ಕೂಡ್ಲಿಗಿ; ತಾಲೂಕಿನ ಕಾನಹೊಸಹಳ್ಳಿ ಪಟ್ಟಣದಲ್ಲಿ ಲಾರಿ ಹರಿದು ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಪಟ್ಟಣದ ಹುಲಿಕೆರೆ ರಸ್ತೆಯಲ್ಲಿ ರಸ್ತೆ ಪಕ್ಕದಲ್ಲಿ ನಡೆದು ಬರುತ್ತಿದ್ದ ವ್ಯಕ್ತಿಯ ತಲೆಯ ಮೇಲೆ ಲಾರಿಯ ಹಿಂಬದಿ ಗಾಲಿ ಹರಿದಿದ್ದು, ತಲೆಯ ಭಾಗ ಪೂರ್ತಿಯಾಗಿ ಗುರುತು ಸಿಗದ ರೀತಿಯಾಗಿದೆ.
ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು, ವ್ಯಕ್ತಿಯ ಗುರುತು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ಪಿಎಸ್ಐ ಸಿದ್ದರಾಮಪ್ಪ ಬಿದರಾಣಿ ಅವರು ಮೃತ ದೇಹವನ್ನು ಸ್ವತಃ ಅವರೇ ಗೂಡ್ಸ್ ವಾಹನಕ್ಕೆ ಹಾಕುವ ಮೂಲಕ ಮಾನವೀಯತೆ ಮೆರೆದರು.
ಕಾನಹೊಸಹಳ್ಳಿಯ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಮೃತ ದೇಹ ಇರಸಲಾಗಿದೆ. ಮತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

