ಕೂಡ್ಲಿಗಿ; ವಿಭಾಗದ ಡಿವೈಎಸ್ಪಿ ದೊಡ್ಡಮನಿ ಮಲ್ಲೇಶನಾಯ್ಕ್ ಅವರ ತಾಯಿ ಡಿ.ಲಾಲವ್ವ(85) ಅವರು ಮಂಗಳವಾರ ನಿಧನರಾದರು.ಹಡಗಲಿ ತಾಲೂಕಿನ ಮುದ್ಲಾಪೂರ ಹೊಸ ತಾಂಡಾದ ನಿವಾಸಿಯಾಗಿರುವ ಮೃತರಿಗೆ ಹೂವಿನ ಹಡಗಲಿಯ ಶಿಕ್ಷಕರಾಗಿರುವ ಡಿ.ದುಷ್ಯಾಂತ ನಾಯ್ಕ್ , ಡಿ.ಸುಶೀಲಾ ಬಾಯಿ ಜಿ.ಡಾಕ್ಯಾನಾಯ್ಕ್( ಹೂವಿನ ಹಡಗಲಿಯ ಟಿಎಪಿಎಮ್ ಮಾಜಿ ಅಧ್ಯಕ್ಷರು), ಬಳ್ಳಾರಿ ನಗರದ ಸರಳಾದೇವಿ ಕಾಲೇಜಿನ ಪ್ರಾಚಾರ್ಯರಾದ ದೊಡ್ಡಮನಿ ಹನುಮಂತನಾಯ್ಕ್, ಹೂವಿನಹಡಗಲಿಯಲ್ಲಿ ಪಂಚಾಯಿತಿ ರಾಜ್ ವಿಭಾಗದಲ್ಲಿ ನರೇಗಾ ಸಹಾಯಕ ನಿರ್ದೇಶಕರಾಗಿರುವ ಡಿ.ವೀರಣ್ಣ ನಾಯ್ಕ್, ಕೂಡ್ಲಿಗಿ ಡಿವೈಎಸ್ಪಿ ದೊಡ್ಡಮನಿ ಮಲ್ಲೇಶನಾಯ್ಕ್, ವಿಜಯನಗರ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನಸ್ಟೇಬಲ್ ಆಗಿರುವ ಡಿ.ವಿಜಯಕುಮಾರ, ಬಳ್ಳಾರಿ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನಸ್ಟೇಬಲ್ ಆಗಿರುವ ಡಿ.ಧಾರಾಸಿಂಗ್, ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸುರೇಶ.ಡಿ, ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿರುವ ಡಿ. ಚಿತ್ತರಂಜನ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವಿದೆ.
ಅಂತ್ಯಕ್ರಿಯೆ ಮುದ್ಲಾಪೂರ ಹೊಸ ತಾಂಡಾದಲ್ಲಿ ಸಂಜೆ ನಡೆಯಿತು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

