
ತಾಲೂಕಿನ ಕಾನಹೊಸಹಳ್ಳಿಯ ಪೊಲೀಸ್ ಠಾಣೆಗೆ ಕ್ಷೇತ್ರ ಪ್ರವಾಸ ಹಿನ್ನೆಲೆಯಲ್ಲಿ ಹುಲಿಕೆರೆ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸೋಮವಾರ ಭೇಟಿನಿಡಿದ ಸಂದರ್ಭದಲ್ಲಿ ಅವರಿಗೆ ಪೊಲೀಸ್ ಠಾಣೆ ಪರಿಚಯಿಸಿ ಕಾನೂನಿನ ಪಾಠ ಮಾಡಿದರು. ಪೊಲೀಸರ ಬಗ್ಗೆ ಯಾವುದೇ ಭಯ ಬೇಡ, ಭಯವನ್ನು ಹೋಗಲಾಡಿಸಿ ಪೊಲೀಸರೆಂದರೆ ಜನಸ್ನೇಹಿಗಳು, ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವವರು ಎಂದರು.
ಮುಖ್ಯ ಶಿಕ್ಷಕಿ ಡಿ ವಿಮಲಾಕ್ಷಿ ಮಾತನಾಡಿ, ಕ್ಷೇತ್ರ ಪರಿಚಯ ವಿದ್ಯಾರ್ಥಿಗಳಿಗೆ ತರಗತಿಯ ಹೊರಗಿನ ಪ್ರಾಯೋಗಿಕ ಕಲಿಕೆಗೆ ಸಹಕಾರಿಯಾಗಿದೆ ಎಂದರು. ಎಎಸ್ಐ ಎಸ್ ಕೆ ಜಿಲಾನ್ ಭಾಷಾ ಮಾತನಾಡಿದರು.
40ಕ್ಕೂ ಹೆಚ್ಚು ಶಾಲಾ ಮಕ್ಕಳು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ, ಪೊಲೀಸರ ದೈನಂದಿನ ಕೆಲಸ, ಗಸ್ತು ತಿರುಗುವಿಕೆ ಮತ್ತು ಇತರ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಪೂಜಾರಹಳ್ಳಿಯ ಸೋಲರ ಪ್ಲಾಂಟ್ ಮತ್ತು ಸಾವಯವ ಕೃಷಿಕ ತಿಪ್ಪೇಸ್ವಾಮಿ ಅವರ ತೋಟಕ್ಕೆ ಭೇಟಿನಿಡಿದರು.
ಈ ಸಂದರ್ಭದಲ್ಲಿ ಸಿಬಂದ್ದಿ ತಿಪ್ಪೇರುದ್ರಪ್ಪ, ಸಂದೀಪ್, ಸುರೇಶ್, ಕೊಟ್ರೇಶ್ ಹಾಗೂ ಶಿಕ್ಷಕರಾದ ಬಿ ಎನ್ ಜನಾರ್ದನ, ಎಂ ಕೆ ಭಾರ್ಗವಿ ಇದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

