ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪಟ್ಟಣದ ಕಾಳಿದಾಸ ಹಿರಿಯ ಪ್ರಾಥಮಿಕ ಹಾಗೂ ವೈಭವ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ರಾಜ್ಯ ಮಟ್ಟದ ಶಿಕ್ಷಣ ಚೈತನ್ಯ ಪ್ರಶಸ್ತಿಗೆ ಭಾಜನವಾಗಿದ್ದು, ಭಾನುವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.
ವೈಭವ ಶಾಲೆಯ ವಾತಾವರಣ, ಶಿಕ್ಷಣದ ಗುಣಮಟ್ಟ ಹಾಗೂ ಶಿಕ್ಷಕರ ಗುಣಮಟ್ಟವನ್ನು ಆಧರಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಿದ್ದು, ಸ್ವಾರ್ಥ ಅಕಾಡೆಮಿ ಹಾಗೂ ಸೂರ್ಯ ಫೌಂಡೇಶನ್ ವತಿಯಿಂದ ಭಾನುವಾರ, ಬೆಂಗಳೂರಿನ ಶಿಕ್ಷಕರ ಸದನದಲ್ಲಿ ವೈಭವ ವಿದ್ಯಾ ಸಂಸ್ಥೆ ಯ ಶಿಕ್ಷಕ ವೃಂದಕ್ಕೆ ಪ್ರಶಸ್ತಿಯನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಪ್ರಕಾಶಗೌಡ, ಮಲ್ಲೇಶ್, ಕಂಪಳೇಶ್, ಬಸವರಾಜ್, ತಿಪ್ಪೇಸ್ವಾಮಿ, ಮಂಜುನಾಥ, ಹೇಮಂತ್ ಕುಮಾರ್, ನಂದೀಶ್ ಗೌಡ, ಅಪರ್ಣ, ಬಸವರಾಜ್, ಚೌಡಪ್ಪ, ಓಮೇಶ್,ಸೇರಿದಂತೆ ಇತರರಿದ್ದರು.
ನಮ್ಮ ಶಿಕ್ಷಣ ಸಂಸ್ಥೆ ಗೆ ಪ್ರಶಸ್ತಿ ಬಂದಿರುವುದು ತುಂಬಾ ಸಂತಸ ತಂದಿದೆ ಎಂದು ವಿದ್ಯಾ ಸಂಸ್ಥೆ ಯ ಕಾರ್ಯದರ್ಶಿ ಮುರುಳಿಧರ್ ಸಂತಸ ವ್ಯಕ್ತಪಡಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

