ಕೂಡ್ಲಿಗಿ: ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಖ್ಯಾತಿ ಪಡೆದ ವಾಜಪೇಯಿ ಅವರು ದೇಶದ ಅಭಿವೃದ್ದಿಯ ಹರಿಕಾರ, ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ದಿ ಎಂದು ಜಿಲ್ಲಾ ಬಿಜೆಪಿ ಮಹಿಳ ಮೋರ್ಚಾ ಕಾರ್ಯದರ್ಶಿ ಹುಲಿಕೆರೆ ಗೀತಾ ಬಣ್ಣಿಸಿದರು.
ತಾಲೂಕಿನ ಕಾನಹೊಸಹಳ್ಳಿಯಲ್ಲಿ ಗುರುವಾರ ನಡೆದ ಅಟಲ್ ಬಿಹಾರಿ ವಾಜಪೇಯಿ ಅವರ 101 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಈ ನಾಡು ಕಂಡ ಅಪರೂಪದ ಜನನಾಯಕ, ಶ್ರೇಷ್ಠ ಸಂಸದೀಯಪಟು, ವಾಗ್ಮಿ, ಕವಿ, ಪ್ರಧಾನಿಯಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದ ವಾಜಪೇಯಿ ಅವರು ತಮ್ಮ ಹಾಸ್ಯಪ್ರಜ್ಞೆ, ಶ್ರೇಷ್ಠ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅಜಾತ ಶತ್ರು ಎಂದೇ ಖ್ಯಾತಿ ಗಳಿಸಿ, ಎಲ್ಲರ ಅಚ್ಚುಮೆಚ್ಚಿನ ನಾಯಕರಾಗಿದ್ದರು ಎಂದರು.
ಈ ಸಂಧರ್ಭದಲ್ಲಿ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಶಾರದಾ ಕುಂಬಾರ್, ನೇತ್ರ ಮಂಜುನಾಥ್ ಮುಖoಡರಾದ ಕೆ ಎಸ್ ವಿಶ್ವನಾಥ್ , ರಾಕೇಶ್ , ವಿರೂಪಾಕ್ಷಪ್ಪ, ಸಿದ್ದೇಶ್, ದಾನೇಶ್, ಶಿವಾನಂದ ಸ್ವಾಮಿ, ಅಂಜಿನಪ್ಪ, ಮಂಜುನಾಥ್,ಜಗದೀಶ್, ಅಜ್ಜಯ್ಯ, ಓ ಮಂಜುನಾಥ್, ಮಹಾಲಿoಗ ಸುನಿಲ್ ಕುಮಾರ್ ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

