ಕೂಡ್ಲಿಗಿ; ದಾನ, ಧರ್ಮ ಪರೋಪಕಾರಿ ಗುಣ ಬೆಳಸಿಕೊಂಡು ಪ್ರತಿಯೊಬ್ಬರು ಸನ್ಮಾರ್ಗದಲ್ಲಿ ನಡೆಯಬೇಕಿದೆ ಎಂದು ಕೇದಾರ ಪೀಠದ ಉತ್ತರಾಧಿಕಾರಿಗಳು ಆದ, ಕಣ್ವಕುಪ್ಪೆ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.
ತಾಲೂಕಿನ ಹಾರಕಭಾವಿ ಗ್ರಾಮದಲ್ಲಿ ಗುರುವಾರ ನಡೆದ ಶ್ರೀ ಚೌಡೇಶ್ವರಿ ಸಮುದಾಯ ಭವನ ಲೋಕಾರ್ಪಣೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ನಡೆದ ಧರ್ಮಸಭೆಯನ್ನುದ್ದೇಶಿ ಅವರು ಆಶೀರ್ವಚನ ನೀಡಿದರು.
ಜನನ, ಮರಣ ಸೇರಿದಂತೆ ಯಾವುದು ಸಹ ನಮ್ಮ ಕೈಯಲ್ಲಿ ಇಲ್ಲ, ಹಾಗಾಗಿ ನಾವು ಬದುಕುವ ಬದುಕು ಆದರ್ಶಪ್ರಾಯವಾಗಬೇಕು, ಜನ್ಮ ಕೊಟ್ಟ ತಾಯಿ ತಂದೆ ಖುಷಿ ಪಡಬೇಕು ಈ ನಿಟ್ಟಿನಲ್ಲಿ ಎಲ್ಲರು ಸಹ ಆದರ್ಶ ರೀತಿಯಿಂದ ಬದುಕಬೇಕು ಎಂದರು.
ವೈಯಕ್ತಿಕ ಪ್ರತಿಷ್ಠೆ, ಸ್ವಾರ್ಥ ಬಿಟ್ಟು ಒಳ್ಳೆಯ ಕಾರ್ಯ ಮಾಡುವವರು ದೇವರಿಗೆ ಸಮಾನರು. ಪುಣ್ಯ ಸಂಪಾದನೆ ಮಾಡುವಾಗ ಜಾತಿ ಧರ್ಮ ಎಲವನ್ನು ಮೀರಿ ಚಿಂತನೆ ಮಾಡಬೇಕು, ಕಷ್ಟದ ಕಾಲದಲ್ಲಿ ನಮ್ಮನ್ನು ಕಾಯುವುದು ನಾವು ಮಾಡಿದ ಪುಣ್ಯ ಸಂಪಾದನೆ ಮಾತ್ರ ಎಂದರು.ಶಾಸಕ ಡಾ ಶ್ರೀನಿವಾಸ್ ಮಾತನಾಡಿ, ಸಮುದಾಯ ಭವನವೂ ರಾಜಕೀಯ ಕಾರ್ಯಕ್ರಮಗಳಿಗೆ ವೇದಿಕೆಯಾಗದೆ, ವಿಹಾಹ ಮಹೋತ್ಸವಗಳ ಮಾಡುವ ಮೂಲಕ ದಂಪತಿಗಳ ಜೀವನ ರೂಪಿಸುವ ವೇದಿಕೆಯಾಗಲಿ ಎಂದರು. ಇಂತಹ ಸಮಾಜಮುಖಿ ಭವನಗಳ ನಿರ್ಮಾಣಕ್ಕೆ ಜಾಗ ಇರುತ್ತೆ, ದುಡ್ಡು ಇರುತ್ತೆ ಆದರೆ ಇಚ್ಚ ಶಕ್ತಿ ಇರಲ್ಲ. ಈ ಗ್ರಾಮದ ಎಲ್ಲ ಜನಾಂಗದವರು ಸೇರಿ ಈ ಭವನ ಮಾಡಿರುವುದು ಖುಷಿಯ ವಿಚಾರವಾಗಿದೆ ಎಂದರು.ಸಂಸದ ಈ ತುಕಾರಾಂ ಮಾತನಾಡಿ, ಕಲ್ಯಾಣ ಮಂಟಪ ನಿರ್ಮಾಣದಿಂದಾಗಿ ಮದುವೆ ಮಾಡುವ ಕುಟುಂಬಗಳ ನೆಮ್ಮದಿಯ ಜತೆಗೆ ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ಬಡವರ ಕಣ್ಣೀರು ಹೊರಿಸುವ ಕೆಲಸವಾಗಬೇಕು ಎಂದರು. ಒಂದು ಪುಟ್ಟ ಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿರುವುದು ಶಾಶ್ವತ ಹಾಗೂ ಶ್ಲಾಘನೀಯ ಎಂದರು.

ನಿವೃತ ಶಿಕ್ಷಕ ಈಶ್ವರ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಚೌಡೇಶ್ವರಿ ಸಮಿತಿ ಅಧ್ಯಕ್ಷ ಕರೆಗೌಡ, ಬಿಡಿಸಿಸಿ ಉಪಾಧ್ಯಕ್ಷ ಐ ಎಂ ದಾರುಕೇಶ್, ಮುಖಂಡರಾದ ಎಸ್ ಶೇಖರಪ್ಪ, ಬಣವಿಕಲು ಯರಿಸ್ವಾಮಿ, ಮಂಜುನಾಥ ಗುಂಡುಮುಣುಗು , ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೋಟಿಲಿಂಗನಗೌಡ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಚ್ ರೇವಣ್ಣ, ಸಂಗೊಳ್ಳಿ ಕೊಟ್ರೇಶ, ಶಿಕ್ಷಕರಾದ ಕುಮಾರಸ್ವಾಮಿ, ಬಸವರಾಜ, ಕರಿಬಸವನಗೌಡ, ಮುಖಂಡರಾದ ಕೆಜಿ ಮಲ್ಲಿಕಾರ್ಜುನ ಗೌಡ , ಹುಲಿಕೆರೆ ರಮೇಶ್ಅ ಗೌಡ, ಅಜ್ಜನಗೌಡ, ಶಾಂತಕುಮಾರ್, ಕರಿಬಸವನಗೌಡ ಸೇರಿದಂತೆ ಅನೇಕರಿದ್ದರು.