ಕೂಡ್ಲಿಗಿ; ತಾಲೂಕಿನ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಭೀಮಣ್ಣ ಗಜಾಪುರ ರಚನೆಯ “24*7 ಅರಣ್ಯ ರಕ್ಷಕ ಭಟ್ರಹಳ್ಳಿ ಗೂಳೆಪ್ಪರ” ಜೀವನ ಚರಿತ್ರೆಯ ಪುಸ್ತಕವನ್ನು ಕೂಡ್ಲಿಗಿಯಲ್ಲಿ ನಾಳೆ ಲೋಕಾರ್ಪಣೆಗೊಳ್ಳಲಿದೆ ಎಂದು ಪುಸ್ತಕ ಲೇಖಕ ಭೀಮಣ್ಣ ಗಜಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು ದಶಕದಿಂದ ಸುಮಾರು 150 ಹೆಕ್ಟ್ ರ್ ಅರಣ್ಯ ಪ್ರದೇಶವನ್ನು ಯಾವುದೇ ಫಾಲಾಪೇಕ್ಷೆ ಇಲ್ಲದೆ ಅನಕ್ಷರಸ್ಥ ಭಟ್ರಹಳ್ಳಿ ಗೂಳೆಪ್ಪ ಅವರ ಜೀವನ ಚರಿತ್ರೆ ಕುರಿತಾದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ವನ್ನು ನಾಳೆ ಬೆಳಿಗ್ಗೆ 10-30 ಗಂಟೆಗೆ ಪಟ್ಟಣದ ಸಂಡೂರು ರಸ್ತೆಯ ಜ್ಞಾನ ಭಾರತಿ ಬಿಇಡಿ ಕಾಲೇಜ್ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಶಿವಾಚಾರ್ಯರು ಹಾಗೂ ಕಾನಾಮಡುಗು ದಾಸೋಹ ಮಠದ ಐಮಡಿ ಶರಣಾರ್ಯರು ಸಾನಿಧ್ಯ ವಹಿಸಲಿದ್ದಾರೆ. ಕೂಡ್ಲಿಗಿ ಶಾಸಕ ಡಾ.ಶ್ರೀನಿವಾಸ್ ಎನ್ ಟಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಡೆಯೂರು ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಕೆ.ಎಂ.ರವಿಕುಮಾರ ವಹಿಸಲಿದ್ದಾರೆ. ಮಾಜಿ ಸಚಿವ ಹಾಗೂ ಮಾಜಿ ಸಂಸದರಾದ ಶ್ರೀ ರಾಮುಲು ಪುಸ್ತಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಹುಬ್ಬಳ್ಳಿ ಆವೃತ್ತಿಯ ಕನ್ನಡಪ್ರಭ ಸ್ಥಾನಿಕ ಸಂಪಾದಕರ ಮಲ್ಲಿಕಾರ್ಜುನ ಸಿದ್ದಣ್ಣವರ್ ಪುಸ್ತಕ ಕುರಿತು ಮಾತನಾಡಲಿದ್ದು, ಲೇಖಕ ಭೀಮಣ್ಣಗಜಾಪುರ ಅವರು ಪ್ರಾಸ್ತವಿಕ ನುಡಿನುಡಿಯಲಿದ್ದಾರೆ. ತಹಶೀಲ್ದಾರ್ ವಿ ಕೆ ನೇತ್ರಾವತಿ, ಡಿ ವೈ ಎಸ್ಪಿ ಮಲ್ಲೇಶ ದೊಡ್ಡಮನಿ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು ಎಂದು ಲೇಖಕ ಭೀಮಣ್ಣ ಗಜಾಪುರ ಅವರು ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ 8123302594, 98869 72975

