ಕೂಡ್ಲಿಗಿ; ತಾಲೂಕಿನ ಗುಡೇಕೊಟೆ ಬಳಿಯ ಕಸಾಪುರದ ಬಳಿ ನಿರ್ಮಾಣವಾಗಿರು ರಾಜ್ಯದ ಮೊದಲ ಹುಣಸೆ ಹಾಗೂ ಶೇಂಗಾ ಸಂಸ್ಕರಣ ಘಟಕವನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಲೋಕಾರ್ಪಣೆ ಮಾಡಿದರು.
ಕೂಡ್ಲಿಗಿಯೂ ಅತಿ ಹೆಚ್ಚು ಹುಣಸೆ ಬೆಳೆಯೋ ನಾಡಾಗಿದ್ದು, ತಾಲೂಕು ಸೇರಿದಂತೆ ಸುತ್ತಮುತ್ತಲಿನ ರೈತರಿಗೆ ಘಟಕದಿಂದ ಅನುಕೂಲವಾಗಲಿದೆ.
ರಾಜ್ಯ ಸೇರಿದಂತೆ ಆಂದ್ರಪ್ರದೇಶ, ತೆಲಂಗಾಣ ರೈತರಿಗೂ ಸಹ ಹುಣಸೆ, ಶೇಂಗಾ ಘಟಕ ಅನುಕೂಲವಾಗಲಿದೆ.
ಬಳ್ಳಾರಿ ಸಂಸದ ತುಕಾರಾಂ, ಕೂಡ್ಲಿಗಿ ಶಾಸಕ ಡಾ. ಎನ್ ಟಿ ಶ್ರೀನಿವಾಸ್, ಹರಪನಹಳ್ಳಿ ಶಾಸಕಿ ಎಂಪಿ ಲತಾ ಮಲ್ಲಿಕಾರ್ಜುನ, ಡಿಸಿ ಕವಿತಾ ಮನ್ನಿಕೇರಿ ಸೇರಿದಂತೆ ಇತರರು ಸಾಥ್ ನೀಡಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

