ಕೂಡ್ಲಿಗಿ; ತಾಲೂಕಿನ ಕಾನಹೊಸಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಶೇಷ ಹಾಗೂ ವಿಭಿನ್ನವಾಗಿ ಮಂಗಳವಾರ ಆಚರಿಸಲಾಯಿತು.
ಪ್ರಯೋಗಶಾಲಾ ತಾಂತ್ರಿಕ ವಿಭಾಗದ ಅಧಿಕಾರಿ ಸೋಮಶೇಖರ ಕೆ ಆರ್, ಶೈಲಜಾ ಕೆ ಎಂ ದಂಪತಿಗಳು ಆರೋಗ್ಯ ಕೇಂದ್ರಕ್ಕೆ ಹದಿನೈದು ಸ್ವತಂತ್ರ್ಯ ಹೋರಾಟಗಾರರು ಮತ್ತು ವಚನಕಾರರ ಭಾವಚಿತ್ರಗಳನ್ನು ಕೊಡುಗೆಯಾಗಿ ನೀಡುವ ಮೂಲಕ ವಾಲ್ಮೀಕಿ ಮಹರ್ಷಿಯವರ ಜಯಂತುಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ನಂತರ ವೈದ್ಯಾಧಿಕಾರಿ ವಿಶ್ವನಾಥ ಎ ಕೆ ಮಾತನಾಡಿ, ರಾಮಾಯಣದಂತ ಮಹಾಕಾವ್ಯದಂತ ಮಹಾಗ್ರಂಥವನ್ನು ಸಮಾಜಕ್ಕೆ ನೀಡಿದ ಮಹರ್ಷಿ ವಾಲ್ಮೀಕಿಯವರು ವಿಶ್ವಕಂಡ ಮಹಾನ್ ದಾರ್ಶನಿಕ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ಅಧಿಕಾರಿಗಳಾದ ಎಂ.ಬಿ ಭಾರತಿ, ರಮ್ಯಾ, ರಾಘವರೆಡ್ಡಿ, ಶೈಲಾ ಸಿಬ್ಬಂದಿ ಲತಾ, ಸುಮಾ, ಸವಿತಾ, ಸುಧಾ, ರೇಖಾ, ಕೃಷ್ಣಾ ಮಹೇಂದ್ರಕರ್, ರವಿಕುಮಾರ್ , ಉಮಾದೇವಿ, ಶ್ರೀದೇವಿ ಆಶಾ ಕಾರ್ಯಕರ್ತೆಯರು ಭಾಗಿಯಾಗಿದ್ದರು.

