ಕೂಡ್ಲಿಗಿ: ಕೆರೆಗಳಲ್ಲಿ ಹೂಳೆತುವ ಮೂಲಕ ಪುನಶ್ಚೇತನವು ಪರಿಸರ ಸಮತೋಲನ, ಕೃಷಿ ಬೆಳವಣಿಗೆ ಮತ್ತು ಅಂತರ್ಜಲವನ್ನು ರಕ್ಷಿಸುವ ಅತ್ಯಗತ್ಯ ಪ್ರಕ್ರಿಯೆಯಾಗಿದೆ ಎಂದು ಧ್ರಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಎಚ್ ಡಿ ನವೀನ್ ಕುಮಾರ್ ಹೇಳಿದರು.ತಾಲೂಕಿನ ಬಯಲುತುಂಬರಗುದ್ದಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭೀವೃದ್ಧಿ ಸಂಸ್ಥೆಯಿಂದ ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ಹೊನ್ನಮ್ಮ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕೆರೆಗಳ ಹೂಳೆತ್ತುವುದು, ಒತ್ತುವರಿ ತೆರವು, ಸುತ್ತಲೂ ಗಿಡ ನೆಡುವುದು ಮತ್ತು ಅಂತರ್ಜಲ ವೃದ್ಧಿಯ ಮೂಲಕ ಕೆರೆಗಳಿಗೆ ಕಾಯಕಲ್ಪ ನೀಡಿ, ಜನಜೀವನ ಸುಧಾರಣೆ ಹಾಗೂ ವನ್ಯಜೀವಿಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲಾಗುತ್ತಿದೆ ಎಂದರು.
ಮುಖಂಡರಾದ ಕೆ ಜಗದೀಶ್ ಮಾತನಾಡಿ, ಧರ್ಮಸ್ಥಳ ಸಂಸ್ಥೆಯಿಂದ ಕೆರೆಯಲ್ಲಿ ಹೂಳೆತುವ ಕಾಮಗಾರಿಗೆ ಚಾಲನೆ ನೀಡಿರುವುದು ಸಂತಸದ ಕಾರ್ಯವಾಗಿದೆ, ಎಲ್ಲ ರೀತಿಯಿಂದಲ್ಲೂ ಗ್ರಾಮಸ್ತರ ಸಹಕಾರ ಇರಲಿದೆ ಎಂದರು.
ಈ ಸಂದರ್ಭದಲ್ಲಿ ಕೆರೆ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷರಾದ ಕೆ ಮಹಾದೇವಪ್ಪ, ಅಧ್ಯಕ್ಷ ಜಿ ಎಚ್ ವೀರೇಶ್, ಉಪಾಧ್ಯಕ್ಷರಾದ ಎಚ್ ಎಂ ವೀರಭದ್ರಯ್ಯ, ಡಿ ಎಸ್ ದುರುಗೇಶ್, ಎಂ ವಿ ನಾಗಭೂಷಣ, ಮುಖಂಡರಾದ ಎಚ್ ಎಂ ಮಲ್ಲಿಕಾರ್ಜುನಯ್ಯ, ಎಂ ಬಿ ಬಸವರಾಜ, ಸುಂಕಪ್ಪರ ನಾಗಣ್ಣ, ನಾಗರಾಜ, ಎ ಸಿ ಚನ್ನಬಸಪ್ಪ, ಶಿಕ್ಷಕರಾದ ನಾಗರಾಜ, ಚಿಕ್ಕಣ್ಣ, ಉಡದಳ್ಳಿ ಬಸವರಾಜ, ಕೃಷ್ಣಮೂರ್ತಿ, ಧರ್ಮಸ್ಥಳ ಸಂಸ್ಥೆಯ ಕೃಷಿ ಮೇಲ್ವಿಚಾರಕ ಮಹಾಂತೇಶ್, ಎಂಜಿನಿಯರ ಸತೀಶ್, ವಲಯ ಮೇಲ್ವಿಚಾರಕಿ ಯಶೋಧ, ಸೇವಾ ಪ್ರತಿನಿಧಿ ಸಾಕಮ್ಮ ಇತರರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

