ಹೊಸಪೇಟೆಯ ಎಲ್ಎಫ್ಎಸ್ ಶಾಲೆಯ ಹಾಸ್ಟೆಲ್ ನಲ್ಲಿ ಗ್ಯಾಸ್ ಲೀಕ್ ಆಗಿದ್ದು, ಸಮಯ ಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ.
ಗ್ಯಾಸ್ ಲೀಕ್ ಆಗುತ್ತಿದ್ದಂತೆಯೇ ಶಾಲಾ ಮಕ್ಕಳನ್ನು ಪೊಷಕರು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹೊರ ಹಾಕಿದ್ದಾರೆ. 50- 60 ಶಾಲಾ ಮಕ್ಕಳಿರೋ ಹಾಸ್ಟೆಲ್ ನಲ್ಲಿ ಗ್ಯಾಸ್ ಲೀಕ್ ಆಗಿದೆ.
ಹೊಸಪೇಟೆ ಪಟ್ಟಣ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಷಕರಾದ ಡ್ಯಾನಿಯಲ್ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ನಥಾಲಿಯನ್ ಐ ಸಾಂಗ್ಲಿ ಎಂಬುವರು ಲೀಕೇಜ್ ತಡೆದಿದ್ದಾರೆ.
HP ಗ್ಯಾಸ್ ಕಂಪನಿಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

