ಕೂಡ್ಲಿಗಿ; ಪ್ರಸುತ್ತ ಸಮಾಜದಲ್ಲಿ ಅಭಿವೃದ್ದಿಗೆ ಮಾರಕವಾಗಿರುವ ಭ್ರಷಾಚಾರದ ಪೀಡಗೂ ಹೆಚ್ಚಾಗಿದೆ. ಅಲ್ಲದೆ, ಸರ್ಕಾರಿ ಕಚೇರಿಗಳಲ್ಲಿ ಆದರ ಸಮಸ್ಯೆಯು ತೀವ್ರವಾಗಿದೆ, ಆ ಪೀಡಗು ನಿಮೂರ್ಲನೆಗಾಗಿ ಸಾರ್ವಜನಿಕರು ಕೈಜೋಡಿಸಬೇಕೆಂದು ಕೇಂದ್ರೀಯ ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯ ಸುದೇಶ್ ಗೋಪಾಲ್ ಮಲಾಜುರೇ ತಿಳಿಸಿದರು.
ಕಾನಹೊಸಹಳ್ಳಿ ಸಮೀಪದ ಚಿಕ್ಕಜೋಗಿಹಳ್ಳಿ ಪಿಎಂಶ್ರೀ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳಿಂದ ಶುಕ್ರವಾರ ನಡೆದ ಭ್ರಷ್ಟಾಚಾರ ವಿಮುಕ್ತ ಸಮಾಜದ ಪರಿಕಲ್ಪನೆಗಾಗಿ ಜಾಗೃತ ಸಪ್ತಾಹ ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡಿದ್ದ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಭ್ರಷ್ಟಾಚಾರ ನಿರ್ಮೂಲನೆ ಮಾಡದಿದ್ದರೆ ಸಶಕ್ತ ಭಾರತ ಕಟ್ಟಲು ಸಾಧ್ಯವಿಲ್ಲ. ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತೆಸೆಯಬೇಕು ಹಾಗಾಗಿ ಸಾರ್ವಜನಿಕರು ಈ ಹೋರಾಟಕ್ಕೆ ಸಹಕಾರ ಇರಬೇಕು ಮತ್ತು ಕಚೇರಿಗಳ ತೆರಳುವ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಅಧಿಕಾರಿಗಳಿಗೆ ಲಂಚ ನೀಡುವುದನ್ನು ಕೈಬಿಡಬೇಕು. ಅದರ ವಿರುದ್ದ ದ್ವನಿ ಎತ್ತಬೇಕೆಂದರು.
ವಿದ್ಯಾಲಯದ ಭಾರತ್ ಸ್ಕೌಟ್ ಗೈಡ್, ಎನ್.ಸಿ.ಸಿ ವಿದ್ಯಾರ್ಥಿಗಳು ಸೇರಿ ರ್ಯಾಲಿ ಮೂಲಕ ಗ್ರಾಪಂ ಕಚೇರಿಗೆ ತೆರಳಿ ಕಾರ್ಯದರ್ಶಿ ಯು.ಎಂ.ಪ್ರಕಾಶಗೆ ಮನವಿ ಸಲ್ಲಿಸಿದರು. ನಂತರ ಅಂಚೆ ಕಚೇರಿ. ಆಸ್ಪತ್ರೆ, ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಉಪಪ್ರಚಾರ್ಯ ಯು.ಎಸ್.ಬಳ್ಳಾರಿ, ಸಂಗೀತ ಶಿಕ್ಷಕರಾದ ಚಂದ್ರಕಾಂತ್ ಇನಾಮದಾರ, ದೈಹಿಕಶಿಕ್ಷಕಿ ಮೃದುಲ ಮೋಹÀನ್, ಪಿ.ದಿವ್ಯ, ಮೊನಾಲ್ರಾಜ್, ವೆಂಕಟೇಶ್ವರಲು, ಗಣೇಶ್ಬಾಬು, ಕಿರಣ್ ಇದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

