ಕೂಡ್ಲಿಗಿ ತಾಲೂಕಿನ ಬಯಲುತುಂಬರಗುದ್ದಿ ಗ್ರಾಮದ ಆಯುಷ್ಮಾನ್ ಆರೋಗ್ಯಕೇಂದ್ರದಿಂದ “ಆಯುಷ್ಮಾನ್ ಅರೋಗ್ಯ ಮಂದಿರದಲ್ಲಿ ಆರೋಗ್ಯ ಶಿಬಿರ” ಯೋಜನೆಯಡಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಲಾಯಿತು.
ಮದುಮೇಹ, ರಕ್ತದೊತ್ತಡ, ಕ್ಷಯರೋಗ, ಕ್ಯಾನ್ಸರ್ ಕಾಯಿಲೆ ಸ್ಕ್ರೀನಿಂಗ್ ಮತ್ತು ಮುಂಜಾಗ್ರತಾ ಮಾಹಿತಿ, ಅನಿಮಿಯಾ ತಪಾಸಣೆ ಹಾಗೂ ಆರೋಗ್ಯ ಶಿಕ್ಷಣದ ಜತೆಗೆ ಉಚಿತ ಔಷಧ ವಿತರಣೆ ಮಾಡಲಾಯಿತು. ನಂತರ ಕೇಂದ್ರದಲ್ಲಿ ದೊರೆಯುವ ಸೇವೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸಮುದಾಯ ಆರೋಗ್ಯಧಿಕಾರಿ ನೀಲಾವತಿ ಎಸ್ ಮಾತನಾಡಿ, ಆಯುಷ್ಮಾನ್ ಆರೋಗ್ಯ ಕೇಂದ್ರದಿಂದ ಆರೋಗ್ಯ ತಪಾಸಣಾ ಮಾಡಿ ಕೆಲೆ ಕಾಯಿಲೆಗಳಿಗೆ ಸ್ಥಳದಲೇ ಔಷಧಿ ವಿತರಿಸಲಾಗುತ್ತಿದ್ದು ಜತೆಗೆ ನಮ್ಮ ಕೇಂದ್ರದಲ್ಲಿ ದೊರೆಯುವ ಔಷಧಿ ಮತ್ತು ಸೇವೆಗಳನ್ನು ಜನತೆ ಸದುಪಯೋಗ ಪಡೆಸಿಕೊಳ್ಳಬೇಕಿದೆ ಎಂದ ಅವರು, ಇಲ್ಲಿ ತಪಾಸಣಾ ವೇಳೆ ಗಂಭೀರ ಕಾಯಿಲೆಗಳು ಕಂಡು ಬಂದಲ್ಲಿ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಾದ ಗೀತಾ, ಶಿವಗಂಗ, ವೀಣಾ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

