ಕೂಡ್ಲಿಗಿ: ಇಲ್ಲಿನ ತಹಶೀಲ್ದಾರ್ ನೇತ್ರಾವತಿ ವಿ ಕೆ ಅವರ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ಸೃಷ್ಟಿಸಿದ್ದು, ಅವರ ಫೋನ್ ಸಂಪರ್ಕದಲ್ಲಿರುವವರಿಗೂ ಹಾಗು ಇತರರಿಗೂ ಸಂದೇಶ ಕಳುಹಿಸುತ್ತಿರುವುದು ಬೆಳಕಿಗೆ ಬಂದಿದೆ.

ತಹಶೀಲ್ದಾರ್ ನೇತ್ರಾವತಿ ಅವರ ಡಿಪಿ(ವಾಟ್ಸಾಪ್ ಭಾವಚಿತ್ರ) ಬಳಸಿಕೊಂಡು +84562595170 ಸಂಖ್ಯೆಯಿಂದ ನಕಲಿ ಖಾತೆ ಸೃಷ್ಟಿಸಲಾಗಿದೆ. ಯಾರು ಅದಕ್ಕೆ ಪ್ರತಿಕ್ರಿಯಿಸದಂತೆ ಸ್ವತಃ ತಹಶೀಲ್ದಾರ್ ನೇತ್ರಾವತಿ ವಿ ಕೆ ಅವರೇ ಮನವಿ ಮಾಡಿಕೊಂಡಿದ್ದಾರೆ.
ಸೈಬರ್ ವಂಚಕರು ಈ ರೀತಿಯಾಗಿ ನಕಲಿ ಖಾತೆ ಸೃಷ್ಟಿಸಿ ಕೆಲವರಿಗೆ ಮೆಸೇಜ್ ಮಾಡುತ್ತಿದ್ದು ನನ್ನ ಗಮನಕ್ಕೆ ಬಂದಿದೆ. ಹಣ ಕೇಳುವುದಾಗಿ ಅಥವಾ ಇನ್ನು ಯಾವುದೇ ರೀತಿಯಾಗಿ ಸಂದೇಶ ಬಂದರೆ
ಯಾರು ಅದಕ್ಕೆ ಪ್ರತಿಕ್ರಿಯಿಸಬೇಡಿ ಎಂದು ನೇತ್ರಾವತಿ ವಿ ಕೆ ಅವರು ತಿಳಿಸಿದ್ದಾರೆ.
ಕಳೆದ ವಾರದಲ್ಲಿ ಕೊಟ್ಟೂರು ತಹಶೀಲ್ದಾರ್ ಅಮರೇಶ ಅವರ ಹೆಸರಿನಲ್ಲಿಯೂ ಕೂಡ ನಕಲಿ ಖಾತೆ ಸೃಷ್ಟಿಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿರುವ ಸಂದೇಶ ಕಳುಹಿಸಲಾಗಿತ್ತು ಎನ್ನಲಾಗಿದೆ.
ಐಎಎಸ್ ಕೆಎಎಸ್ ಅಧಿಕಾರಿಗಳೇ ಟಾರ್ಗೆಟ್
ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ಹೆಸರಿನಲ್ಲಿಯೂ ಸಹ ವಾಟ್ಸಾಪ್, ಫೇಸ್ಬುಕ್ ನಕಲಿ ಖಾತೆಗಳು ಸೃಷ್ಟಿಸಲಾಗಿತ್ತು ಅಷ್ಟೇ ಅಲ್ಲದೆ ಸೆಲ್ಬ್ರಟಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಬೆಂಬಲಿಗರು ಹೊಂದಿರುವವರ ಖಾತೆಗಳು ಮತ್ತು ಉನ್ನತ್ತ ಮಟ್ಟದ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

