ಕೂಡ್ಲಿಗಿ: ಇಂದಿನ ಜಗತ್ತಿಗೆ ಕೂಡ ಆಧ್ಯಾತ್ಮಿಕತೆ ಮತ್ತು ಮಾನವೀಯತೆಯ ದಾರಿ ತೋರಿಸುವಂತಹ ವಾಲ್ಮೀಕಿ ಮಹರ್ಷಿಗಳ ಜೀವನ ಸದಾ ಪ್ರೇರಣದಾಯಕ, ಅವರ ಜಯಂತಿಯದು ನಾವೆಲ್ಲರೂ ಜೀವನದ ಆದರ್ಶಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣವೆಂದು ಕೂಡ್ಲಿಗಿ ಶಾಸಕಡಾ. ಶ್ರೀನಿವಾಸ್ ಎನ್.ಟಿ ಹೇಳಿದರು.
ತಾಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದರು, ತಳ ಸಮುದಾಯದಲ್ಲಿ ಹುಟ್ಟಿದ ವಾಲ್ಮೀಕಿ ರಾಮಾಯಣದಂತ ಮಹಾಕಾವ್ಯವನ್ನು ರಚಿಸಿ ಮಹರ್ಷಿಗಳಾದರು, ಸಾಧನೆಗೆ ಜಾತಿ, ಕುಲ, ಧರ್ಮದ ಹಂಗಿಲ್ಲ ಶ್ರದ್ಧೆ ಮತ್ತು ಪರಿಶ್ರಮವಿದ್ದರೆ ಯಾರು ಬೇಕಾದವರು ಸಾಧನೆ ಮಾಡಬಹುದು ಎಂಬುದಕ್ಕೆ ವಾಲ್ಮೀಕಿ ಅವರೆ ನಮಗೆಲ್ಲರಿಗೂ ಆದರ್ಶನ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಿ ಕೆ ನೇತ್ರಾವತಿ, ಪಟ್ಟಣ ಪಂಚಾಯತ್ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ, ವಾಲ್ಮೀಕಿ ಸಣಘದ ಅಧ್ಯಕ್ಷ ಸುರೇಶ್, ಕಂಪ್ಯೂಟರ್ ರಾಘು ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
Trending
- ಶಾಲೆಗಳು ಧಾರ್ಮಿಕ ಕೇಂದ್ರಗಳಾಗಬಾರದು: ಡಾ. ಶ್ರೀನಿವಾಸ್ ಎನ್ ಟಿ
- ಬಾಲಕಿಯರ ವಸತಿ ನಿಲಯಕ್ಕೆ ತಹಶೀಲ್ದಾರ್ ನೇತ್ರಾವತಿ ದಿಢೀರ್ ಭೇಟಿ
- ಕಾನಮಡಗು ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ಸಂಪನ್ನ
- ಕ್ಷೇತ್ರದ ಜನರು ಶಿಕ್ಷಣದಿಂದ ವಂಚಿತರಾಗಬಾರದು
- ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ರಸ್ತೆ ಅಪಘಾತದಲ್ಲಿ ನಿಧನ
- ಅಭಕಾಸ್ ವೇದಿಕ್; ಗಣಿತ ಚಾಂಪಿಯನ್ ಟ್ರೋಫಿ ಪರೀಕ್ಷೆ
- ವೈಭವ ಶಾಲೆಗೆ ರಾಜ್ಯ ಮಟ್ಟದ ಪ್ರಶಸ್ತಿ
- ಕೂಡ್ಲಿಗಿ: ಬೈಕ್ ಡಿಕ್ಕಿ; ಇಬ್ಬರು ಸಾವು

