ಕೂಡ್ಲಿಗಿ: ತಾಲೂಕಿನ ರಂಗನಾಥನಹಳ್ಳಿಯಿಂದ ನೂರಾರು ಭಕ್ತರು ಶುಕ್ರವಾರ ಶ್ರೀಶೈಲ ಪಾದಯಾತ್ರೆಗೆ ತೆರಳಿದರು.
ರಂಗನಾಥನಹಳ್ಳಿ, ಬಯಲುತುಂಬರಗುದ್ದಿ ಹಾಗೂ ಬೆಳಕಟ್ಟೆ ಗ್ರಾಮಗಳ ಭಕ್ತರು ಸತತ 14 ವರ್ಷವೂ ಶ್ರೀ ಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಹೊರಟರು. ಆಯಾ ಗ್ರಾಮಗಳ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿಕೊಂಡು ಬಳಿಕ ರಂಗನಾಥನಹಳ್ಳಿ ಗ್ರಾಮದಿಂದ ಬಸ್ ಮೂಲಕ ತೆರಳಿದರು.
ಮಹಾನಂದಿ, ಯಗಂಟಿ ಸೇರಿದಂತೆ ಇತರೇ ದೇವಸ್ಥಾನಗಳ ದರ್ಶನ ಪಡೆದುಕೊಂಡು ನಂತರ ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿ ಕಡಿದಾದ ಗುಡ್ಡಗಳ ನಡುವೇ ಪಾದಯಾತ್ರೆ ಆರಂಭಿಸಿದ್ದಾರೆ. 2 ದಿನಗಳ ನಂತರ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆಯಲ್ಲಿದ್ದಾರೆ.
ಮಹಾ ಶಿವರಾತ್ರಿಗೆ ಶ್ರೀ ಶೈಲದಲ್ಲಿ ಮಹಾರಥೋತ್ಸವ ಜರುಗಲ್ಲಿದ್ದು, ಶಿವರಾತ್ರಿಯ ಈ ಸಂದರ್ಭದಲ್ಲಿ ಪಾದಯಾತ್ರೆ ಮಾಡಿದರೆ ಒಳಿತಾಗಲಿದೆ ಎನ್ನುವ ನಂಬಿಕೆಯಿಂದ ವಿವಿಧ ರೀತಿಯಾಗಿ ಹರಕೆ ಹೊತ್ತು ಈ ಭಾಗದಿಂದಲೂ ಸಹ ಪಾದಯಾತ್ರೆ ತೆರಳಲ್ಲಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

