ಕೂಡ್ಲಿಗಿ: ತಾಲೂಕಿನ ಬಯಲುತುಂಬರಗುದ್ದಿ ಗ್ರಾಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಯ ಅಂಗವಾಗಿ ದಲಿತ ಸಂಘರ್ಷ ಸಮಿತಿಯಿಂದ ಶನಿವಾರ ಅವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಎಸ್ ದುರುಗೇಶ್ ಮಾತನಾಡಿ, ಇಂದಿನ ಭಾರತದಲ್ಲೂ ಸಹ, ಡಾ. ಬಿ.ಆರ್. ಅಂಬೇಡ್ಕರ್ ಅವರ ಬೋಧನೆಗಳು ಆಳವಾದ ಮಹತ್ವವನ್ನು ಹೊಂದಿವೆ. ಸಾಮಾಜಿಕ ಅಸಮಾನತೆಗಳು, ಜಾತಿ ಆಧಾರಿತ ತಾರತಮ್ಯ ಮತ್ತು ಆರ್ಥಿಕ ಅಸಮಾನತೆ ಮುಂದುವರೆದಿದ್ದು, ಅವರ ತತ್ವಗಳನ್ನು ನಮ್ಮ ಕಾಲದ ಸವಾಲುಗಳನ್ನು ಎದುರಿಸಲು ಒಂದು ಮಾರ್ಗಸೂಚಿಯನ್ನಾಗಿ ಮಾಡಿದೆ ಎಂದರು.
ಜಿಲ್ಲಾ ಸಂಘಟನಾ ಸಂಚಾಲಕರಾದ ಡಿ ಎಸ್ ದುರುಗೇಶ್ ಬಿ ಟಿ ಗುದ್ದಿ ಮಾತನಾಡಿ, ಬಾಬಾ ಸಾಹೇಬರ ತತ್ವಗಳು ಸಮಾಜಕ್ಕೆ ದಾರಿ ದೀಪವಾಗಿದೆ. ಅಸ್ಪೃಶ್ಯತೆ, ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಅಚಲ ಹೋರಾಟ ನಡೆಸಿ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಿದ ಮಹಾನ್ ಚೇತನ ಎಂದರು.
ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ನಂದೀಶ್ವರ ದೇವಸ್ಥಾನದ ವರೆಗೂ ಮೆರವಣಿಗೆ ಸಾಗಿ ಪುನಃ ಮೂಲಹ ಸ್ಥಳ ತಲುಪಿತು.
ಮೆರವಣಿಗೆಯುದ್ದಕ್ಕೂ ಡಿಜೆ ಹಾಡಿಗೆ ಯುವಕರು, ಮಹಿಳೆಯರು ನೃತ್ಯ ಮಾಡಿದರು.
ಕೂಡ್ಲಿಗಿ ತಾಲ್ಲೂಕು ಸಂಚಾಲಕರಾದ ಬಡೇಲಡಕು ದುರುಗೇಶ್, ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯರಾದ ಟಿ ಗಂಗಾಧರ್, ಡಿ ಎಮ್ ಈಶ್ವರಪ್ಪ ಸಿದ್ದಾಪುರ, ಲೋಕಿಕೆರೆ ಕರಿಬಸಪ್ಪ, ತಾಲೂಕು ಸಂಘಟನಾ ಸಂಚಾಲಕರಾದ ಚೌಡಾಪುರ ಬಸವರಾಜ್, ಕಾನಾಮಡುಗು ಪಕೀರಪ್ಪ, ಮಾಳೆಹಳ್ಳಿ ಮಂಜಪ್ಪ, ಹೊಸಹಳ್ಳಿ ಕರಿಬಸಪ್ಪ, ಐಗಳ ಮಲ್ಲಾಪುರ ಜಿತೇಂದ್ರ ರಮೇಶ್, ಕೂಡ್ಲಿಗಿ ಹೆಚ್ ಅಜಯ್ ಕುಮಾರ್, ತಾಲೂಕು ಕಾರ್ಯಕಾರಣಿ ಸಮಿತಿ ಸದಸ್ಯರಾದ ಕುಮುತಿ ಯಲ್ಲಪ್ಪ, ಹುಡೇಂ ಮಂಜುನಾಥ, ತಿಪ್ಪೆಹಳ್ಳಿ ರುದ್ರಮುನಿ, ಕುರಿಹಟ್ಟಿ ಮಹಾಂತೇಶ್, ಸಕಲಪುರದಹಟ್ಟಿ ಯಲ್ಲಪ್ಪ, ಮಹೇಶ್, ಹೆಚ್ ಎಂ ಚೌಡಪ್ಪ, ಗ್ರಾಮದ ಪ್ರಮುಖರಾದ ಕೆ ಜಗದೀಶ್, ಎಚ್ ಎಂ ವೀರಭದ್ರಯ್ಯ, ಬಿಕೆ ವೀರಭದ್ರಪ್ಪ, ಕೋಡಿಹಳ್ಳಿ ಸಿದ್ದೇಶ್, ಫೋಟೋ ಅಜಯ್ ಕುಮಾರ್, ಎಚ್ ಎಮ್ ಮಲ್ಲಿಕಾರ್ಜುನಯ್ಯ, ಮೂಲೆಮನೆ ಬಸವರಾಜ್, ಮೂಲೆಮನೆ ನಾಗಭೂಷಣ ಇತರರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

