ಶಾಲೆ ಬೀಗ ಮುರಿದು ಬ್ಯಾಟರಿಗಳ ಕಳ್ಳತನ ಮಾಡಿರುವ ಘಟನೆ ಹೂವಿನಹಡಗಲಿ ತಾಲೂಕಿನ ಮೀರಾಕೊರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗ್ರಾಮದ ಶರಣಬಸವೇಶ್ವರ ಸರ್ಕಾರಿ ಪ್ರೌಢಶಾಲೆಯ ಬಾಗಿಲು ಮುರಿದು ಕಂಪ್ಯೂಟರ್ ತರಬೇತಿ ಕೊಠಡಿಯಲ್ಲಿದ್ದ 16 ಬ್ಯಾಟರಿಗಳು ಖದೀಮರು ಕಳ್ಳತನ ಮಾಡಿದ್ದಾರೆ.
ಗ್ರಾಮದ ಶಾಲಾ ಆವರಣದಲ್ಲಿ ವಾಯುವಿಹಾರಕ್ಕೆ ಗ್ರಾಮಸ್ಥರು ತೆರಳಿದ ಸಂದರ್ಭದಲ್ಲಿ ಶಾಲೆಯ ಬಾಗಿಲು ಮುರಿದಿರುವುದು ಕಂಡು ಬಂದಿದೆ, ಕಂಪ್ಯೂಟರ್ ತರಬೇತಿ ಕೊಠಡಿಯಲ್ಲಿದ್ದ 16 ಬ್ಯಾಟರಿಗಳಿಗೆ ಸಂಪರ್ಕ ಕಲ್ಪಿಸುವ ತಂತಿಗಳು ತುಂಡಾಗಿ ಬಿದ್ದು ಬ್ಯಾಟರಿಗಳು ಕಣ್ಮರೆಯಾಗಿವೆ. ಇದರಿಂದ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿ ಕ್ಯಾಮರಗಳನ್ನು ಪರಿಶೀಲಿಸಿದಾಗ ಇಬ್ಬರು ಯುವಕರು ಬ್ಯಾಟರಿಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ.

