ಕೂಡ್ಲಿಗಿ: ರೈತರು ಕೃಷಿ ವೆಚ್ಚಗಳನ್ನು ಆದಷ್ಟು ಕಡಿಮೆ ಮಾಡಿಕೊಂಡು ಹೆಚ್ಚು ಆದಾಯಗಳನ್ನು ಪಡೆಯಬಹುದಾದ ಬೆಳೆಗಳತ್ತ ದೃಷ್ಟಿ ಹಾಯಿಸಬೇಕು ಎಂದು ಲೇಖಕ, ಗುಡೇಕೋಟೆ ಠಾಣೆಯ ಹೆಡ್ ಕಾನ್ಸ್ ಟೇಬಲ್ ಸ್ವರೂಪ್ ಕೊಟ್ಟೂರು ಹೇಳಿದರು.
ಶನಿವಾರ ತಾಲ್ಲೂಕಿನ ಗುಡೇಕೋಟೆ ಹೋಬಳಿಯ ಅಪ್ಪೇನಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೂಡ್ಲಿಗಿ ಶಾಖೆಯ ವತಿಯಿಂದ ಅಪ್ಪೇನಹಳ್ಳಿ ಒಕ್ಕೂಟದ ಸದಸ್ಯರಿಗೆ ಹಮ್ಮಿಕೊಂಡಿದ್ದ ಕೃಷಿ ವಿಸ್ತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಆಗಿ ಭಾಗವಹಿಸಿ ಮಾತನಾಡಿದರು. ಇತ್ತೀಚೆಗೆ ಏಕಬೆಳೆ ಪದ್ಧತಿಯ ಅವಲಂಬನೆ ಹೆಚ್ಚಾಗುತ್ತಿದ್ದು, ಇದು ರೈತನ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಿ. ಆಗ ಸಹಜವಾಗಿ ಪರಿಸರದೊಂದಿಗೆ ನಮ್ಮ ಜೀವನವೂ ಸುಸ್ಥಿರತೆ ಸಾಧಿಸಲಿದೆ ಎಂದ ಅವರು,
ಬಹು ಬೆಳೆ, ಅಕ್ಕಡಿ ಸಾಲು, ಬಹು ವಾರ್ಷಿಕ ಬೆಳೆ, ಅರಣ್ಯ ಕೃಷಿ.. ಹೀಗೆ ವೈವಿಧ್ಯಮಯ ಕೃಷಿ ಪದ್ಧತಿಗಳನ್ನು ರೈತರು ಅಳವಡಿಸಿಕೊಳ್ಳಬೇಕು. ಇಲ್ಲಿ ರೋಗ, ಕೀಟ ಬಾಧೆ ವಿರಳ. ಇಳುವರಿಯೂ ಹೆಚ್ಚು. ಅಲ್ಲದೆ ಒಂದರಲ್ಲಿ ನಷ್ಟವಾದರೆ ಮತ್ತೊಂದರಲ್ಲಿ ಆ ನಷ್ಟ, ಕೃಷಿ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಳ್ಳಬಹುದು. ಅತಿವೃಷ್ಟಿ, ಅನಾವೃಷ್ಟಿ, ಇಳುವರಿ, ಧರ ಕುಸಿತ, ಹವಮಾನ ವೈಪರಿತ್ಯ. ಇವು ಇಂದು ರೈತರು ಎದುರಿಸುತ್ತಿರುವ ಬಹು ಮುಖ್ಯ ಸವಾಲುಗಳು. ಇದಕ್ಕೆಲ್ಲ ಬರ ನಿರೋಧಕ ಬೆಳೆಗಳನ್ನು ಅದರಲ್ಲೂ ಸಿರಿ ಧಾನ್ಯಗಳನ್ನು ಹೆಚ್ಚು ಹೆಚ್ಚು ಬೆಳೆಯುವುದೊಂದೇ ಪರಿಹಾರ. ಸಿರಿಧಾನ್ಯಗಳನ್ನು ನೇರವಾಗಿ ಇಲ್ಲವೆ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಬಹುದು. ನೀವೇ ಸ್ವತಃ ಮಾರುಕಟ್ಟೆ ಸೃಷ್ಟಿಸಿಕೊಂಡು, ಇವುಗಳ ಬೆಲೆಗಳನ್ನು ನೀವೇ ನಿರ್ಧರಿಸಲು ಅವಕಾಶವಿದೆ. ಇಂತಹ ಚಿಂತನೆಗಳಿಗೆ ರೈತರು ತೆರೆದುಕೊಳ್ಳಬೇಕು. ಅದು ನಿಮ್ಮ ಶ್ರಮ, ಸಮಯ, ತಾಳ್ಮೆ ಕೇಳುತ್ತದೆ ಎಂದರು.
ಯೋಜನೆಯ ತಾಲ್ಲೂಕು ಕೃಷಿ ಮೇಲ್ವಿಚಾರಕರಾದ ಮಹಾಲಿಂಗಯ್ಯ ಗ್ರಾಮಾಭಿವೃದ್ಧಿ ಯೋಜನೆಯ ಸಾಮಜಮುಖಿ ಕೆಲಸಗಳು, ಲಭ್ಯ ಸೌಲಭ್ಯಗಳು ಹಾಗೆ ಸಂಘದ ಸಾಲಗಳ ಸದ್ಭಳಕೆ ಕುರಿತು ಮಾತನಾಡಿದರು.
ಈ ವೇಳೆ ಒಕ್ಕೂಟದ ಉಪಾಧ್ಯಕ್ಷರಾದ ಎ.ಜಿ ನುಂಕೇಶ್, ಕೋಶಾಧಿಕಾರಿ ಜಿ.ವಿ ನಾಗರಾಜ, ಜಂಟಿ ಕಾರ್ಯದರ್ಶಿ ಮೂಗಮ್ಮ, ಕಾರ್ಯದರ್ಶಿ ಜ್ಯೋತಿ, ಸೇವಾ ಪ್ರತಿನಿಧಿ ವಿಶ್ವನಾಥ ಸೇರಿದಂತೆ ಒಕ್ಕೂಟದ ಸದಸ್ಯರು ಹಾಜರಿದ್ದರು.
Trending
- ಗುಡೇಕೋಟೆ ಒನಕೆ ಓಬವ್ವ ಉತ್ಸವ: ಕಲಾವಿದರಿಂದ ಅರ್ಜಿ ಆಹ್ವಾನ
- ನಾಡು ಕಂಡ ಅಪರೂಪದ ಜನನಾಯಕ ವಾಜಪೇಯಿ
- ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿಗೆ ಮಾತೃ ವಿಯೋಗ
- ರೈತರು ಕಡಿಮೆ ವೆಚ್ಚ ಮಾಡಿ, ಹೆಚ್ಚು ಆದಾಯ ಬರುವ ಬೆಳೆಗಳತ್ತ ಗಮನಹರಿಸಿ
- ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮೈತ್ರಿ
- ಕಾ ನಿ ಪ ತಾಲೂಕು ಅಧ್ಯಕ್ಷರಾಗಿ ಹುಡೆಂ ಕೃಷ್ಣಮೂರ್ತಿ ಆಯ್ಕೆ
- ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ
- ತಲೆಯ ಮೇಲೆ ಲಾರಿ ಹರಿದು ವ್ಯಕ್ತಿ ಸಾವು

