ಕೂಡ್ಲಿಗಿ ; ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾಗಿ ಹುಡೆಂ ಕೃಷ್ಣಮೂರ್ತಿ ಚುನಾವಣಾ ಮೂಲಕ ಆಯ್ಕೆಯಾದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹುಡೆಂ ಕೃಷ್ಣಮೂರ್ತಿ, ಮಂಜು ಮಯೂರ ಇಬ್ಬರು ನಾಮಪತ್ರ ಸಲ್ಲಿಸಿದ್ದರು. 22 ಮತಗಳ ಪೈಕಿ 12 ಮತಗಳನ್ನು ಪಡೆದು ಹುಡೆಂ ಕೃಷ್ಣಮೂರ್ತಿ ಚುನಾಯಿತರಾದರು.
ಉಪಾಧ್ಯಕ್ಷರಾಗಿ ಎ. ಎಂ ಸೋಮಶೇಖರ, ಸುನೀಲ್ ಗೌಡ್ರು, ಪ್ರಧಾನ ಕಾರ್ಯದರ್ಶಿಯಾಗಿ ಎಚ್ ವೀರಣ್ಣ, ಖಜಾಂಜಿಯಾಗಿ ನಾಗರಾಜ್ ಭರಮಪ್ಪನವರ್ , ಕಾರ್ಯದರ್ಶಿಯಾಗಿ ಅಂಗಡಿ ವೀರೇಶ್ ಆಯ್ಕೆಯಾದರು.
ಬೆಳ್ಳಗೆ 10:30ಕ್ಕೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಜಿಲ್ಲಾ ಸಮಿತಿ ಪ್ರಯತ್ನಿಸಿತು, ಒಮ್ಮತ ಮೂಡದ ಹೀನೆಲ್ಲೆಯಲ್ಲಿ ಚುನಾವಣ ಘೋಷಣೆಯಾಯಿತು.
ಜಿಲ್ಲಾ ಅಧ್ಯಕ್ಷ ಸತ್ಯನಾರಾಯಣ, ರಾಜ್ಯ ಸಮಿತಿ ಸದಸ್ಯ ವೆಂಕೋಬಿ ನಾಯಕ, ಜಿಲ್ಲಾ ಉಪಾಧ್ಯಕ್ಷರಾದ ಉಜ್ಜಿನಿ ರುದ್ರಪ್ಪ, ಸಿ ಕೆ ನಾಗರಾಜ, ಪ್ರಧಾನ ಕಾರ್ಯದರ್ಶಿ ಈ ನಾಡು ವೆಂಕಟೇಶ್, ಕಾರ್ಯದರ್ಶಿಗಳಾದ ಕೆ ಸುರೇಶ್ ಚವಾಣ್, ಸಂಜಯ್ ಚುನಾವಣಾ ನಡೆಸಿಕೊಟ್ಟರು.
ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಎಲ್ಲಾ ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತರಾದ ಭೀಮಣ್ಣ ಗಜಾಪುರ, ಡಿ ಎಂ ಈಶ್ವರಪ್ಪ ಸಿದ್ದಾಪುರ, ನಿವೃತ್ತ ಶಿಶ್ಕ್ಷಕರಾದ ಶರಣ್ಣಪ್ಪ, ಶಾಮ ಸುಂದರ್ ಸಪಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರ ಮಾಸಾಶನ ಸಮಿತಿ ಮಾಜಿ ಸದಸ್ಯ ಡಿ ಒ ಮುರಾರ್ಜಿ, ಬಿಜೆಪಿ ಮುಖಂಡರಾದ ರೇಖಾ ಮಲ್ಲಿಕಾರ್ಜುನ್, ಮಾರೇಶ್ ಇತರರು ಅಭಿನಂದಿಸಿದರು.

