ಕೂಡ್ಲಿಗಿ ; ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ಆರಾಧ್ಯ ದೈವ ಗ್ರಾಮ ದೇವತೆ ಶಕ್ತಿ ಮಾರಮ್ಮ ದೇವಿ ರಥೋತ್ಸವ ಗುರುವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಇದಕ್ಕೂ ಮೊದಲು ಗಂಗೆ ಪೂಜೆ ನೇರವೇರಿಸಲಾಯಿತು. ಮಾರಮ್ಮ ದೇವಿಯನ್ನು ಪ್ರತಿಷ್ಠಾಪಿಸಲಾಗಿದ್ದ ಚೌತಿ ಗುಡಿಯ ಮುಂಭಾಗದಲ್ಲಿ ಸಂಜೆ ದೇವಿಯನ್ನು ಮೆರೆಸುವ ಕಾರ್ಯಕ್ರಮ
ಸಂಭ್ರಮದಿಂದ ನಡೆಯಿತು. ರಾತ್ರಿ 11:15 ಕ್ಕೆ ಹೂವಿನ ಹಾರ, ಬಾವುಟಗಳು ಹರಾಜು ನಡೆಯಿತು., ವಿವಿಧ ವರ್ಣದ ಬಟ್ಟೆಗಳಿಂದ ಅಲಂಕರಿಸಲ್ಪಟ್ಟ ರಥದಲ್ಲಿ ಮಾರಮ್ಮ ದೇವಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ನೆರೆದಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಹರಕೆ ತೀರಿಸಿದರು. ದೇವಿಗೆ ಹಣ್ಣು, ಕಾಯಿ, ಬೇವಿನ ಎಸಳು ಮುಂತಾದವುಗಳನ್ನು ಭಕ್ತಿಯಿಂದ ಸಮರ್ಪಿಸಿದರು. ತಮಟೆ, ಉರುಮೆ. ಮುಂತಾದ ಜಾನಪದ ವಾದ್ಯಗಳಿಂದ ಮುಂದೆ ಸಾಗಿದ ರಥವನ್ನು ಸಾವಿರಾರು ಪಾದಗಟ್ಟೆಯವರೆಗೆ ಎಳೆದುಕೊಂಡು ಹೋಗಿ ಮರಳಿ ಬಂದು ನೆಲೆ ನಿಲ್ಲಿಸಿದರು.
ಜಾತ್ರೆಯಲ್ಲಿ ವಿಶೇಷವಾಗಿ ಬಿಟ್ಟ ಪಟಾಕಿಯ ಬಾಣ ಬಿರುಸುಗಳ
ಚಿತ್ತಾಕರ್ಷಣೆ ಬಾನಂಗಳದಲ್ಲಿ ರಂಗು ರಂಗಿನ ಚಿತ್ತಾರ ಮೂಡಿಸಿ ಭಕ್ತ
ಸಮೂಹವನ್ನು ಬೆರಗುಗೊಳಿಸೀತು.
Trending
- ಶ್ರೀ ಮಾರಮ್ಮ ದೇವಿ ಜಾತ್ರೆ ಸಂಪನ್ನ
- ಬದುಕುವ ರೀತಿ ಆದರ್ಶಪ್ರಾಯವಾಗಬೇಕು: ಕಣ್ವಕುಪ್ಪೆ ಶ್ರೀ
- ವಿದ್ಯಾರ್ಥಿಗಳಿಗೆ ಕಾನೂನು ಪಾಠ ಮಾಡಿದ ಪಿಎಸ್ಐ
- ಸ್ವಸ್ಥ ಮಣ್ಣಿನಿಂದಲೇ ಸ್ವಸ್ಥ ಆರೋಗ್ಯ : ಬಂಡ್ರಿ ದುರುಗಪ್ಪ
- ಶ್ರೀಶೈಲ ಪಾದಯಾತ್ರೆ ಹೊರಟ ಭಕ್ತರು
- ಕೂಡ್ಲಿಗಿ ತಹಶೀಲ್ದಾರ್ ಹೆಸರಿನಲ್ಲಿ ನಕಲಿ ಖಾತೆ; ಪ್ರತಿಕ್ರಿಯಿಸದಂತೆ ಮನವಿ
- ಸಂಜೆ 7 ರಿಂದ 9 ರವಗೆ ಟಿವಿ ಫೋನ್ ಬಂದ್; ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಗೆ ಮಹತ್ವದ ಹೆಜ್ಜೆ
- ಮಾರಮ್ಮ ದೇವಿ ರಥದ ಗಾಲಿ ಹೊರ ಹಾಕುವ ಕಾರ್ಯಕ್ಕೆ ಚಾಲನೆ

