ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಸಮೀಪದ ಗಡಿಗ್ರಾಮ ಕಾನಾಮಡುಗು ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಶುಕ್ರವಾರ ವೃದ್ದೆಯೊಬ್ಬರು ವಯೊ ಸಹಜ ಮೃತರಾಗಿದ್ದು, ಅಂತ್ಯ ಸಂಸ್ಕಾರ ಮಾಡಲು ರುದ್ರ ಭೂಮಿಗೆ ತೆರಳಿ ಕುಣಿ ತೆಗೆದ ಸಂದರ್ಭದಲ್ಲಿ ಕುಣಿಯಲ್ಲಿ ನೀರು ತುಂಬಿಕೊಂಡು ಸ್ಮಶಾನ ಜಲಾವೃತವಾಗಿದೆ.
ಕಾನಾಮಡುಗು ಗ್ರಾಮದಲ್ಲಿ 4 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಸುಪ್ರಸಿದ್ಧ ಶರಣಬಸವೇಶ್ವರರ ದಾಸೋಹ ಮಠವು ಇದೇ ಗ್ರಾಮದಲ್ಲಿ ಇದೆ. ಈ ಗ್ರಾಮದಲ್ಲಿ ಸರಿಯಾದ ಸ್ಮಶಾನ ಇಲ್ಲ, ಸದ್ಯ ಎರಡು ಎಕರೆ ಸ್ಮಶಾನ ಭೂಮಿ ಎಂದು ಗುರುತು ಮಾಡಿದ್ದು ಅದು ಕೂಡ ಅತಿಕ್ರಮಣವಾಗಿದೆ ಎನ್ನಲಾಗುತ್ತಿದೆ.
ಕಳೆದ ಎರಡು ವರ್ಷಗಳಿಂದ ಮಳೆ ಜಾಸ್ತಿಯಾಗಿ ಹಾಗೂ ಪಕ್ಕದ ಜಗಳೂರು ತಾಲೂಕಿನ ಅಣಬೂರು ಗ್ರಾಮದ ಕೆರೆಗೆ ನೀರು ಬಂದಿರುವುದರಿಂದ ಸ್ಮಶಾನವೆಲ್ಲ ಜಲಾವೃತವಾಗಿದೆ, ಕೂಡಲೆ ಗ್ರಾಮಕ್ಕೆ ಸೂಕ್ತ ಸ್ಮಶಾಲ ಕಲ್ಪಿಸಿಕೊಡಬೇಕೆಂದು ಗ್ರಾಮದ ದಲಿತ ಸಮುದಾಯದ ಮುಖಂಡರುಗಳಾದ ಪಕ್ಕೀರಪ್ಪ, ದುರುಗಪ್ಪ,ಹನುಮಂತಪ್ಪ,ಗಂಗಪ್ಪ,ಎಂ ಶರಣಪ್ಪ,ನಿಂಗಪ್ಪ, ಮಾಸ್ತಪ್ಪ,ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

