ಕೂಡ್ಲಿಗಿ; ತಾಲೂಕಿನ ಹಾರಕಭಾವಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಮಂಗಳವಾರ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ರಮೇಶ್ ಎಚ್, ಉಪಾಧ್ಯಕ್ಷರಾಗಿ ಗೋಲಾರ ಸಿದ್ದಪ್ಪ ಆಯ್ಕೆಯಾದರು, ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 12 ನಿರ್ದೇಶಕರ ಪೈಕಿ ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಎಚ್, ಉಪಾಧ್ಯಕ್ಷ ಸ್ಥಾನಕ್ಕೆ ಗೋಲಾರ ಸಿದ್ದಪ್ಪ ಹೊರತಾಗಿ ಬೇರೆ ಯಾರು ನಾಮಪತ್ರ ಸಲ್ಲಿಸದೇ ಇದದ್ದರಿಂದ ಚುನಾವಣಾಧಿಕಾರಿ ನಾಗರಾಜ್ ಇಬ್ಬರ ಆಯ್ಕೆಯನ್ನು ಅವಿರೋಧವಾಗಿ ಘೋಷಿಸಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಮಂಜುನಾಥ್ ಕಾರ್ಯನಿರ್ವಹಿಸಿದರು.
ನಿರ್ದೇಶಕರಾದ ಎಸ್ ಜಾತಪ್ಪ, ಪಿ ಅಜಯ, ನಾಗೇಂದ್ರಪ್ಪ, ಸಿ ಈಶ್ವರಪ್ಪ, ತಿಪ್ಪೇಸ್ವಾಮಿ, ಕೊಟ್ರೇಶ್ ಎಸ್, ಹಂಪಣ್ಣ, ಡಿ ಶೃತಿ ಪ್ರಕಾಶ್, ಗೌರಮ್ಮ ಮದನಪ್ಪ , ಮೋಗಪ್ಪ, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಂ ತಿಪ್ಪೇಸ್ವಾಮಿ ಹಾಜರಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೋಟಿಲಿಂಗನಗೌಡ, ಮಾಜಿ ಉಪಾಧ್ಯಕ್ಷ ಡಿ ಶೇಖರಪ್ಪ ಮುಖಂಡರಾದ ರಮೇಶ್ ಗೌಡ, ಟಿ ಜಿ ಮಲ್ಲಿಕಾರ್ಜುನ ಗೌಡ, ಎಂ ಬಿ ಅಯ್ಯನಹಳ್ಳಿ ಅಜ್ಜನಗೌಡ, ಕಾನಹೊಸಹಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಬಿ ಇ ಜಗದೀಶ್, ಶಾಂತಕುಮಾರ್ , ಕೌಲಪ್ಪ, ಈಶ್ವರ ಗೌಡ, ಮಹೇಶ್ ಎಚ್, ಹಳ್ಳಿ ಮನೆ ಸಿದ್ದಲಿಂಗಪ್ಪ ಎಸ್ ಶೇಖರಪ್ಪ ಇತರರಿದ್ದರು.

