ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಟಿ. ಕಲ್ಲಹಳ್ಳಿ,ಮಾಳೇಹಳ್ಳಿ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿರುವ ಘಟನೆ ಶನಿವಾರ ರಾತ್ರಿ 7:30 ರ ವೇಳೆ ನಡೆದಿದೆ.
ಒಮ್ಮೇಲೆ ಧಿಡೀರ್ ಸದ್ದು ಬಂದಿದ್ದು, ಕ್ಷಣಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದು, ಮನೆಯಲಿರುವ ಪಾತ್ರೆ, ತಟ್ಟೆಗಳು ಚಲ್ಲಪಿಲ್ಲಿಯಾಗಿವೆ. ಗಡಿಗೆ ಹೊಂದಿಕೊಂಡಿರುವ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮನಲ್ಲನ ಹೊಳೆ, ಚಿತ್ರದುರ್ಗ ಜಿಲ್ಲೆಯ ತೊರೆ ಕೊಲಮ್ಮನ ಹಳ್ಳಿಯಲ್ಲಿಯೂ ಕಂಪಿಸಿದ ಅನುಭವವಾಗಿದೆ.
ಕೂಡಲೇ ಭಯಗೊಂಡ ಜನತೆ ಮನೆಯಿಂದ ಹೊರಗೆ ಓಡಿ ಬಂದಿದ್ದು, ಯಾವುದೇ ಅನುಹುತ ಸಂಭವಿಸಿಲ್ಲ. ರಿಕ್ಟರ್ ಮಾಪಕದಲ್ಲಿ ಯಾವುದೇ ಅಂಶ ದಾಖಲಾಗಿಲ್ಲ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

